ಹಾವೇರಿ

ಉದಾತ್ತ ಗುರಿಯೊಂದಿಗೆ ಮುನ್ನಡೆಯಿರಿ: ಬೆನ್ನೂರ

Published On :


ಬ್ಯಾಡಗಿ: ಮೌಲ್ಯಧಾರಿತ ಶಿಕ್ಷಣವಿಲ್ಲದೆ ಶೈಕ್ಷಣಿಕ ವ್ಯವಸ್ಥೆ ನಾವಿಕನಿಲ್ಲದ ದೋಣಿಯಂತಾಗಿದೆ. ಉದಾತ್ತ ಗುರಿಯೊಂದಿಗೆ ಯುವಕರು ಮುನ್ನಡೆಯಬೇಕೆಂದು ಹಾವೇರಿಯ ಜಿ.ಎಚ್. ಕಾಲೇಜಿನ ಪ್ರಾಚಾರ್ಯ ಡಾ೤ ಬೆನ್ನೂರ ಹೇಳಿದರು. ಮೋಟೆಬೆನ್ನೂರ ಗ್ರಾಮದ ಬಳ್ಳಾರಿ ರುದ್ರಪ್ಪ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು, ಆಧುನಿಕತೆಯಲ್ಲಿ ಮಾನವೀಯ ಸಂಬಂಧ ಹಾಗೂ ಮೌಲ್ಯಗಳು ಮಾಯವಾಗುತ್ತಿವೆ. ಪಾಲಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸುವುದು ಅತ್ಯಗತ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಗ್ರಾಮಾಂತರ ಪ್ರದೇಶಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ಉದ್ದೇಶದಿಂದ ಬಳ್ಳಾರಿ ಸಹೋದರರು ಗ್ರಾಮದಲ್ಲಿ ಶಿಕ್ಷಣ ಸಂ ಸ್ಥೆಯನ್ನು ಹುಟ್ಟುಹಾಕಿದ್ದು ಶ್ಲಾಘನೀಯ. ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕಲ್ಪಿಸಿದಾಗ ಮಾತ್ರ ಅವರು ಸ್ಪರ್ಧಾತ್ಮಕವಾಗಿ ಯಶಸ್ವಿಯಾಗಲು ಸಾಧ್ಯ ಎಂದರು. ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ೤ ಎಸ್.ಜಿ. ವೈದ್ಯ, ತಾಪಂ ಮಾಜಿ ಅಧ್ಯಕ್ಷ ಜಯಣ್ಣ ಮಲ್ಲಿಗಾರ, ನಾಗರಾಜ ಬಳ್ಳಾರಿ, ಚಂದ್ರಣ್ಣ ಮುಚ್ಚಟ್ಟಿ, ಡಾ೤ ಪ್ರೇಮಾನಂದ ಲಕ್ಕಣ್ಣನವರ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ರಾಮಣ್ಣ ಉಕ್ಕುಂದ, ಶಂಕರಗೌಡ ಪಾಟೀಲ, ನಾಗಣ್ಣ ಬಣಕಾರ, ಬಸಣ್ಣ ಚೆನ್ನಗೌಡ್ರ, ಷಣ್ಮುಖಪ್ಪ ಬಳ್ಳಾರಿ, ಚನ್ನವೀರಪ್ಪ ಬಳ್ಳಾರಿ, ಸಿ.ಸಿ. ಪ್ರಭುಗೌಡ್ರ, ಪ್ರಾಚಾರ್ಯ ಪ್ರಗತಿ ಕಿರಣ ಇದ್ದರು. ಗೋವಿಂದ ಲಮಾಣಿ ಪ್ರಾರ್ಥಿಸಿದರು. ಆರ್.ವಿ. ಚೆನ್ನಕೋಟಿಮಠ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.