ಕುಂಚಿಟಿಗ ಸಮಾವೇಶಕ್ಕೆ ಶ್ರೀಗಳಿಂದ ಆಹ್ವಾನ
ಹಾನಗಲ್ಲ: ಹೊಸದುರ್ಗದ ಶಾಂತವೀರ ಮಹಾಸ್ವಾಮೀಜಿ ತಾಲೂಕಿನ ವಿವಿಧ ಸಮಾಜಗಳ ಮುಖಂಡರನ್ನು ಭೇಟಿ ಮಾಡಿ, ಪಟ್ಟಣದಲ್ಲಿ ಫೆ. 17ರಂದು ನಡೆಯಲಿರುವ ಕುಂಚಿಟಿಗ ಸಮಾಜದ ರಾಜ್ಯ ಸಮಾವೇಶಕ್ಕೆ ಆಹ್ವಾನಿಸಿದರು. ಗುರುವಾರ ತಾಲೂಕಿನ ಕಂಚಿನೆಗಳೂರು, ಅಕ್ಕಿಆಲೂರು, ಬ್ಯಾತನಾಳ, ಯಳವಟ್ಟಿ, ಯಲಿವಾಳ ಹಾಗೂ ಲಕ್ಷಿಪುರ ಗ್ರಾಮಗಳಿಗೆ ಸ್ವಾಮೀಜಿ ಭೇಟಿ ನೀಡಿದರು. ಅನಂತರ ಹಾನಗಲ್ಲ ನಗರಕ್ಕೆ ಆಗಮಿಸಿದ ಶ್ರೀಗಳನ್ನು ಕುಂಚಿಟಿಗ (ಕಮಾಟಿ) ಸಮಾಜ ಬಾಂಧವರು ಮೆರವಣಿಗೆ ಮೂಲಕ ಬರಮಾಡಿಕೊಂಡರು. ಕುಂಚಿಟಿಗ ಸಭಾಭವನದಲ್ಲಿ ಸಮಾವೇಶದ ಪೂರ್ವ ಸಿದ್ಧತೆಗಳ ಕುರಿತು ಶ್ರೀಗಳು ಚರ್ಚಿಸಿದರು. ತಾಲೂಕು ಕ್ರೀಡಾಂಗಣದಲ್ಲಿ ಸುಸಜ್ಜಿತ ವೇದಿಕೆ ನಿರ್ಮಾಣ, ಸಮಾವೇಶಕ್ಕೆ ಗಣ್ಯರನ್ನು ಸ್ವಾಗತಿಸುವುದು, ಊಟ, ವಸತಿ ಸಭಾ ಕಾರ್ಯಕ್ರಮಗಳ ಸುವ್ಯವಸ್ಥೆಗಾಗಿ ಸಮಿತಿಗಳನ್ನು ರಚಿಸುವುದು, ಸ್ಮರಣ ಸಂಚಿಕೆ ಬಿಡುಗಡೆ, ಸಮಾವೇಶದ ಯಶಸ್ಸಿಗೆ ಸಂಪನ್ಮೂಲ ಕ್ರೋಡೀಕರಣ ಕುರಿತು ಚರ್ಚಿಸಲಾಯಿತು. ಕುಂಚಿಟಿಗ ಸಮಾಜದ ಜಿಲ್ಲಾಧ್ಯಕ್ಷ ಗಣೇಶ ಮೂಡ್ಲಿಯವರ, ತಾಲೂಕಾಧ್ಯಕ್ಷ ಮಂಜುನಾಥ ನಾಗಜ್ಜನವರ, ದೇವೇಂದ್ರಪ್ಪ ಮೂಡ್ಲಿಯವರ, ಹನುಮಂತಪ್ಪ ನಾಗಜ್ಜನವರ, ಅಶೋಕ ಸಣ್ಣವೀರಪ್ಪನವರ, ದಯಾನಂದ ನಾಗಜ್ಜನವರ, ಭೋಜಣ್ಣ ಲಂಗಟಿ, ಚಂದ್ರು ಉಗ್ರಣ್ಣನವರ, ಹನುಮಂತಪ್ಪ ಬಮ್ಮನಹಳ್ಳಿ, ಕೃಷ್ಣ ಹುನುಗನಹಳ್ಳಿ, ರಾಮಣ್ಣ ನಾಗಜ್ಜನವರ, ನಾಗೇಂದ್ರ ಬಮ್ಮನಹಳ್ಳಿ, ಮಾಲತೇಶ ಬೆಂಚಳ್ಳಿ, ಗೋಪಾಲ ಗಿರಿಯಣ್ಣನವರ, ಪ್ರಭು ಹಳ್ಳಕ್ಕನವರ, ಕರಬಸು ಗಿರಿಯಣ್ಣನವರ, ಎನ್.ಎಂ. ಕಠಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

