ಹಾವೇರಿ

ಪೈಪೋಟಿಯಲ್ಲಿ ಜವಾಬ್ದಾರಿ ಮರೆತರೆ ಧಕ್ಕೆ

Published On :





ಹೊಸರಿತ್ತಿ: ಸುದ್ದಿ ನೀಡುವ ಪೈಪೋಟಿಯಲ್ಲಿ ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿ ಮರೆತರೆ ಸಮಾಜದಲ್ಲಾಗುವ ಎಲ್ಲ ಪರಿಣಾಮಗಳಿಗೆ ನೈತಿಕ ಹೊಣೆ ಹೊರಬೇಕಾಗುತ್ತದೆ ಎಂದು ಪತ್ರಕರ್ತ ವಿಜಯ ಹೂಗಾರ ಪ್ರತಿಪಾದಿಸಿದರು.
ಸಂಕೀರ್ಣಗೋಷ್ಠಿಯಲ್ಲಿ ಮಾಧ್ಯಮ ಹಾಗೂ ಸಾಮಾಜಿಕ ಜವಾಬ್ದಾರಿ ವಿಷಯದ ಕುರಿತು ಮಾತನಾಡಿದರು.
ಮಾಧ್ಯಮಗಳನ್ನು ಸಂವಿಧಾನದ 4ನೇ ಅಂಗವಾಗಿ ಪರಿಗಣಿಸುವ ಸಂದರ್ಭಗಳಲ್ಲಿ ಮಾಧ್ಯಮಗಳ ಮೇಲೆ ಜವಾ ಬ್ದಾರಿಗಳು ಹೆಚ್ಚಾಗಿವೆ. ಸಮಾಜದಲ್ಲಿ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.
ಪ್ರಜಾಸತ್ತೆ ಉಳಿವಿಗೆ ಶ್ರಮಿಸಿ: ವಸ್ತುನಿಷ್ಠ ವರದಿಗಳನ್ನು ಮಾಡುವ ಮೂಲಕ ದೇಶದಲ್ಲಿ ಪ್ರಜಾಸತ್ತೆ ಉಳಿಸುವಲ್ಲಿ ಮಾಧ್ಯಮಗಳು ಪ್ರಯತ್ನಿಸಬೇಕು. ಭವಿಷ್ಯದ ಚಿಂತನೆಯೊಂದಿಗೆ ಪ್ರಸ್ತುತ ವಿಷಯಗಳನ್ನು ವಿಶ್ಲೇಷಿಸುವುದು ಪತ್ರಿಕೆಗಳ ಜವಾಬ್ದಾರಿಯಾಗಿದೆ ಎಂದರು.
ವೈಭವೀಕರಿಸುವ ಅಗತ್ಯವಿಲ್ಲ: ಸಮಾಜಕ್ಕೆ ಮಾರಕವಾಗುವ ಬಹುತೇಕ ವಿಷಯಗಳ ಬಗ್ಗೆ ಇಂದು ವೈಭವೀಕರಿಸುವ ಕೆಲಸ ಮಾಧ್ಯಮಗಳಿಂದಾಗುತ್ತಿದೆ. ವರದಿಯನ್ನು ಪದೇ ಪದೇ ಪ್ರಕಟಿಸುವುದರಿಂದ, ಕತ್ತಲೆ ಜಗತ್ತಿನ ವಿಷಯವನ್ನು ಬೆಳಕಿನಲ್ಲಿ ತೋರಿಸಿದಂತಾಗುತ್ತದೆ ಎಂದರು.
ಕಾನೂನು ವಿಶ್ಲೇಷಣೆ ವರದಿ ಬೇಕು: ರ್ಲೆಂಡ್‌ನಲ್ಲಿ ಮೃತಪಟ್ಟ ಸವಿತಾ ಹಾಲಪ್ಪನವರ ಪ್ರಕರಣವನ್ನು ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಇಂತಹ ಘಟನೆಗಳನ್ನು ನಡೆಯದಿರಲಿ ಎಂದು ಆ ದೇಶದ ಕಾನೂನಿಗೆ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.