ಸಾಹಿತ್ಯಾಸಕ್ತರಿಗೆ ಬೇಸರ, ವ್ಯಾಪಾರಿಗಳಿಗೆ ನಿರಾಸೆ
ಗುದ್ಲೆಪ್ಪ ಹಳ್ಳಿಕೇರಿ ವೇದಿಕೆ, ಹೊಸರಿತ್ತಿ, ಜ.31
ಜಿಲ್ಲಾ ಸಾಹಿತ್ಯ ಸಮ್ಮೇಳನ ದಂಗವಾಗಿ ಕೆಲ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಮುಖ್ಯ ವೇದಿಕೆಯ ಎಡಭಾಗದಲ್ಲಿ ಸಾಲಾಗಿ ಮಳಿಗೆ ಆರಂಭಿಸಲಾಗಿದ್ದು, ಆಯುರ್ವೇದ ಔಷಧಿ ಸೇರಿದಂತೆ ವಿವಿಧ ರೀತಿಯ ಪುಸ್ತಕಗಳ ಮಾರಾಟ ಮಳಿಗೆಗಳು ಆರಂಭವಾಗಿವೆ.
ಪುಸ್ತಕ ಮಳಿಗೆ: ಪ್ರಸಕ್ತ ವರ್ಷದ ಸಾಹಿತ್ಯ ಸಮ್ಮೇಳನದಲ್ಲಿ 5 ಪುಸ್ತಕ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಕನ್ನಡ ಸಾಹಿತ್ಯ, ಐತಿಹಾಸಿಕ, ವೈದ್ಯಕೀಯ, ಕಲೆ ಮತ್ತು ಸಂಸ್ಕೃತಿ, ಜನಪದ, ರಂಗೋಲಿ, ರಾಷ್ಟ್ರೀಯ ನಾಯಕರ ಜೀವನ ಚರಿತ್ರೆ ಸೇರಿದಂತೆ ನೂರಾರು ನಮೂನೆ ಪುಸ್ತಕಗಳು ಮಳಿಗೆಗಳಲ್ಲಿ ಮಾರಾಟಕ್ಕೆ ಕಂಡು ಬಂದವು.
ದುಬಾರಿ ಎನಿಸುತಿದೆ: ಪುಸ್ತಕಗಳ ಬೆಲೆ ಕೊಂಚ ದುಬಾರಿಯಾಗಿದೆ ಎಂಬ ಮಾತುಗಳು ಸಾಹಿತ್ಯಾಸಕ್ತರಿಂದ ಕೇಳಿ ಬಂದವು. ಹೀಗಾಗಿ ಪುಸ್ತಕಗಳನ್ನು ತೆಗೆದುಕೊಳ್ಳಬೇಕೆಂಬ ಮನಸ್ಸಿದ್ದರೂ ಬಹಳಷ್ಟು ಜನ ಮುಖಬೆಲೆ ಕೇಳಿ ಮುಂದೆ ಸಾಗುತ್ತಿದ್ದ ದೃಶ್ಯಗಳು ಕಂಡು ಬಂದವು.
ವ್ಯಾಪಾರಿಗಳಿಗೆ ಬೇಸರ: ಅತೀ ಉತ್ಸಾಹದಿಂದ ಮಳಿಗೆ ಆರಂಭಿಸಿದ ವ್ಯಾಪಾರಿಗಳಿಗೆ ಪ್ರಸಕ್ತ ವರ್ಷದ ಸಾಹಿತ್ಯ ಸಮ್ಮೇಳನ ಬಹುಶಃ ನಿರಾಸೆಯೇ ದುಡಿಮೆ ಎಂಬಂತಾಗಿದೆ. ಕೆಲವರು ತಮ್ಮ ಬಳಿ ಇಲ್ಲದಿರುವ ಪುಸ್ತಕಗಳನ್ನು ಕೇಳುತ್ತಿದ್ದರೆ, ಇನ್ನೂ ಕೆಲವರು ಸಂಪಾದಕರ ಹೆಸರಿನ ಮೇಲೆ ಪುಸ್ತಕಗಳನ್ನು ಕೇಳುತ್ತಿರುವುದು ಸಾಮಾನ್ಯವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಶೇ. 50ರಷ್ಟು ಪುಸ್ತಕಗಳು ಮಾರಾಟವಾಗಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಆಗಮಿಸದಿರುವುದು ಒಂದು ಕಾರಣವಾಗಿರಬಹುದು.
ಕೊಳ್ಳುವವರಿಲ್ಲ: ಪುಸ್ತಕ ಮಳಿಗೆಗಳ ವ್ಯಾಪಾರಿಗಳು ಮಾರಾಟಕ್ಕೆ ಮುಂದಾಗಿದ್ದರೂ ಸಹ ಕೊಳ್ಳುವವರ ಸಂಖ್ಯೆ ಅಷ್ಟಾಗಿ ಕಂಡು ಬರಲಿಲ್ಲ. ಕೆಲವರು ಮಾತ್ರ ಪುಸ್ತಕ ಖರೀದಿ ಮಾಡಿದರು. ಹೀಗಾಗಿ ಮಳಿಗೆಗಳು ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಬೆಲೆ ಏರಿಕೆಯಿಂದಾಗಿ ಪುಸ್ತಕ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ.
ಆಯುರ್ವೇದ ಕೇಂದ್ರ: ನಾಲ್ಕು ಮಳಿಗೆಗಳಲ್ಲಿ ಪ್ರಾಚೀನ ಪದ್ಧತಿಯ ಪಾರಂಪರಿಕ ಔಷಧಿಗಳನ್ನು ಪರಿಚಯಿಸುವ ಕುರಿತು ಗಿಡಮೂಲಿಕೆ ಔಷಧಗಳ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಇದು ಹೊಸ ಪ್ರಯೋಗವೆಂದರೆ ತಪ್ಪಾಗಲಾರದು. ದೀರ್ಘ ಕಾಲದ ರೋಗಗಳಿಗೆ ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಔಷಧಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ಪತಂಜಲಿ ಕೇಂದ್ರ: ಯೋಗಗುರು ಬಾಬಾರಾಮದೇವ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ಪತಂಜಲಿ ಉತ್ಪನ್ನಗಳ ಮಾರಾಟ ಸಾಹಿತ್ಯ ಸಮ್ಮೇಳನದಲ್ಲಿ ಜೋರಾಗಿ ಕಂಡು ಬಂದಿತು. ಗಿಡಮೂಲಿಕೆ ಉತ್ಪಾದನೆಗಳ ಮಾರಾಟಕ್ಕೆ ಉತ್ತಮ ಹೆಸರು ಪಡೆದಿದೆ ಪತಂಜಲಿಯ ಸೋಪು, ಶಾಂಪೂ, ಇತರ ಸೌಂದರ್ಯವರ್ಧಕಗಳು ಮಾರಾಟವಾದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

