ಇಂದು ಉಪನ್ಯಾಸ
ಲಕ್ಷ್ಮೇಶ್ವರ: ಸಮೀಪದ ಗೊಜನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜು. 3ರ ಮಧ್ಯಾಹ್ನ 3 ಗಂಟೆಗೆ ಶಿರಹಟ್ಟಿ ತಾಲೂಕು ಕಸಾಪ ವತಿಯಿಂದ ಸಂತ ಶಿಶುನಾಳ ಷರೀಫರ ಜಯಂತಿ ಉತ್ಸವದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ವಹಿಸಲಿದ್ದಾರೆ. ಸಂತ ಶಿಶುನಾಳ ಷರೀಫರ ಕುರಿತು ಲಕ್ಷ್ಮೇಶ್ವರದ ತಾಯಿ ಪಾರ್ವತಿ ಮಕ್ಕಳ ಬಳಗದ ಬಾಲಿಕಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಮೇಶ ನವಲೆ ಉಪನ್ಯಾಸ ನೀಡಲಿದ್ದಾರೆ. ಉದ್ಘಾಟನೆಯನ್ನು ಎನ್.ಆರ್. ಕುಲಕರ್ಣಿ ಮಾಡಲಿದ್ದಾರೆ. ಅತಿಥಿಗಳಾಗಿ ತಹಸೀಲ್ದಾದ್ ಆರ್.ಡಿ. ಉಪ್ಪಿನ, ಲಕ್ಷ್ಮೇಶ್ವರ ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಪಿ. ಪಾಟೀಲ, ಗ್ರಾಪಂ ಅಧ್ಯಕ್ಷೆ ಹರಳಕ್ಕ ಕರೆಣ್ಣವರ, ಬಿಇಓ ಆರ್.ಎಸ್. ಬುರುಡಿ ಮುಂತಾದವರು ಆಗಮಿಸಲಿದ್ದಾರೆಂದು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಅಶೋಕ ಸೊರಟೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾನ್ವೇಷಣೆ: 18 ವಿದ್ಯಾರ್ಥಿಗಳು ಉತ್ತೀರ್ಣ
ಹಾನಗಲ್ಲ: ರಾಜ್ಯ ಶಿಕ್ಷಣ ಮತ್ತು ಸಂಶೋಧನೆ ಹಾಗೂ ತರಬೇತಿ ಇಲಾಖೆಯಿಂದ ಆಯೋಜಿಸಿದ ರಾಜ್ಯ ಮಟ್ಟದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಹಾನಗಲ್ಲ ತಾಲೂಕಿನ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾರೆ. ಹಾನಗಲ್ಲ ತಾಲೂಕಿನ ವಿವಿಧ ಶಾಲೆಗಳ 8ನೇ ತರಗತಿಯ 364 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇವರಲ್ಲಿ 18 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಪೂರ್ಣಗೊಳ್ಳುವವರು. ರೋಶನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ರೀತು ಪಾಟೀಲ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳಾದ ಆಶಿಫ್ಅಹ್ಮದ್, ಎಂ. ಭೈರವಿ, ನಿಖಿಲ ಪುತನಿಕರ, ನಿಶೀಮಪ್ಪ ಡಿ, ನವೀನ ಹಂಚಿನಮನಿ, ಪೃಥ್ವಿ ವಿ.ಎಲ್., ಪೂಜಾ ಕರಿದ್ಯಾವಣ್ಣನವರ, ಪ್ರವೀಣ ಪವಾಡಿ, ರುದ್ರಮುನಿಸ್ವಾಮಿ ಎಚ್., ಸಂಗಮೇಶ ಬಿ., ಸಚಿನ್ ದೊಡ್ಡಮನಿ, ಸಚಿನ್ ಕಟ್ಟಿಮನಿ, ಸ್ಫೂರ್ತಿ ಕಾಳಿ, ಶಿವಯೋಗಯ್ಯ ಎಚ್., ಸೈಯದ ಬೀಬಿಹಾಜೀರಾ, ಉಡುಚಮ್ಮ ಎಚ್.ಎಚ್., ವೆಂಕಟೇಶ ಯು.ಎಚ್. ಆಯ್ಕೆಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದ್ದಾರೆ.
9ಕ್ಕೆ ಅನುಷ್ಠಾನ ಮಂಗಲ
ಹಾವೇರಿ: ಇಲ್ಲಿನ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಜು. 9ರ ಬೆಳಗ್ಗೆ 10 ಗಂಟೆಗೆ ಅನುಷ್ಠಾನ ಮಂಗಲ ಸಮಾರಂಭ ನಡೆಯಲಿದೆ. ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೀಂದ್ರ ಶ್ರೀ ಸಾನ್ನಿಧ್ಯದಲ್ಲಿ ಸಂಜೆ 6ಕ್ಕೆ ಹುಕ್ಕೇರಿಮಠದ ಸದಾಶಿವ ಶ್ರೀ, ಲೋಕಕಲ್ಯಾಣಾರ್ಥವಾಗಿ ಜೇಷ್ಠ ಮಾಸದಲ್ಲಿ ತಿಂಗಳ ಪರ್ಯಂತ ಕೈಗೊಂಡ ಮೌನ ಮುಕ್ತಾಯಗೊಳಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

