ವೈದ್ಯ ವೃತ್ತಿಯಲ್ಲಿ ಪಾವಿತ್ರ್ಯ ಕಾಪಾಡಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜು. 4
ಸಮಾಜದಲ್ಲಿ ವೈದ್ಯಕೀಯ ವೃತ್ತಿಯೂ ಪವಿತ್ರ ವೃತ್ತಿಯಾಗಿದೆ. ರೋಗಿಗಳನ್ನು ದೇವರು ಎಂದು ತಿಳಿದು ಅವರ ಸೇವೆಯನ್ನು ನಿಸ್ವಾರ್ಥದಿಂದ ಮಾಡಿದಾಗ ನೈಜ ತೃಪ್ತಿ ದೊರಕುತ್ತದೆ. ಕಾರಣ ವೈದ್ಯಕೀಯ ವೃತ್ತಿಯನ್ನು ನಿರ್ವಹಿಸಲು ವಿದ್ಯಾರ್ಥಿಗಳು ಮುಂದೆ ಬರಬೇಕಾಗಿದೆ ಎಂದು ರಟ್ಟಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ ಲೋಕೇಶಕುಮಾರ ಕರೆ ನೀಡಿದರು.
ತಾಲೂಕಿನ ಕವಳಿಕುಪ್ಪಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವೈದ್ಯರ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾಜವು ಉತ್ತಮ ಹಾಗೂ ಸಮರ್ಪಕ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಸನ್ಮಾನ ಮಾಡುತ್ತಿದೆ. ಹಾಗೆಯೇ ಪ್ರಸಿದ್ಧ ವೈದ್ಯ ಡಾ ಬಿ.ಸಿ. ರಾಯ್ ಅವರ ಜನ್ಮದಿನವನ್ನು ವೈದ್ಯರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ತಾಲೂಕಿನ ಸರ್ಕಾರಿ ಶಾಲೆಯಲ್ಲಿ ವೈದ್ಯರ ದಿನ ಆಚರಿಸುವ ಮೂಲಕ ಸಮಾಜ ಸೇವಕ ಬಿ.ಸಿ. ರಾಯ್ ಅವರನ್ನು ನೆನಪಿಸುತ್ತಿರುವುದು ಶ್ಲಾಘನೀಯ ಎಂದರು.
ಶಿಕ್ಷಕ ಚಂದ್ರಶೇಖರ್ ಅಂಗಡಿ ಪ್ರಾಸ್ತಾವಿಕ ಮಾತನಾಡಿ, ಸದಾ ರೋಗಿಗಳ ಸೇವೆಯಲ್ಲಿ ನಿರಂತರ ಕ್ರಿಯಾಶೀಲರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಮೂಲಕ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವುದು ಅವಿಸ್ಮರಣಿಯ. ಕಾರಣ ಸಮಾಜದಲ್ಲಿ ವೈದ್ಯರನ್ನು ಗೌರವಿಸುವ ಮೂಲಕ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು. ಡಾ ಲೋಕೇಶಕುಮಾರ ರಟ್ಟಿಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ಜನತೆಗೆ ನೀಡುತ್ತಿರುವ ಸೇವೆ ಅನುಪಮವಾಗಿದೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ಈರಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಎಸ್.ಬಿ. ಗುಡಿಹಿಂದ್ಲರ ಅಧ್ಯಕ್ಷತೆ ವಹಿಸಿದ್ದರು. ದೀಪಿಕಾ ಲೋಕೇಶಕುಮಾರ, ಭವಾನೆಪ್ಪ ಪವಾರ, ಲೀಲಾವತಿ ಹುಲಗಿನ ಕಟ್ಟಿ, ಪ್ರಮೀಲಾ ಸೊಲಬಪ್ಪನವರ, ಮೀನಾಕ್ಷ ಹಿರೇಮಠ, ನಾಗರಾಜ ಹುಲುಗಿನ ಕಟ್ಟಿ, ಅನುರಾಧ ಹಿರೇಮಠ, ಮಲ್ಲಪ್ಪ ಹಿರೇಮಠ, ಬಿ.ಬಿ. ಪಾತೀಮ ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

