ಪ್ರಾಮಾಣಿಕ ಸೇವೆ ಸಲ್ಲಿಸುವೆ: ಬಣಕಾರ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜು. 5
ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡುತ್ತೇನೆ. ಜನರ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆಯದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಶಾಸಕ ಯು.ಬಿ. ಬಣಕಾರ ಕರೆ ನೀಡಿದರು.
ಅವರು ತಾಲೂಕಿನ ಜೋಕನಾಳ ಗ್ರಾಮದಲ್ಲಿ ಸೋಮವಾರ ಗ್ರಾಮಸ್ಥರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಬೆಳ್ಳಿ ತೆಂಗಿನ ಕಾಯಿ ಸ್ವೀಕರಿಸಿ ಮಾತನಾಡಿ, ಜೋಕನಾಳ ಗ್ರಾಮ ಸಣ್ಣ ಗ್ರಾಮವಾಗಿದ್ದರೂ ನನಗೆ ದೊಡ್ಡದಾದ ಸನ್ಮಾನ ಮಾಡಿ ನಿಮ್ಮ ಋಣದ ಭಾರವನ್ನು ಹೆಚ್ಚು ಮಾಡಿದ್ದೀರಿ, ನಿಮ್ಮ ಋಣ ತೀರಿಸಲು ಸದಾ ಸಿದ್ಧನಿದ್ದೇನೆ.
ವ್ಯಕ್ತಿ, ಸಮಾಜ ಹಾಗೂ ಗ್ರಾಮಗಳಲ್ಲಿ ಯಾವುದೆ ಸಮಸ್ಯೆಗಳು ಇದ್ದರೂ ಬಗೆಹರಿಸಲು ಸದಾ ನಿಮ್ಮೊಂದಿಗಿರುತ್ತೇನೆ ಎಂದರು.
ಜನರ ಅಭಿಮಾನ ಗಳಿಸಬೇಕಾದರೆ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ. ಇನ್ನೂ ನಾವು ಪ್ರಾರಂಭದ ಹಂತದಲ್ಲಿದ್ದೇವೆ.
ಸಾರ್ವಜನಿಕರು ಯಾವುದೆ ಸಮಸ್ಯೆಗಳು ಇದ್ದರೂ ನೇರವಾಗಿ ಆಗದಿದ್ದರೂ ದೂರವಾಣಿ ಮೂಲಕ ಸಂಪರ್ಕಿಸಿದರೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಗ್ರಾಪಂ ಅಧ್ಯಕ್ಷ ಕುಬೇರಪ್ಪ ಕರಿಯಣ್ಣನವರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಟ್ಟೀಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ, ರಾಮನಗೌಡ ಪಾಟೀಲ, ಫಕ್ಕೀರಪ್ಪ ತಮ್ಮಣ್ಣನವರ, ರಾಮಪ್ಪ ತಳವಾರ, ಪ್ರಭುಗೌಡ ಪಾಟೀಲ, ಬಸವರಾಜ ಬೆಳಗಾವಿ, ಪ್ರಭು ಗುಬ್ಬಿ, ಶಿವಣ್ಣ ಗುಬ್ಬಿ, ಸುದೀರಪ್ಪ ಕರಡಣ್ಣನವರ, ಕರಬಸಪ್ಪ, ಶಿವಲಿಂಗಪ್ಪ, ಮಹಾದೇವಪ್ಪ ಹಾಗೂ ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

