ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ: ಪ್ರತಿಭಟನೆ
ಹಿರೇಕೆರೂರು: ಸರ್ಕಾರ ಯೂರಿಯಾ ಗೊಬ್ಬರ ಚೀಲಕ್ಕೆ ರು. 286ಗೆ ನಿಗದಿಪಡಿಸಿದ್ದರೂ ಗ್ರಾಮದಲ್ಲಿರುವ ಖಾಸಗಿ ಗೊಬ್ಬರ ಅಂಗಡಿಯವರು ರೈತರಿಂದ ರು. 350ರಿಂದ 380ರ ವರೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಮಾಸೂರು ಗ್ರಾಮದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ನಾಗನಗೌಡ ಪಾಟೀಲ ಮಾತನಾಡಿ, ಕೆಲ ರೈತರು ಸರ್ಕಾರ ನಿಗದಿಪಡಿಸಿದ ದರಕ್ಕೆ ಗೊಬ್ಬರವನ್ನು ನೀಡಬೇಕು ಎಂದು ಪಟ್ಟು ಹಿಡಿದರೆ ತಮ್ಮಲ್ಲಿ ಗೊಬ್ಬರ ಇಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಯತ್ನಿಸಿದರೆ ಅವರು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ಗಂಗಪ್ಪಳ್ಳವರ, ಈರಣ್ಣ ಬೇವಿನಮರದ, ರಾಮು ನೆಗಳೂರು, ವಸಂತ ಕಾಟೇರ, ಈರಪ್ಪ ಹೊನ್ನಾಳ್ಳಿ, ಮೈಲಾರಪ್ಪ ದೊಡ್ಡಮನಿ, ಈರಪ್ಪ ಜೀಬೇರ, ಲಕ್ಷ್ಮಣ ಕನ್ನಿ, ಮಾರುತಿ ಹುಳ್ಳಿಗುಡಿ, ನಿಂಗರಾಜ ಲಿಂಗದಹಳ್ಳಿ, ಕೊಟೇಶ ಬ್ಯಾಡಗಿ, ಚಂದ್ರಶೇಖರ ಗೌರಕ್ಕನವರ, ಬಸಪ್ಪ ಪರಪ್ಪನವರ, ಭವಾನಿರಾವ್ ನಿಡನೇಗಿಲು, ಚಂದ್ರು ನಾಗೇನಹಳ್ಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

