ಹಾವೇರಿ

ಶಾಲಾ ಸಂಸತ್‌ನಿಂದ ನಾಯಕತ್ವ ಗುಣ: ಪ್ರೊ. ಮಾದಿ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 14
ಶಾಲಾ ಸಂಸತ್ತು ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣ ಬೆಳೆಸುವುದರ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಮೂಡಿಸಲಿದೆ ಎಂದು ಪ್ರೊ. ಬಿ.ಕೆ. ಮಾದಿ ಹೇಳಿದರು.
ಈಚೆಗೆ ಅವರು ಸ್ಥಳೀಯ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟಿಸಿ ಮಾತನಾಡಿದರು. ದ್ಯಾರ್ಥಿಗಳು ಏಕಾಗ್ರತೆ, ಕ್ರೀಯಾಶೀಲತೆಯಿಂದ ವಿದ್ಯೆ ಸಂಪಾದಿಸಿ ಸಮಾಜದ ಕೀರ್ತಿಗೆ ಪಾತ್ರರಾಗಬೇಕು. ಇಂದು ಶೈಕ್ಷಣಿಕ ಕ್ಷೇತ್ರ ಅತ್ಯಂತ ಸ್ಪರ್ಧಾ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ಸಿದ್ಧರಾಗಬೇಕು. ಶಿಕ್ಷಕರು, ಪಾಲಕರು ಅವರಿಗೆ ಸಹಕಾರ ನೀಡಿದಾಗ ವಿದ್ಯಾರ್ಥಿಗಳು ಜೀವನದ ಗುರಿ ಸಾಧಿಸಲು ಸಾಧ್ಯ ಎಂದರು. ಮುಖ್ಯೋಪಾಧ್ಯಾಯ ಎಂ.ಡಿ. ಸರಕಾವಸ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಶೈಕ್ಷಣಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಜತೆಗೆ ವಿದ್ಯಾರ್ಥಿಗಳಲ್ಲಿ ದೇಶದ ಚಿಂತನೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಶಾಲಾ ಸಂಸತ್ತಿನಂತಹ ಉನ್ನತ ಯೋಜನೆಗಳನ್ನು ಜಾರಿಗೊಳಿಸಿರುವುದು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಾಲಾ ಸಂಸತ್ತಿನಲ್ಲಿ ಪಾಲ್ಗೊಳ್ಳಿ ಎಂದರು.
ಫರೀದಾ ನಂದಿಹಾಳ (ಪ್ರಧಾನ ಮಂತ್ರಿ), ಇಬ್ರಾಹಿಂ ಬಾಗವಾನ (ಉಪಪ್ರಧಾನಿ), ಮುಸ್ಕಾನ ಕಟ್ಟಿಮನಿ (ಹಣಕಾಸು), ಸುಮಯ್ಯ ಅತ್ತಾರ (ಸಾಹಿತ್ಯ), ಶಹನಾಜ ಆರಗಿದ್ದಿ (ಪ್ರಾರ್ಥನಾ), ರಜೀಯಾ ರಾಮತಾಳ (ಆರೋಗ್ಯ), ನಜಮಾ ದಿಂಡವಾಡ (ವಾರ್ತಾ), ಸುಫೀಯಾ ಫೀರಜಾದಿ (ಪ್ರವಾಸ), ಯಾಸೀನ ಮನಿಯಾರ ( ಬಿಸಿಯೂಟ), ಆಫ್ರೀನ್ ಸಣ್ಣಕ್ಕಿ (ಕ್ರೀಡಾ) ಮಂತ್ರಿಗಳಾಗಿ ಶಾಲಾ ಸಂಸತ್ತಿಗೆ ಆಯ್ಕೆಯಾದರು. ಎಂ.ಕೆ. ತಟಗಾರ, ಇಸ್ಮಾಯಿಲಸಾಬ ನಾಲಬಂದ, ಎ.ಬಿ. ರೆಡ್ಡೇರ, ವಿ.ಎಂ. ಬಡಿಗೇರ, ಎಂ.ಝಡ್. ಬೇಲೇರಿ, ಎಸ್.ಎಂ ಮತ್ತೇ, ಎಸ್.ಎಂ. ಡಂಬಳ, ಶ್ಯಾಮ ಶಿಂಗ್ರಿ, ಎ.ಎಂ. ಕೊಪ್ಪಳ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.