ಹಾವೇರಿ

ಚಿಕನ್‌ಸ್ಟಾಲ್ ತೆರವುಗೊಳಿಸದಿದ್ದರೆ ಬೀಗ: ಕರವೇ

Published On :

ಬ್ಯಾಡಗಿ: ಪಟ್ಟಣದ ಎಸ್‌ಜೆಜೆಎಂ ಪ್ರೌಢಶಾಲೆ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಕೋಳಿ ಮಾಂಸ ಮಾರಾಟದ ಅಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕರವೇ (ಪ್ರವೀಣಶೆಟ್ಟಿ ಬಣ)ದ ಕಾಯಕರ್ತರು ಮಂಗಳವಾರ ಪುರಸಭೆಗೆ ಮನವಿ ಸಲ್ಲಿಸಿ 3 ದಿನಗಳಲ್ಲಿ ಕ್ರಮಕೈಗೊಳ್ಳದಿದ್ದರೆ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಅಧ್ಯಕ್ಷ ಜೀತೇಂದ್ರ ಸುಣಗಾರ ಮಾತನಾಡಿ, ಎಸ್‌ಜೆಜೆಎಂ ಪ್ರೌಢಶಾಲೆ ಬಳಿ ತಲೆಯೆತ್ತಿರುವ ಚಿಕನ್ ಸೆಂಟರ್‌ಗಳು ಹೊರಸೂಸುತ್ತಿರುವ ದುರ್ವಾಸನೆಗೆ ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳಿಗೂ ಕೂಡ ಶಾಲೆಯಲ್ಲಿ ಕುಳಿತು ಪಾಠಗಳನ್ನು ಕೇಳಲು ಸೂಕ್ತ ವಾತಾವರಣ ದೊರೆಯದೇ ಹದಗೆಟ್ಟಿದೆ ಎಂದರು.
ಚಿಕನ್ ಸೆಂಟರ್‌ಗಳನ್ನು ಸ್ಥಳಾಂತರಿಸುವ ಕುರಿತು ಪ್ರಾಚಾರ್ಯರು ಮನವಿ ಸಲ್ಲಿಸಿದರೂ ಪುರಸಭೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಅವುಗಳಿಗೆ ಹೊಂದಿಕೊಂಡು ಬಿಸಿಯೂಟ ತಯಾರಿಕಾ ಘಟಕವಿದ್ದು, ಅಡುಗೆ ಸಿಬ್ಬಂದಿ ಕೂಡ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಯಾರು ಹೊಣೆ: ಮೊದಲೇ ಸರ್ಕಾರಿ ಶಾಲೆಗಳು ಮಕ್ಕಳ ಕೊರತೆ ಎದುರಿಸುತ್ತಿವೆ. ಅದರಲ್ಲೂ ಚಿಕನ್ ಸೆಂಟರ್‌ಗಳ ದುರ್ವಾಸನೆಗೆ ಶಾಲೆ ಸೇರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಎಸ್‌ಜೆಜೆಎಂ ಪ್ರೌಢಶಾಲೆಗೆ ಮಕ್ಕಳ ಕೊರತೆಯಾದಲ್ಲಿ ಅದಕ್ಕೆ ಪುರಸಭೆಯೇ ಹೊಣೆಯಾಗಲಿದೆ ಎಂದ ಅವರು, ಅಧಿಕಾರಿಗಳ ಅಸಹಾಯಕತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಳಿಗೆ ತೆರವುಗೊಳಿಸಿ: ಮಾಂಸ ಮಾರಾಟದ ಅಧಿನಿಯಮ ಗಾಳಿಗೆ ತೂರಿರುವ ಚಿಕನ್ ಸೆಂಟರ್‌ಗಳು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಕಾಣುವಂತೆ ಮಾಂಸ ಕತ್ತರಿಸುತ್ತಿವೆ. ಅಧಿಕಾರಿಗಳು ಮಾತ್ರ ಕ್ರಮಕೈಗೊಂಡಿಲ್ಲ ಎಂದರು.
ಹೆಸರು ಒಬ್ಬರು ಬಾಡಿಗೆ ಇನ್ನೊಬ್ಬರು: ಕೃಷ್ಣಾ ಕರ್ಚಾಡ ಮಾತನಾಡಿ, ಮಳಿಗೆ ಪಡೆದಿರುವ ವ್ಯಕ್ತಿಗಳು ಪುರಸಭೆ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಮೂಲಕ ಹೆಚ್ಚಿಗೆ ಬಾಡಿಗೆ ಪಡೆದು ಬೇರೊಬ್ಬರಿಗೆ ವ್ಯಾಪಾರ ನಡೆಸಲು ನೀಡಿರುವ ಕುರಿತು ಗುಮಾನಿಯಿದೆ. ಬಾಡಿಗೆ ಪಡೆದವರೇ ವ್ಯಾಪಾರ ನಡೆಸುತ್ತಿದ್ದಾರೆಯೇ ಇಲ್ಲ ಎಂಬ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದರು.
ಮುಖ್ಯಾಧಿಕಾರಿಗಳ ಪರ ಮನವಿ ಸ್ವೀಕರಿಸಿದ ವ್ಯವಸ್ಥಾಪಕ ಮಾತನಾಡಿ, ವಾಣಿಜ್ಯ ಮಳಿಗೆಯಲ್ಲಿನ ಬಾಡಿಗೆದಾ ರರಿಗೆ ನೋಟಿಸ್ ಜಾರಿ ಮಾಡಿದ್ದು, ಚಿಕನ್ ಮಾರಾಟ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಆದರೂ ಸಹ ಅನಧೀಕೃತವಾಗಿ ಮಾಂಸ ಮಾರಾಟ ಆರಂಭಿಸಿದ್ದು, 2 ದಿನಗಳಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.