ಆಂತರಿಕ ಭದ್ರತೆ, ದೇಶಾಭಿಮಾನ ಚರ್ಚೆಯಾಗಲಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 25
ಆಂತರಿಕ ಭದ್ರತೆ ಹಾಗೂ ದೇಶಾಭಿಮಾನವೇ ಪ್ರಸ್ತುತ ದಿನಗಳಲ್ಲಿ ಹೆಚ್ಚು ಚರ್ಚೆಯಾಗಬೇಕಾಗಿರುವ ವಿಷಯಗಳಾಗಿವೆ ಎಂದು ಭಾರತ ಸೇವಾದಳ ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರೊ ಆರ್.ಎಂ. ಕುಬೇರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಭಾಭವನದಲ್ಲಿ ಜರುಗಿದ ಭಾರತ ಸೇವಾದಳದ ತರಬೇತಿ ಪಡೆದ ಶಿಕ್ಷಕರ ಒಂದು ದಿನದ ಮಿಲಾಪ ಪುನಶ್ಚೇತನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ತುಂಬಿರುವ ದೇಶದ್ರೋಹಿಗಳಿಂದ ಇಂದಿಗೂ ಭಾರತಕ್ಕೆ ಆಂತರಿಕ ಭದ್ರತೆ ಕಾಡುತ್ತಿದೆ. ಕೆಲ ಮೂಲ ಭೂತವಾದಿಗಳು ದೇಶದ ಸಾರ್ವಭೌಮತ್ವಕ್ಕೆ ಕೊಡಲಿಪೆಟ್ಟು ನೀಡುವ ಕಾಲಗಳು ಸನ್ನಿಹಿತವಾಗಿದ್ದು, ಯುವಕರು ತಮ್ಮ ಎದೆಗಾರಿಕೆ ಪ್ರದರ್ಶಿಸಬೇಕಾದ ಕಾಲಗಳು ಸನ್ನಿಹಿತವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಬ್ರಿಟಿಷರ ದಾಸ್ಯದಿಂದ ತಪ್ಪಿಸಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಅಂದಿನ ಯುವಪಡೆಯ ತ್ಯಾಗ ಬಲಿದಾನಗಳು ಸಾಕಷ್ಟು ಸಹಕಾರಿಯಾಗಿವೆ. ಬ್ರಿಟಿಷರ ಗುಂಡಿಗೆ ಅಂಜದೇ ಎದೆಕೊಟ್ಟು ನಿಂತಿರುವ ಯುವಕರು ಇಂದು ರಾಷ್ಟ್ರ ಭಕ್ತರ ಸಾಲಿಗೆ ಸೇರಿದ್ದಾರೆ ಎಂದರು.
ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇತ್ತೀಚಿನ ಯುವಕರಲ್ಲಿ ರಾಷ್ಟ್ರದ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಇದರಿಂದ ಯುವಶಕ್ತಿಯ ಸದ್ಭಳಕೆಯಾಗುತ್ತಿಲ್ಲ ಎಂದು ವಿಷಾದಿಸಿದ ಅವರು, ವಿದ್ಯಾರ್ಥಿ ದಿಸೆಯಿಂದಲೇ ಈ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ತಿಳಿವಳಿಕೆಯಿಲ್ಲದ ಉನ್ನತ ಶಿಕ್ಷಣ ಹೊಂದಿದ ವಿದ್ಯಾರ್ಥಿಗಳು ಕತ್ತಲೆ ಜಗತ್ತಿನ ಅಪರಾಧ ಕೃತ್ಯಗಳಲ್ಲಿ ತೊಡುಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸೇವಾದಳದಲ್ಲಿ ತರಬೇತಿ ಪಡೆದ ಶಿಕ್ಷಕರು ಮಕ್ಕಳಲ್ಲಿ ದೇಶಾಭಿಮಾನ ಕುರಿತು ಮಾರ್ಗ ಹಾಗೂ ಸಲಹೆಗಳನ್ನು ನೀಡುವ ಮೂಲಕ ರಾಷ್ಟ್ರಪ್ರೇಮದ ಮುಖ್ಯವಾಹಿನಿಗೆ ತರುವಂತಾಗಬೇಕು ಎಂದರು. ತಾಲೂಕು ಸೇವಾದಳ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಮಿತಿಯ ಶಿವಾಲಾಲ್ ಕೋಟಕ, ರಾಜಣ್ಣ ಪುರದ, ಪ್ರಕಾಶ ಹಂದ್ರಾಳ, ನಾಗೇಶ ಗುತ್ತಲ, ಗಣೇಶ ಸೂಗೂರ ಉಪಸ್ಥಿತರಿದ್ದರು. ಬಿ.ಎಫ್. ದೊಡ್ಮನಿ ಸ್ವಾಗತಿಸಿದರು. ವಿ.ವಿ. ಹುಣಸೀಕಟ್ಟಿ ನಿರೂಪಿಸಿದರು. ಎಂ.ವೈ. ಸಾಳುಂಕೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

