ಸುರೇಶ್ವರಾನಾಂದ ಶ್ರೀ ಲಿಂಗೈಕ್ಯ: ಸಂತಾಪ
ಹಾನಗಲ್ಲ: ಕ್ಷತ್ರಿಯ ಮರಾಠಾ ಸಮುದಾಯದ ಗೋಸಾಯಿ ಮಠದ ಭವಾನಿ ಪೀಠದ 6ನೇ ಪೀಠಾಧಿಪತಿ ಸುರೇಶ್ವರಾನಾಂದ ಸ್ವಾಮೀಜಿ ಅವರ ಅಕಾಲಿಕ ನಿಧನಕ್ಕೆ ಹಾನಗಲ್ಲ ತಾಲೂಕಿನ ಮರಾಠಾ ಸಮಾಜ ಬಾಂಧವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯಲ್ಲಿ ಸಮಾಜ ಬಾಂಧವರ ಸಭೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರ ಕುರಿತು ಮಾತನಾಡಿದ ಸಂಸ್ಥೆ ಅಧ್ಯಕ್ಷ ರಾಜು ಗೌಳಿ, ಸುರೇಶ್ವರಾನಂದ ಶ್ರೀಗಳ ಅಕಾಲಿಕ ನಿಧನ ಇಡೀ ಮರಾಠಾ ಸಮುದಾಯವನ್ನು ಅನಾಥರನ್ನಾಗಿ ಮಾಡಿದಂತಾಗಿದೆ. ಇದೊಂದು ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸುರೇಶಗೌಡ ಪಾಟೀಲ, ನಿರ್ದೇಶಕರಾದ ರಾಜಪ್ಪ ಸಂಕಪಾಳೆ, ಮಂಜುನಾಥಗೌಡ ಪಾಟೀಲ, ರಾಮಚಂದ್ರ ಬಮ್ಮನಹಳ್ಳಿ, ಫಕ್ಕೀರಪ್ಪ ಪವಾರ, ಅರುಣ ಕಿತ್ತೂರ, ಸಂತೋಷ ಟೀಕೋಜಿ, ರಾಘವೇಂದ್ರ ಏಸಕ್ಕನವರ, ಶೇಖರ ಜೀವಾಜಿ, ವಸಂತ ಕಂಕಾಳೆ, ಅಶೋಕ ಸಾಳುಂಕೆ ಇದ್ದರು.
ಸಂತಾಪ: ಕ್ಷತ್ರಿಯ ಮರಾಠಾ ಸಮುದಾಯದ ಗೋಸಾಯಿ ಮಠದ ಭವಾನಿ ಪೀಠದ ಪೀಠಾಧಿಪತಿ ಸುರೇಶ್ವರಾನಾಂದ ಸ್ವಾಮೀಜಿ ಅವರ ಅಕಾಲಿಕ ನಿಧನಕ್ಕೆ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ವಿಷ್ಣುಕಾಂತ ಜಾಧವ ಸೇರಿದಂತೆ ಸಮಾಜ ಬಾಂಧವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಂದ ಮತದಾನ
ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪಟ್ಟಣದ ಲಯನ್ಸ್ ನವಭಾರತ ವಿದ್ಯಾಸಂಸ್ಥೆ ಪ್ರಸಕ್ತ ವರ್ಷದ ಶಾಲಾ ಸಂಸತ್ ಮಂಡಳಿಗಾಗಿ ನಡೆದ ಚುನಾವಣೆಯ್ಲಲಿ ಮಕ್ಕಳು ಸರತಿಯಲ್ಲಿ ನಿಂತು ಮತದಾನ ಮಾಡಿದರು. ಮುಖ್ಯ ಶಿಕ್ಷಕಿ ಗಂಗಮ್ಮ ದೇಸಾಯಿ ಮಾತನಾಡಿ, ಮಕ್ಕಳಿಗೆ ಚುನಾವಣೆ ಮಾಹಿತಿ ನೀಡುವ ಉದ್ದೇಶದಿಂದ ಈ ಅಣಕು ಮಾದರಿ ಸಂಸತ್ ಮಂಡಳಿ ಚುನಾವಣೆ ಹಮ್ಮಿಕೊಳ್ಳಲಾಗಿದೆ ಎಂದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತದಾನ ಮಾಡಿದರು. ಶಾಲೆ ಸರ್ವ ಶಿಕ್ಷಕರು ಪಾಲ್ಗೊಂಡು ಚುನಾವಣೆ ಕಾರ್ಯ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

