ಪಡಿತರ ಅಕ್ರಮ ಕಾರ್ಡ್ ಪತ್ತೆಹಚ್ಚಿ: ಲಾಡ್
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜೂ. 1
ಬಿಜೆಪಿ ಸರ್ಕಾರವು ಪಟ್ಟಣ ಪ್ರದೇಶಗಳಲ್ಲಿ ಅಕ್ರಮವಾಗಿ ವಿತರಿಸಿದ ಬೋಗಸ್ ಪಡಿತರ ಕಾರ್ಡ್ಗಳನ್ನು ಕಂಡುಹಿಡಿದು ಅಧಿಕಾರಿಗಳಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ರಾಜ್ಯ ಸಚಿವ ಸಂತೋಷ ಲಾಡ್ ಹೇಳಿದರು.
ಶನಿವಾರ ಪಟ್ಟಣದ ಶರೀಫ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಡವರು, ನಿರ್ಗತಿಕರಿಗೆ ಸರಿಯಾಗಿ ವಿವಿಧ ತರಹದ ಪಡಿತರ ಕಾರ್ಡ್ಗಳನ್ನು ತಲುಪಿಸುವ ಕೆಲಸ ಆಗಬೇಕಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಬರುವ ಜುಲೈನಿಂದ ರು. 1ಗೆ ಕೆಜಿ ಅಕ್ಕಿ ನೀಡಲಾಗುವುದು ಎಂದರು.
ಸರ್ಕಾರದ ಕಾರ್ಯಕ್ರಮಗಳು ನೇರವಾಗಿ ಜನರ ಮನೆ-ಮನೆ ತಲುಪಿಸುವಂತಹ ಕೆಲಸಗಳನ್ನು ಕಾರ್ಯಕರ್ತರು ಮಾಡಬೇಕು. ರಾಜ್ಯದಲ್ಲಿ ಎಲ್ಲ ಬಡ ಕುಟುಂಬಗಳನ್ನು ಬಿಪಿಎಲ್ ಕಾರ್ಡ್ ನೀಡುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ, ಬಡವರ ಏಳ್ಗೆಗಾಗಿ, ರೈತರಿಗಾಗಿ ಶ್ರಮಿಸುವ ಸರ್ಕಾರ. ರಾಜ್ಯದ ಜನತೆ ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆದುಕೋಳ್ಳಬೇಕು. ಮುಂದೆ ಬರುವಂತಹ ಲೋಕಸಭೆ ಚುನಾವಣೆ ನಮ್ಮ ಗುರಿಯಾಗಿಟ್ಟುಕೊಂಡು ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸನ್ನದ್ಧರಾಗಬೇಕು ಎಂದ ಅವರು, ಮಾಜಿ ಶಾಸಕ ಎಸ್.ಎ. ಖಾದ್ರಿಗೆ ಕ್ಷೇತ್ರದಲ್ಲಿ 64 ಸಾವಿರ ಮತದಾರರ ಆಶೀರ್ವಾದವಿದೆ. ನಾನು ಅವರ ಸಹೋದರನಾಗಿ ಅವರ ಎಲ್ಲ ಕೆಲಸ ಕಾರ್ಯ ಮತ್ತು ಪಕ್ಷದ ಸಂಘಟನೆಗೆ ಅವರಿಗೆ ಬೆಂಬಲ ನೀಡುತ್ತೇನೆ. ಪಕ್ಷದಲ್ಲಿ ಖಾದ್ರಿಗೆ ಯಾವುದಾದರೊಂದು ಸ್ಥಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಾಜಿ ಶಾಸಕ ಸೈಯದ ಅಜ್ಜಂಫೀರ್ ಖಾದ್ರಿ ಮಾತನಾಡಿ, ಕ್ಷೇತ್ರದಲ್ಲಿರುವ ಎಲ್ಲ ಕಾಂಗ್ರೆಸ್ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಸೋಲು-ಗೆಲವು ಜೀವನದ ಒಂದು ಅಂಗ ಇದ್ದಂತೆ. ಅದನ್ನ ಮರೆತು ನಾವು ಮುಂದೆ ಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಿಷ್ಠವಾಗಿ ಸಂಘಟನೆ ಮಾಡಬೇಕು ಎಂದು ಹೇಳಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ, ಯುವ ಕಾಂಗ್ರೆಸ್ ಮುಖಂಡರಾದ ನಟರಾಜ ನಾಗರಹಳ್ಳಿ, ರಾಜು ಕುನ್ನೂರ, ತಿಪ್ಪಕ್ಕನವರ, ಹನುಮರಡ್ಡಿ ನಡುವಿನಮನಿ, ಪ್ರದೀಪ ಗಿರಡ್ಡಿ, ಪಾಲಾಕ್ಷಪ್ಪ ಹಾವಣಗಿ, ಧಾರವಾಡ, ಗುಡ್ಡಪ್ಪ ಜಲ್ದಿ, ಎಸ್.ವೈ. ಪಾಟೀಲ್, ಎಫ್.ಸಿ. ಪಾಟೀಲ್, ಪ್ರಕಾಶ ಬಂಕಣ್ಣವರ, ಸುಧೀರ ಲಮಾಣಿ, ಶೇಖಣ್ಣ ಗಣಾಚಾರಿ, ಶಂಬುಲಿಂ ಆಜೂರ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

