ಹಾವೇರಿ

ಹಿಂದುಳಿದ, ಬಡವರ ಅಭಿವೃದ್ಧಿಗೆ ಯೋಜನೆ

Published On :

ಹಾನಗಲ್ಲ: ಕಾಂಗ್ರೆಸ್ ಪಕ್ಷ ಬಡವರ, ಹಿಂದುಳಿದವರ ಪಕ್ಷವಾಗಿದ್ದು, ಅವರ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಶಾಸಕ ಮನೋಹರ ತಹಸೀಲ್ದಾರ್ ಹೇಳಿದರು.
ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶೀಘ್ರ ರೈತರಿಗೆ ಬೆಳೆ ವಿಮೆ ವಿತರಣೆ: ಶೀಘ್ರದಲ್ಲಿ ರು. 1ಗೆ ಕೆ.ಜಿ ಅಕ್ಕಿ ವಿತರಣೆ ಪ್ರಾರಂಭಗೊಳ್ಳಲಿದ್ದು, ರೈತರ ಸಾಲಮನ್ನಾ, ವಸತಿ ರಹಿತರಿಗೆ ಮನೆ, ನಿವೇಶನ ವಿತರಣೆ ಮುಂತಾದ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದ ಅವರು, ರೈತರಿಗೆ ಸದ್ಯದಲ್ಲೇ ಬೆಳೆ ವಿಮೆ ಪರಿಹಾರ ಘೋಷಣೆಯಾಗಲಿದೆ. ಸಕಾಲಕ್ಕೆ ಸಹಾಯಧನದಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಸಲಾಗುವುದು. ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ ಅತ್ಯವಶ್ಯ ಎಂದರು.
ವಿಷ್ಣುಕಾಂತ ಜಾಧವ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ವೈ.ಎಫ್. ಕಿತ್ತೂರ, ಜಿ.ವಿ. ಕಂಬಾಳಿಮಠ, ಎಂ.ಆರ್. ಗುತ್ತಲ, ಆರ್.ಎಸ್. ಪಾಟೀಲ, ಜೆ.ಸಿ. ಕುಲಕರ್ಣಿ, ಪ್ರಕಾಶ ಚೋಳಪ್ಪನವರ, ಮಂಜುನಾಥ ನಾಗೋಜಿ, ಜಗನ್ನಾಥ ಚೋಳಪ್ಪನವರ, ಶಿವಣ್ಣ ಅರಳೇಶ್ವರ, ಗುಡ್ಡಪ್ಪ ಗೋಯಿಕಾಯಿ, ಬಂಗಾರಿಗೌಡ ಪಾಟೀಲ, ಹನುಮಂತಪ್ಪ ಶಡಗರವಳ್ಳಿ, ಜಯಣ್ಣ ನಾಗೋಜಿ, ಚಂದ್ರಶೇಖರ ಸಾಳುಂಕೆ, ಈರಣ್ಣ ನಾಗೋಜಿ, ರಮೇಶ ಪಾಟೀಲ, ಮೋದಿನಸಾಬ ಹಂಚಿನಮನಿ, ನಾಗಣ್ಣ ಖಂಡೋಜಿ, ರಾಮು ಚಿಕ್ಕಣಗಿ, ತಾನಾಜಿ ಜಾಧವ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.