ಹಾವೇರಿ

ಸಣ್ಣ ನೀರಾವರಿ, ವಡ್ಡರ ಸಮಾಜ ವೃದ್ಧಿಗೆ ಸಮ್ಮತಿ

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜೂ. 2
ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಹಾವೇರಿ ಜಿಲ್ಲೆಯ ಯಾವುದೇ ಕಾರ್ಯಗಳು ಸೇರಿದಂತೆ ವಡ್ಡರ ಸಮಾಜ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ ಎಂದು ಚೆನ್ನಳ್ಳಿ ಕ್ಷೇತ್ರದ ಜಿಪಂ ಸದಸ್ಯ ಹಾಗೂ ರಾಜ್ಯ ಭೋವಿ ವಡ್ಡರ ಸಂಘರ್ಷ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬೇವಿನಹಳ್ಳಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾತನಾಡಿದ ಅವರು, ರಾಜ್ಯ ಭೋವಿ ಸಮಾಜದ ವತಿಯಿಂದ ನೂತನ ಸಚಿವರಾದ ಶಿವರಾಜ ತಂಗಡಗಿಯವರು ನಮ್ಮ ಸಮಾಜದ ಓರ್ವ ವ್ಯಕ್ತಿಯಲ್ಲಿ ಅವರು ಶಕ್ತಿಯಾಗಿ ಹೊರ ಹೊಮ್ಮಿದ್ದ ಕಾರಣ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಸನ್ಮಾನಿಸಿದ ಬಗ್ಗೆ ವಿವರಿಸಿದರು.
ಭೋವಿ ವಡ್ಡರ ಸಮಾಜ ತೀರಾ ಹಿಂದುಳಿದಿದೆ. ಆದರೂ ಸಹ ಶಿವರಾಜ ತಂಗಡಗಿ ನಮ್ಮ ಸಮಾಜದ ಏಕೈಕ ವ್ಯಕ್ತಿ ಕ್ಯಾಬಿನೆಟ್ ಸಚಿವರಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಸಮಾಜದ ಎಲ್ಲ ವರ್ಗದವರ ಹಾಗೂ ಹಾವೇರಿ ಜಿಲ್ಲೆಯ ಕೆಲಸ, ಕಾರ್ಯಗಳನ್ನು ಮನಃಪೂರ್ವಕವಾಗಿ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ಸದಾನಂದ ದೊಡ್ಮನಿ, ಜಿಲ್ಲಾಧ್ಯಕ್ಷ ಡಾ೤ ರಂಗಪ್ಪ ವಡ್ಡರ, ಉಪಾಧ್ಯಕ್ಷ ಸಿದ್ದಪ್ಪ ವೀರಾಪುರ, ತಾಲೂಕು ಘಟಕಾಧ್ಯಕ್ಷ ರೇವಣಪ್ಪ ಹಾರೋಗೊಪ್ಪದ, ಸಂಘಟನಾ ಕಾರ್ಯದರ್ಶಿ ನಾಗರಾಜ ಮಳಗಾವಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಬಂಡಿವಡ್ಡರ, ಮುಖಂಡರಾದ ಎಸ್.ಎಚ್. ಹಕ್ಕಳ್ಳಿ, ಹನುಮಂತಪ್ಪ ದೊಡ್ಮನಿ, ಶೇಖಪ್ಪ ಗಂಗೊಳ್ಳಿ, ಮಹೇಶ ಬೇವಿನಹಳ್ಳಿ, ಕೆಂಗಪ್ಪ ವಡ್ಡರ, ನಾಗರಾಜ ಸಿತೇಕೊಂಡ, ಶಿವಮೂರ್ತಯ್ಯ ವೀರಾಪುರ, ಪಿ.ವಿ. ಹಿತ್ತಲಮನಿ, ಆರ್.ಬಿ. ಹಿರೇಕೆರೂರು, ಚಂದ್ರಪ್ಪ ಬೇವಿನಹಳ್ಳಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.