ಮಾವನಿಂದ ಅಳಿಯನಿಗೆ ಗೃಹ ಬಂಧನ
ರಾಣಿಬೆನ್ನೂರು: ಮಾನಸಿಕ ಅಸ್ವಸ್ಥನಾಗಿದ್ದ ಅಳಿಯನನ್ನು ಮಾವ ಕಳೆದ 3 ವರ್ಷಗಳಿಂದ ದನದ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆತನನ್ನು ಬಂಧಮುಕ್ತಗೊಳಿಸಿದ ಘಟನೆ ತಾಲೂಕಿನ ಬೇಲೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಬೇಲೂರು ಗ್ರಾಮದ ಹನುಮಂತಪ್ಪ ಭರಮಪ್ಪ ಕ್ಯಾತಪ್ಪನವರ (ರಾಟಿ) (48) ಬಂಧಿತನಾಗಿದ್ದ ವ್ಯಕ್ತಿ. ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ನಿವಾಸಿ-ಹಾಲಿ ವಸ್ತಿ ಬೇಲೂರು ಗ್ರಾಮದಲ್ಲಿರುವ ನಾಗಪ್ಪ ಸಣ್ಣತಿರುಕಪ್ಪ ಹೂನ್ನತ್ತೆಪ್ಪ ತಮ್ಮ ಹೆಂಡತಿಯ ಸಹೋದರ ಅರ್ಥಾತ್ ಅಳಿಯನನ್ನು ಬಂಧನದಲ್ಲಿಟ್ಟವರು.
ಮಾನಸಿಕವಾಗಿ ಅಸ್ವಸ್ಥನಾಗಿದ್ದ ಹನುಮಂತಪ್ಪ ಕ್ಯಾತಪ್ಪನವರ ಗ್ರಾಮದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ತಿಳಿದು ಬಂದಿದೆ. ಇದರಿಂದ ಬೇಸತ್ತಿದ್ದ ನಾಗಪ್ಪ ಗ್ರಾಮದಲ್ಲಿ ರಾಜಿ ಪಂಚಾಯ್ತಿ ನಡೆಸಿ ಬಗೆಹರಿಸಲು ಯತ್ನಿಸಿದ್ದರು. ಇದರಿಂದ ಸಮಸ್ಯೆ ಬಗೆಹರಿಯದಿದ್ದಾಗ ಬೇಸತ್ತ ಹನುಮಂತಪ್ಪನಿಗೆ 2007ರಿಂದೀಚೆಗೆ ಧಾರವಾಡದ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಚಿಕಿತ್ಸೆಗೆಂದು ಕರೆದುಕೊಂಡು ಹೋದವರಿಗೆ ಹಾಗೂ ಜೊತೆಯಲ್ಲಿದ್ದವರಿಗೂ ಹನುಮಂತಪ್ಪ ತೊಂದರೆ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ನಾಗಪ್ಪ ಊರೊಳಗೆ ಬಾರದಂತೆ ತನ್ನ ಜಮೀನಿನ ಕಣದ ಮನೆಯಲ್ಲಿ ಆತನನ್ನು ಇರಿಸಿದ್ದನು ಎಂದು ಗ್ರಾಮಸ್ಥರು ಹೇಳುತ್ತಾರೆ.
ಕಳೆದ 3-4 ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಅಳಿಯ ಹನುಮಂತಪ್ಪನಿಗೆ ಸಾಕಷ್ಟು ಬುದ್ದಿವಾದ ಹೇಳಿ, ಧಾರವಾಡ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಯಾವುದೇ ರೀತಿಯಿಂದ ತೊಂದರೆ ಕೊಟ್ಟಿಲ್ಲ. ಗ್ರಾಮಸ್ಥರ ಹಿತದೃಷ್ಟಿಯಿಂದ ಜಮೀನಿನ ಮನೆಯಲ್ಲಿ ಇರಿಸಲಾಗಿತ್ತು.
- ನಾಗಪ್ಪ, ಹನುಮಂತಪ್ಪ ಕ್ಯಾತಪ್ಪನವರ ಮಾವ
-ಸಾಬಜಾನ ಇಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

