ಹಾವೇರಿ

ಶಿಬಿರ ವಿಕಾಸಕ್ಕೆ ಸಹಕಾರಿ: ಸಾಂಬ್ರಾಣಿ

Published On :

ಹಾನಗಲ್ಲ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳಿಗೆ ಸರ್ವಶಿಕ್ಷಣ ಅತ್ಯವಶ್ಯಕವಾಗಿ ಬೇಕು. ತರಬೇತಿ ಸಂಸ್ಥೆಗಳು ನಡೆಸುವ ಬೇಸಿಗೆ ಶಿಬಿರಗಳು ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಸಹಕಾರಿ ಎಂದು ಜೀವವಮಾ ನಿಗಮದ ಅಭಿವೃದ್ಧಿ ಅಧಿಕಾರಿ ಪ್ರಹ್ಲಾದ್ ಸಾಂಬ್ರಾಣಿ ಹೇಳಿದರು.
ಗುರುವಾರ ಇಲ್ಲಿನ ರಾಯಲ್ಟೆಕ್ ಕಂಪ್ಯೂಟರ್ ಸೆಂಟರ್‌ನ 4ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಶಿಕ್ಷಣದಲ್ಲಿ ಈಗ ಸ್ಪರ್ಧಾತ್ಮಕತೆ ಹೆಚ್ಚಾಗಿದ್ದು, ಆ ಸ್ಪರ್ಧಾತ್ಮಕತೆ ಮಕ್ಕಳಲ್ಲಿ ಬರಬೇಕಾದರೆ ಸತತ ಪ್ರಯತ್ನಶಾಲಿಗಳಾಗಿರಬೇಕು. ಪ್ರತಿಭೆ ಇದ್ದರೆ ಮಾತ್ರ ನಮ್ಮನ್ನು ಸಮಾಜದಲ್ಲಿ ಗುರುತಿಸುತ್ತಾರೆ. ಇದನ್ನು ಅರಿತು ಮಕ್ಕಳು ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು. ಎಲ್ಲ ಮಕ್ಕಳೂ ಪ್ರತಿಭಾವಂತರೆ, ಆದರೆ ಅವರನ್ನು ಗುರುತಿಸಿ ಪ್ರೋತ್ಸಾಹ ನೀಡುವಂತಹ ಮನಸ್ಸು ಎಲ್ಲರಲ್ಲಿಯೂ ಬಂದಾಗ ಮಾತ್ರ ಆ ಮಗುವನ್ನು ಒಬ್ಬ ಉತ್ತಮ ಪ್ರಜೆಯನ್ನಾಗಿ ಮಾಡಬಹುದು. ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಕೊಡಬೇಕು ಎಂದರು.
ಇದೆ ಸಂದರ್ಭದಲ್ಲಿ ಸ್ವರ್ಧೆಯಲ್ಲಿ ವಿಜೇತರಾದ ಮಮತಾ ಹೂವಿನಹಡಲಿ, ವೀರನಗೌಡ ಪಾಟೀಲ, ಉತ್ತಮ ಸೊಲಂಕಿ, ಎನ್.ಪಿ. ಮಹೇಶ ಅವರಿಗೆ ಬಹುಮಾನ ವಿತರಿಸಲಾಯಿತು. ರಾಯಲ್ ಕಂಪ್ಯೂಟರ್ ಸ್ಥಾಪಕ ಪ್ರಶಾಂತ ಬಿ. ಕಲಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫಕ್ಕೀರೇಶ ಈಳಿಗೇರ, ಹನುಮಂತ ಬೆಳ್ಳಿಕೇರಿ, ಶಿಲ್ಪ ಜನಗೇರಿ, ಮಮತಾ ಕೆ, ನಿರ್ಮಲಾ ಪಾಟೀಲ, ಸೌಮ್ಯ ಸಂಗೂರ, ರಘು ಚಹ್ವಾನ್, ಪ್ರದೀಪ್ ಕಂಡೆಣ್ಣನವರ್, ಶೋಭಾ ಗುರಣ್ಣನವರ್, ಪೌಜಿಯ ಶೇಟ್, ಪೂನಂ ಸಿಸರ್‌ಕರ್, ಜಯಶ್ರಿ ಕೆ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.