ಹಾವೇರಿ

ಕೋಳಿ ಸಾಕಾಣಿಕೆಯಿಂದ ಅಭಿವೃದ್ಧಿ ಸಾಧಿಸಿ

Published On :

ರಾಣಿಬೆನ್ನೂರು: ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣಕ್ಕಾಗಿ ಹಾಗೂ ಬಡವರು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸುವದಕ್ಕಾಗಿ ಜಿಲ್ಲಾ ಪಂಚಾಯಿತಿ ಲೆಕ್ಕ ಶೀರ್ಷಿಕೆ ಅನುದಾನದಡಿಯಲ್ಲಿ ಪಶುವೈದ್ಯ ಇಲಾಖೆಯಿಂದ ವಿತರಿಸಿರುವ ಗಿರಿರಾಜ ಕೋಳಿ ಮರಿಗಳನ್ನು ಪಡೆದ ಫಲಾನುಭವಿಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಕೆ.ಬಿ. ಕೋಳಿವಾಡ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಹಾವೇರಿ, ತಾಪಂ ರಾಣಿಬೆನ್ನೂರು, ತಾಲೂಕು ಪಶುಪಾಲನಾ ಆಸ್ಪತ್ರೆ ರಾಣಿಬೆನ್ನೂರು ಆಶ್ರಯದಲ್ಲಿ ಪಶು ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಯ್ಕೆಯಾಗಿರುವ 98 ಜನ ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿಗಳನ್ನು ವಿತರಿಸಿ ಮಾತನಾಡಿದರು.
ಸ್ವಾವಲಂಬಿ ಜೀವನ ನಡೆಸಿ: ರಾಜ್ಯದ ಹಿಂದುಳಿದ ಹಾಗೂ ಬಡವರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕವಾಗಿ ಹಿಂದುಳಿದವರು ಯೋಜನೆಯ ಲಾಭ ಪಡೆದು ಸ್ವಾವಲಂಬನೆ ಜೀವನ ನಡೆಸಲು ಮುಂದಾಗಬೇಕು.
ಅಭಿವೃದ್ಧಿ ಸಾಧಿಸಿ: ಜಿಲ್ಲಾ ಪಂಚಾಯಿತಿ ಲೆಕ್ಕ ಶೀರ್ಷಿಕೆ ಅನುದಾನದಡಿಯಲ್ಲಿ ಸಣ್ಣ ಪ್ರಮಾಣದ ಮೊತ್ತದಲ್ಲಿ ಗಿರಿರಾಜ ಕೋಳಿಗಳನ್ನು ಖರೀದಿಸಿ ಜಿಲ್ಲೆಯ ಬಡವರಿಗೆ ವಿತರಿಸುತ್ತಿದ್ದು, ಕೋಳಿ ಮರಿಗಳ ಸಾಕಾಣಿಕೆ ಮಾಡಿ ಅವುಗಳನ್ನು ಮಾರಾಟ ಮಾಡುವ ಬದಲು ಕೋಳಿಗಳಿಂದ ಉತ್ಪಾದನೆಯಾಗುವ ತತ್ತಿಗಳನ್ನು ಮಾರಾಟ ಮಾಡುವದರೊಂದಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮುಂದಾಗಬೇಕೆಂದು ಕೋಳಿವಾಡ ತಿಳಿಸಿದರು.
ಆರ್ಥಿಕ ಅಭಿವೃದ್ಧಿಗೆ ಬಳಸಿ: ತಾಲೂಕು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ೤ ಪರಮೇಶ ಹುಬ್ಬಳ್ಳಿ ಮಾತನಾಡಿ, 2012-13ನೇ ಸಾಲಿನ ಜಿಲ್ಲಾ ಪಂಚಾಯಿತಿ ಲೆಕ್ಕ ಶೀರ್ಷಿಕೆ ಅನುದಾನದಡಿಯಲ್ಲಿ ತಾಲೂಕಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಿಂದ ಆಯ್ಕೆ ಮಾಡಲಾಗಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 98 ಫಲಾನುಭವಿಗಳಿಗೆ ಗಿರಿರಾಜ ಕೋಳಿ ಮರಿಗಳನ್ನು ವಿತರಿಸಲಾಗಿದ್ದು, ಈ ಕೋಳಿಗಳು ನಾಟಿ ಕೋಳಿಗಳಿಗಿಂತ ಹೆಚ್ಚು ತೂಕ ಹೊಂದಿದ್ದು, 6 ತಿಂಗಳಿಂದ ತತ್ತಿಗಳನ್ನಿಡಲು ಪ್ರಾರಂಭಿಸಿ ಸುಮಾರು 3 ವರ್ಷಗಳ ಕಾಲ ದಿನಕ್ಕೆರಡು ತತ್ತಿಗಳನ್ನಿಡುವ ಸ್ವಭಾವದ ಕೋಳಿಗಳಾಗಿದ್ದು, ಬಡವರ ಮನೆಯ ಭಾಗ್ಯಲಕ್ಷ್ಮಿ ಎಂದರೆ ತಪ್ಪಾಗಲಾರದು.
  ಆದ ಕಾರಣ ಕೋಳಿಗಳನ್ನು ಮಾಂಸಕ್ಕಾಗಿ ಉಪಯೋಗಿಸದೆ ಆರ್ಥಿಕಾಭಿವೃದ್ಧಿಗೆ ಬಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಚಿಕಿತ್ಸೆ ಕೊಡಿಸಿ, ವಿಮೆ ಮಾಡಿಸಿ: ದನಗಳಿಗೆ ಬರುವ ಕಾಲುಬೇನೆ ರೋಗ ಹಾಗೂ ಕುರಿಗಳಿಗೆ ಬರುವ ರೋಗಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ಲಸಿಕೆ ಹಾಕುವುದಕ್ಕಾಗಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿರುವ ಪಶು ಆಸ್ಪತ್ರೆಗಳಿಗೆ ಲಸಿಕೆಗಳನ್ನು ಪೂರೈಸಿದ್ದು, ರೋಗಗಳಿಗೆ ತುತ್ತಾಗಿರುವ ದನ-ಕರುಗಳಿಗೆ ಹಾಗೂ ಕುರಿಗಳಿಗೆ ಲಸಿಕೆಯನ್ನು ಹಾಕಿಸಲು, ದನಗಳ ಮತ್ತು ಕುರಿಗಳ ಮಾಲೀಕರು ಮುಂದಾಗುವುದರ ಜೊತೆಗೆ, ವಿಮೆ ಮಾಡಿಸುವುದನ್ನು ಮರೆಯಬಾರದು ಎಂದು ಡಾ೤ ಪರಮೇಶ ಹುಬ್ಬಳ್ಳಿ ತಿಳಿಸಿದರು.
   ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ ಮಲಕನಹಳ್ಳಿ, ಸದಸ್ಯ ಹಾಲಪ್ಪ ಲಮಾಣಿ, ಎಪಿಎಂಸಿ ಅಧ್ಯಕ್ಷ ಸಣ್ಣ ತಮ್ಮಪ್ಪ ಬಾರ್ಕಿ, ಡಾ೤ ಬಸವರಾಜ ಜಲ್ಲೆರ, ಡಾ೤ ಎನ್.ಬಿ. ಅಂಗಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.