ವಿಳ್ಯೆದೆಲೆ ಬೆಳೆಯಿಂದ ಹೆಚ್ಚಿನ ಆದಾಯ: ರಾಮಸ್ವಾಮಿ
ಹಾನಗಲ್ಲ: ವಿಳ್ಯೆದೆಲೆ ಬಳ್ಳಿಯನ್ನು ವಿವಿಧ ಮುಖ್ಯ ಬೆಳೆಗಳಲ್ಲಿ ಉಪಬೆಳೆಯನ್ನಾಗಿ ಅಳವಡಿಸಿಕೊಳ್ಳುವ ಮೂಲಕ ರೈತರು ಹೆಚ್ಚಿನ ಆದಾಯ ಪಡೆಯಬಹುದೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ರಾಮಸ್ವಾಮಿ ಕರೆ ನೀಡಿದರು.
ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರೈತರಿಗಾಗಿ ಆಯೋಜಿಸಿದ್ದ ವಿಳ್ಯೆದೆಲೆ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಡಿಮೆ ನೀರಿರುವ ಪ್ರದೇಶದಲ್ಲಿಯೂ ಕೂಡಾ ಇದನ್ನು ಬೆಳೆಯಬಹುದಾಗಿದ್ದು, ಜೂನ್ ಮತ್ತು ಜುಲೈನಲ್ಲಿ ವಿಳ್ಯೆದೆಲೆ ಬಳ್ಳಿ ನಾಟಿಗೆ ಯೋಗ್ಯ ಸಮಯವಾಗಿದೆ. ಇದರಲ್ಲೂ ಅಭಿವೃದ್ಧಿಗೊಳಿಸಿದ ಹಲವು ತಳಿಗಳಿದ್ದು, ಅವುಗಳನ್ನು ತೋಟಗಳ ಮಧ್ಯಂತರ ಬೆಳೆಯನ್ನಾಗಿ ಬೆಳೆಯುವುದರಿಂದ ರೈತರು ಹೆಚ್ಚು ಲಾಭ ಪಡೆಯಬಹುದು ಎಂದು ವಿವರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಜಿ.ಡಿ. ಪೊಲೀಸ್ಪಾಟೀಲ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ವಿಳ್ಯೆದೆಲೆ ಕೃಷಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇಂಥ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಅಲ್ಲದೆ ಕೃಷಿಯನ್ನು ಯೋಜನಾಬದ್ಧವಾಗಿ ಹಾಗೂ ಕ್ರಮಬದ್ಧವಾಗಿ ಮಾಡುವ ಮೂಲಕ ಹೆಚ್ಚು ಆದಾಯ ಪಡೆಯುವುದನ್ನು ರೈತರಿಗೆ ಮನವರಿಕೆ ಮಾಡಲಾಗುತ್ತಿದೆ. ವಿಳ್ಯೆದೆಲೆಯನ್ನು ತಂಪಾದ ವಾತಾವರಣದಲ್ಲಿ ಬೆಳೆಯಬಹುದಾಗಿದ್ದು, ಮಿಶ್ರಬೆಳೆಯಾಗಿಯೂ ಬೆಳೆಯಬಹುದು. ಕೇವಲ ಅರ್ಧ ಎಕರೆ ಪ್ರದೇಶದಲ್ಲಿ ವಿಳ್ಯೆದೆಲೆ ಕೃಷಿ ಕೈಗೊಂಡರೆ ಪ್ರತಿ ಉತ್ತಮ ಇಳುವರಿ ಪಡೆಯಬಹುದಾಗಿದೆ. ಇದರಿಂದ ಕನಿಷ್ಠ ರು. ಲಕ್ಷ ಆದಾಯ ಪಡೆಯಬಹುದು ಎಂದು ವಿವರಿಸಿದರು.
ರೈತರು ವಿವಿಧ ಬೆಳೆಗಳ ಮಿಶ್ರ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

