ಹಾವೇರಿ

ಹೈನುಗಾರಿಕೆಯಿಂದ ನಿರಂತರ ಆದಾಯ

Published On :

ಶಿಗ್ಗಾಂವಿ: ರಾಷ್ಟ್ರೀಯ ಆರ್ಥಿಕತೆಯಲ್ಲಿ ಹೈನುಗಾರಿಕೆ ವಿಶೇಷ ಸ್ಥಾನ ಹೊಂದಿದ್ದು, ಹೈನುಗಾರಿಕೆಯ ಕೃಷಿಗೆ ಪೂರಕವಾಗಿ ಉತ್ತಮ ಸ್ವ ಉದ್ಯೋಗವಾಗಿದ್ದು ನಿರಂತರ ಆದಾಯ ತರಬಲ್ಲದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈನುಗಾರಿಕೆಯ ಅಧಿಕಾರಿಯಾದ ಪ್ರವೀಣ ದೊಡಮನಿ ಹೇಳಿದರು. ತಾಲೂಕಿನ ದುಂಡಶಿ ವಲಯದ ಕುನ್ನೂರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡ ಹೈನುಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ದಿನಗಳಲ್ಲಿ ಹೈನುಗಾರಿಕೆ ನಶಿಸುತ್ತಿದೆ. ಕಾರಣ ಉತ್ತಮ ಹೈನು ತಳಿಗಳ ಆಯ್ಕೆ, ವೈಜ್ಞಾನಿಕ ನಿರ್ವಹಣೆ, ಸಮತೋಲನ ಆಹಾರ ಪೂರೈಕೆ, ಧನಗಳ ಆರೋಗ್ಯ ರಕ್ಷಣೆ, ಮಿಶ್ರತಳಿ ಆಯ್ಕೆ, ಸರಿಯಾಗಿ ಇಲ್ಲದೆ ಇರುವುದು, ಇನ್ನು ಹಲವು ಕಾರಣಗಳಿಂದ ಹೈನುಗಾರಿಕೆ ನಶಿಸುತ್ತಿದ್ದು, ಹೈನುಗಾರಿಕೆ ಲಾಭದಾಯಕವಾಗಲು ಈ ಎಲ್ಲ ಕಾರಣಗಳನ್ನು ಸರಿಯಾಗಿ ತಿಳಿದುಕೊಂಡು ವೈಜ್ಞಾನಿಕ ರೀತಿಯನ್ನು ಅಳವಡಿಸಿಕೊಳ್ಳಬೇಕು. ಯೋಜನೆಯಿಂದ ಹೈನುಗಾರಿಕೆಯ ಜಾನುವಾರು ಖರೀದಿಗಾಗಿ ರು. 50 ಸಾವಿರದಿಂದ 1ಲಕ್ಷದ ವರೆಗೆ ಪ್ರಗತಿನಿಧಿ ನೀಡುತ್ತಿದೆ ಎಂದು ಮಾಹಿತಿ ನೀಡಿದರು.  ಒಕ್ಕೂಟದ ಅಧ್ಯಕ್ಷ ಜಯಶ್ರೀ ಚಿತ್ರಗಾರ, ಕೆಎಂಎಫ್ ಅಧ್ಯಕ್ಷ ಕಸ್ತೂರೆವ್ವ ಪತ್ತಾರ ಇದ್ದರು. ವಲಯದ ಸೇವಾ ಪ್ರತಿನಿಧಿ ಶಾರದಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಲಕ್ಷ್ಮಣ ತರಬೇತಿ ನಡೆಸಿಕೊಟ್ಟರು.
ಸಚಿವ ಹುಕ್ಕೇರಿಗೆ ಸನ್ಮಾನ
ಶಿಗ್ಗಾಂವಿ: ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿಗೆ ಸ್ವಾಗತಿಸಿ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ, ಯುವ ಕಾಂಗ್ರೆಸ್ ಮುಖಂಡರಾದ ಹನುಮರಡ್ಡಿ ನಡುವಿನಮನಿ, ಜಿಪಂ ಮಾಜಿ ಅಧ್ಯಕ್ಷ ಗುಡ್ಡಪ್ಪ ಜಲ್ದಿ, ಪ್ರಕಾಶ ಬಂಕಣ್ಣವರ,ಪುಟ್ಟಪ್ಪ ಜಲ್ದಿ, ಶೇಖಣ್ಣ ಗಣಾಚಾರಿ, ಶಂಭುಲಿಂಗ ಆಜೂರ, ಹಲವಾರು ಕಾರ್ಯಕರ್ತರು ಅಭಿನಂದನಾ ಕಾರ್ಯಕ್ರಮದಲ್ಲಿದ್ದರು.
ಮೂಲ ಸೌಲಭ್ಯ ಕಲ್ಪಿಸಿ
ಹಿರೇಕೆರೂರು: ಪಟ್ಟಣದಲ್ಲಿರುವ ಹಾಗೂ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವ ಸಣ್ಣ ಹಾಗೂ ಅತಿ ಸಣ್ಣ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ವರ್ತಕರ ಸಂಘದ ಅಧ್ಯಕ್ಷ ಕಂಠಾಧರ ಅಂಗಡಿ, ಕಾರ್ಯದರ್ಶಿ ಓಂಕಾರಪ್ಪ ಕುಂಕಮಗಾರ ಅವರು ಶಾಸಕ ಯು.ಬಿ. ಬಣಕಾರಗೆ ಮನವಿ ಸಲ್ಲಿಸಿದರು. ಪಟ್ಟಣದ ಸಂತೆ ಮೈದಾನದಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ, ವ್ಯಾಪಾರ ಮಾಡಲು ಕುಳಿತುಕೊಳ್ಳಲು ಕಟ್ಟಡ ನಿರ್ಮಾಣ ಮಾಡಬೇಕು, ಸರಿಯಾದ ರಸ್ತೆ ನಿರ್ಮಿಸಬೇಕು. ಸಂತೆಗಳನ್ನು ಡಾಂಬರೀಕರಣ ಮಾಡುವ ಮೂಲಕ ಸುಲಭ ಸಂಚಾರಕ್ಕೆ ಆನುಕೂಲ ಕಲ್ಪಿಸಬೇಕು, ಅವ್ಯವಸ್ಥೆಯಿಂದ ಕೂಡಿದ ಸಂತೆ  ಮೈದಾನಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಈ ಮೂಲಕ ಉತ್ತಮ ಮಾರುಕಟ್ಟೆಯನ್ನಾಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.