ಹಾವೇರಿ

ಪಡಿತರ ಧಾನ್ಯ ಅಕ್ರಮ ಮಾರಾಟ: ದೂರು

Published On :

ಶಿಗ್ಗಾಂವಿ: ಪಡಿತರ ಧಾನ್ಯ ಅಕ್ರಮ ಮಾರಿ ಪಡಿತರ ಕಾರ್ಡ್‌ದಾರರಿಗೆ ಧಾನ್ಯ ನೀಡದೆ ಅವರಿಗೆ ಧಮಕಿ ಹಾಕುತ್ತಿದ್ದಾರೆಂದು ತಾಲೂಕಿನ ದುಂಡಶಿ ಗ್ರಾಪಂ ಸದಸ್ಯ ಎ.ಪಿ. ಮುಲ್ಲಾ, ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ ದುಂಡಶಿ ಗ್ರಾಮದ ವ್ಯವಸಾಯ ಸಹಕಾರಿ ಸಂಘದಲ್ಲಿ ನೀಡುತ್ತಿರುವ ಪಡಿತರ ಆಹಾರ ಧಾನ್ಯವನ್ನು ನೀಡುತ್ತಿಲ್ಲ. ನಮ್ಮ ಕಾರ್ಡ್‌ನ ಧಾನ್ಯ ನೀಡುವಂತೆ ಸಂಘದಲ್ಲಿ ಹೋಗಿ ಕೇಳಿದರೆ ಆಹಾರ ಧಾನ್ಯ ಮುಗಿದಿದೆ ಎಂದು ಹೇಳುತ್ತಾರೆ. ಆದರೆ, ಸರ್ಕಾರದಿಂದ ಬಂದ ಆಹಾರ ಧಾನ್ಯವು ಎಲ್ಲಿ ಹೋಯಿತು ಎನ್ನುವ ಪ್ರಶ್ನೆ ಗ್ರಾಮಸ್ಥರದ್ದಾಗಿದೆ. ನಿತ್ಯವೂ ನೂರಾರು ಕಾರ್ಡ್‌ದಾರರಿಗೆ ಪಡಿತರ ಧಾನ್ಯ ನೀಡದ್ದು ಆಕ್ರೋಶಕ್ಕೆ ಕಾರಣವಾಗಿದೆ. ದುಂಡಶಿ ವ್ಯವಸಾಯ ಸಹಕಾರಿ ಸಂಘವು ದುಂಡಶಿ, ಮಡ್ಲಿ, ಅ.ಮ.ಕೊಪ್ಪ, ಬಿ.ಬಸಾಪುರ, ತಾಂಡಾ ಗ್ರಾಮಗಳ ವ್ಯಾಪ್ತಿಗೆ ಬರುತ್ತದೆ. ಪ್ರತಿ ತಿಂಗಳು 15ರಿಂದ 25ರ ವರೆಗೆ ಪಡಿತರ ನೀಡುವ ವ್ಯವಸ್ಥೆ ಕಲ್ಪಿಸಿದೆ. ಆದರೆ, ಮೊದಲ ವಾರ ಆಹಾರ ಧಾನ್ಯ ಮುಗಿದಿದೆ ಎನ್ನುತ್ತಾರೆ. ಸಂಘದ ಅಧ್ಯಕ್ಷ ನಿಂಗಪ್ಪ ಕೊಳೂರ ಅವರನ್ನು ಕೇಳಿದರೆ ಧಾನ್ಯ ಮುಗಿದಿದೆ ಎನ್ನುತ್ತಾರೆ. ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂದು ಮುಲ್ಲಾ, ದುಂಡಶಿ, ಮಡ್ಲಿ, ಅ.ಮ.ಕೊಪ್ಪ, ಬಿ.ಬಸಾಪುರ, ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.