ಸ್ವಚ್ಛತೆಯಿಂದ ಡೆಂಘೀ ನಿಯಂತ್ರಿಸಲು ಸಲಹೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜೂ. 29
ತಾಲೂಕಿನಲ್ಲಿ 104 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ನಾಲ್ವರು ಮೃತಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ, ಪ್ರತಿಯೊಬ್ಬರು ತಮ್ಮ ಮನೆಯಂಗಳ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡಲ್ಲಿ ಸಾಂಕ್ರಾಮಿಕ ರೋಗದಿಂದ ದೂರವಿರಲು ಸಾಧ್ಯ. ಈ ಕುರಿತು ಜಾಗೃತಿ ಜಾಥಾ ಇಲಾಖೆಯಿಂದ ಕೈಗೊಳ್ಳುವದಲ್ಲದೆ ವಿವಿಧ ಇಲಾಖೆಗಳ ಸಹಕಾರ ಅವಶ್ಯವಾಗಿದೆ ಎಂದು ಆರೋಗ್ಯಾಧಿಕಾರಿ ಡಾ ಮಧನ ಘೋಡಕೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹೇಳಿದರು.
ತಾಪಂ ಸಭಾ ಭವನದಲ್ಲಿ ಅಧ್ಯಕ್ಷೆ ಉಷಾ ಬಿಳೆಕುದರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ: ತಾಲೂಕಾದ್ಯಂತ ಶಾಲೆಗಳಲ್ಲಿ ಕುಡಿಯವ ನೀರಿನ ತೊಟ್ಟೆಗಳು ಮಲಿನಗೊಂಡಿವೆ. ವಿವಿಧ ಗ್ರಾಮಗಳಲ್ಲಿ ನೀರು ಸರಬರಾಜು ಮಾಡುವ ಪೈಪ್ಲೈಲೈನ್ಗಳು ಒಡೆದಿವೆ. ಪೈಪ್ನಲ್ಲಿ ಕೊಳಚೆ ಮಿಶ್ರಣಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಈ ಕುರಿತು ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸೂಚನೆ ನೀಡಿದರೂ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ ಎಂದು ಘೋಡಕೆ ಬೇಸರ ವ್ಯಕ್ತಪಡಿಸಿದರು.
ಗ್ರಾಮಗಳ ಸ್ವಚ್ಚತೆಗೆ ಕ್ರಮ ಕೈಗೊಳ್ಳಬೇಕಾದ ಪಿಡಿಓ,ಕಾರ್ಯದಶರ್ಗಳು ಗ್ರಾಮದಲ್ಲಿರಲ್ಲ. ಸಾಂಕ್ರಾಮಿಕ ರೋಗ ಹರಡಿದಲ್ಲಿ ಅವರನ್ನೇ ಹೊಣೆಗಾರನ್ನಾಗಿಸಿ. ಅನಾಹುತ ಸಂಭವಿಸಿದಲ್ಲಿ ಅವರ ಮೇಲೆ ಕ್ರಮಕೈಗೊಳ್ಳಿ ಎಂದು ಸದಸ್ಯ ಸಾತಣ್ಣನವರ, ನಿಂಗಪ್ಪ ಜವಳಿ ತಾಪಂ.ಅಧಿಕಾರಿಗಳಿಗೆ ಸೂಚಿಸಿದರು. ಇನ್ಮುಂದೆ ಕ್ರಮದ ಭರವಸೆ ಇಓ ನೀಡಿದರು.
ಪರಿಹಾರ ಕಲ್ಪಿಸಿ: ಸಾಂಕ್ರಾಮಿಕ ರೋಗ ತಡೆಗಟ್ಟಲು ಆರೋಗ್ಯ ಇಲಾಖೆ ಪ್ರತಿವರ್ಷ ಜೂನ್ ತಿಂಗಳ ಪೂರ್ವದಲ್ಲಿ ಜಾಥಾ ಹಮ್ಮಿಕೊಂಡು ಜನರಲ್ಲಿ ಅರಿವು ಮೂಡಿಸಿ ಎಂದು ಆರೋಗ್ಯಾಧಿಕಾರಿಗೆ ತಿಳಿಸಿದ ಸದಸ್ಯೆ ಸುಜಾತ ಕಲಕಟ್ಟಿ,ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರು ಇರಲ್ಲ. ರೋಗಿಗಳಿಗೆ ತೊಂದರೆಯಾಗುತ್ತಿದೆ. ಪರಿಹಾರ ಕಲ್ಪಿಸಿ ಎಂದು ಸೂಚಿಸಿದರು.
ಅನುದಾನ ಸದ್ಬಳಕೆಯಾಗಲಿ: ಜಲಾನಯನ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ 2011-12 ಮತ್ತು 13ನೇ ಸಾಲಿನ ಅನುದಾನ ಸದ್ಭಳಕೆಗೊಂಡಿಲ್ಲ. ಪ್ರಸಕ್ತ ವರ್ಷದಲ್ಲಿ ಅನುದಾನ ಬಳಕೆಯಾಗದಿದ್ದರೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಈಶ್ವರಗೌಡ ಪಾಟೀಲ, ತಿಪ್ಪಣ್ಣ ಸಾತಣ್ಣನವರ, ನಿಂಗಪ್ಪ ಜವಳಿ ನೀಡಿದ ಎಚ್ಚರಿಕೆಗೆ ಅಧಿಕಾರಿ ಮಾರ್ಗಸೂಚಿನ್ವಯ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದರು.
ತಾಲೂಕಿನ ಹನ್ನೆರಡು ಶಾಲೆಗಳಿಗೆ ಕಚೇರಿ ಆಡಳಿತ ವೆಚ್ಚದಲ್ಲಿ ಲ್ಯಾಪ್ಟಾಪ್ ಸೇರಿದಂತೆ ಇತರ ಸಾಮಗ್ರಿ ವಿತರಣೆ ಮಾಡಿರುವ ಗುತ್ತಿಗೆದಾರರು, ಸರ್ಕಾರದ ಬೊಕ್ಕಸಕ್ಕೆ ಜಮಾಗೊಳ್ಳಬೇಕಿದ್ದ ವ್ಯಾಟ್ ಆದಾಯ ನೀಡಿಲ್ಲ. ಆದರೂ ಶಿಕ್ಷಣಾಧಿಕಾರಿಗಳು ಬಿಲ್ಲು ಹಣ ಪಾವತಿಸಿದ್ದಾರೆ. ಇದು ಸರ್ಕಾರಕ್ಕೆ ಮಾಡಿದ ವಂಚನೆ. ಗುತ್ತಿಗೆದಾರರು ನೀಡಿದ ಬಿಲ್ಲು ಪರಿಶೀಲಿಸಿ ಹಣ ಪಾವತಿಸಲು ಒಪ್ಪಿಗೆ ನೀಡಬೇಕಿದ್ದ ತಾಪಂ ಅಧಿಕಾರಿಗಳು ಪರಿಶೀಲಿಸದೇ ಶಿಕ್ಷಣಾಧಿಕಾರಿಗಳ ತಾಳಕ್ಕೆ ಸೈ ಎಂದು ಸಹಿ ಹಾಕಿ ಒಪ್ಪಿಗೆ ನೀಡಿದ್ದನ್ನು ಗಮನಿಸಿದಲ್ಲಿ ಖರೀದಿಯಲ್ಲಿ ಅವ್ಯವಹಾರ ನಡೆದ ಸಂಶಯ ಕಾಡುತ್ತಿದೆ.
ಇದರಿಂದಾಗಿ ಸರ್ಕಾರದ ಬೊಕ್ಕಸ ತುಂಬಿಸುವ ವ್ಯಾಟ್ ಆದಾಯಕ್ಕೂ ಕೊಡಲಿ ಪೆಟ್ಟುಕೊಟ್ಟು ಗುತ್ತಿಗೆದಾರನಿಗೆ ಸುಮಾರು ರು. 11 ಲಕ್ಷ ಬಿಲ್ಲು ಪಾವತಿಸದೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಬಿಲ್ಲು ಪರಿಶೀಲಿಸಿದಲ್ಲಿ ನಕಲಿ ಎನಿಸುತ್ತಿವೆ ಎಂದು ಸದಸ್ಯ ತಿಪ್ಪಣ್ಣ ಸಾತಣ್ಣನವರ ಗಂಭೀರ ಆರೋಪಿಸಿದರು.
ಸದಸ್ಯರ ಮಾತಿನಿಂದ ಕೆರಳಿದ ತಾಪಂ ಅಧಿಕಾರಿ ಬಿ. ರೇವಣ್ಣ, ಅವ್ಯವಹಾರ ನಡೆದಿಲ್ಲ. ಪರಿಶೀಲಿಸುವ ಭರವಸೆ ನೀಡಿದರು. ಅಧ್ಯಕ್ಷೆ ಉಷಾ ಬಿಳಿಕುದರಿ, ಉಪಾಧ್ಯಕ್ಷೆ ಸುಗಂದಬಾಯಿ ಘೋಡಕೆ, ಸದಸ್ಯರಾದ ಲಕ್ಷ್ಮೀ ತೋಟದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಉಮಾ ಡವಗಿ, ಗೀತಾ ಹಂಚಿನಮನಿ, ವೀರನಗೌಡ್ರ ಪಾಟೀಲ, ನಿಂಗಪ್ಪ ಹರಿಜನ, ಫರೀದಾಬಾನು ಶೇಖಸನದಿ, ಶಾಂತಮ್ಮ ಬೊಮ್ಮನಹಳ್ಳಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

