ಹಾವೇರಿ

ಸ್ಮಾರ್ಟ್‌ಕ್ಲಾಸ್‌ನಿಂದ ಗುಣಾತ್ಮಕ ಶಿಕ್ಷಣ: ಆನಂದ

Published On :

ಹಿರೇಕೆರೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಸ್ಮಾರ್ಟ್ ಕ್ಲಾಸ್ ಉತ್ತಮ ಕಲಿಕಾ ಸಾಧನವಾಗಿದೆ. ಇದರ ಅಡಿಯಲ್ಲಿ ಮಕ್ಕಳು ಪ್ರಾಯೋಗಿಕವಾಗಿ ಶಿಕ್ಷಣ ಪಡೆಯುವ ಜತೆಗೆ ಸರ್ವತೋಮುಖ ಪ್ರಗತಿಗೆ ಸಹಾಯಕವಾಗಲಿದೆ ಎಂದು ಬಿಇಓ ಎಂ.ಸಿ. ಆನಂದ ನುಡಿದರು.
ತಾಲೂಕಿನ ರಟ್ಟಿಹಳ್ಳಿ ಗ್ರಾಮದ ಪ್ಯಾಟಿಗೌಡರ ನರ್ಸರಿ ಹಾಗೂ ಪ್ರಾಥಮಿಕ ಶಾಲೆ, ಲಯನ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಅಭಿವೃದ್ಧಿಗೆ ಲಯನ್ಸ್ ಶಾಲೆಯ ಕೊಡುಗೆ ಅಪಾರ. ಸ್ಮಾರ್ಟ್ ತರಗತಿಗಳಲ್ಲಿ ಪಠ್ಯದ ಜತೆಗೆ ಪಠ್ಯೇತರ ಜ್ಞಾನ ಸಂಪಾದಿಸಲು ಸಾಧ್ಯವಿದೆ. ತಂತ್ರಜ್ಞಾನ ಬಳಸಿದ್ದು, ಅಂತರ್ಜಾಲದಂತಹ ವೈಜ್ಞಾನಿಕ ಪಠ್ಯವನ್ನು ಕೆಳಹಂತದಲ್ಲಿಯೇ ಪಡೆಯುವುದರಿಂದ ಜೀವನದಲ್ಲಿ ಕ್ಲಿಷ್ಟಕರ ಸಮಸ್ಯೆಗಳನ್ನು ಬಹು ಹಂತದಲ್ಲಿ ನಿವಾರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಶಾಲೆಯ ಉತ್ತರೋತ್ತರ ಅಭಿವೃದ್ಧಿಗೆ ಸಮುದಾಯದ ಪಾತ್ರ ಅಮೋಘವಾದುದು ಎಂದರು.
ಬೀಜೋತ್ಪಾದಕ ಆರ್.ಎಸ್. ಹುಲ್ಮನಿ, ಚೈತ್ರದ ಚಿಗುರು ಹಸ್ತಪತ್ರಿಕೆ ಬಿಡುಗಡೆಗೊಳಿಸಿ, ರಟ್ಟಿಹಳ್ಳಿ ಸುತ್ತಲಿನ ಗ್ರಾಮೀಣ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಈ ಶಿಕ್ಷಣ ಸಂಸ್ಥೆಗೆ ಜನಪ್ರತಿನಿಧಿಗಳು ಅನುದಾನ ನೀಡಬೇಕು ಎಂದು ಸಲಹೆ ಮಾಡಿದರು.
ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಆರ್.ಬಿ. ಬಳ್ಳೇರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಭಿನಂದನ ಬೋಗಾರ, ಕಾರ್ಯದರ್ಶಿ ಎಸ್.ಬಿ. ಪಾಟೀಲ, ಸದಸ್ಯ ಹಾಲನಗೌಡ ಮುದಿಗೌಡ್ರ, ಶಂಭಣ್ಣ ಗೂಳಪ್ಪನವರ, ವೈ.ಎಲ್. ಬಾಜಿರಾಯರ, ಗಣೇಶ ವೇರ್ಣೇಕರ, ಬಿ.ಜಿ. ಮೋಘಿಮಠ, ವಿ.ಎಸ್. ಅರ್ಕಾಚಾರಿ, ಎಂ.ಎಚ್. ಹರವಿಶೆಟ್ಟರ, ಎನ್.ಕೆ. ಮನ್ನೋಪಂತರ, ವಿದ್ಯಾಶ್ರೀ ಅಜ್ಜಂಪುರ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.