ಹಾವೇರಿ

ತಪ್ಪಿಗೆ ಪ್ರಾಯಶ್ಚಿತ್ತವಾದರೆ ಪುಣ್ಯ: ಶ್ರೀ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ.4
ಧರ್ಮವೇ ಮನುಷ್ಯನನ್ನು ದಾರಿಗೆ ತರಬೇಕು, ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾದರೆ ಪುಣ್ಯವಂತನಾಗಬಹುದು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಕರೆ ನೀಡಿದರು.
ಹಾನಗಲ್ಲಿನಲ್ಲಿ ಕುಮಾರ ಶಿವಯೋಗಿಗಳ 83ನೇ ಸ್ಮರಣೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾಹಿತ್ಯ, ಕಲೆ ಬೆಳೆಸಿ: ಮಠ-ಮಠಾಧೀಶರು ಸಾಮಾಜಿ ಉನ್ನತಿಗೆ ಶ್ರಮಿಸಬೇಕು. ಇದರಿಂದ ಸಮಾಜದ ಕಳೆ-ಕೊಳೆ ಕಳೆದು ಸತ್ಸಮಾಜ ನಿರ್ಮಾಣ ಸಾಧ್ಯ. ಸಮಾಜ ಜಾಗೃತಿಯೇ ಧರ್ಮಪೀಠಗಳ ಆದ್ಯ ಕರ್ತವ್ಯ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಧರ್ಮಪೀಠಗಳು ಮುಂದಾಗುವ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವಂತಾಗಬೇಕೆಂದರು.
ಹುಕ್ಕೇರಿಮಠದ ಸದಾಶಿವ ಶ್ರೀಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನ-ಧರ್ಮದ ಮೂಲಕ ಸತ್ಕಾರ್ಯಗಳನ್ನು ಪ್ರೋತ್ಸಾಹಿಸಬೇಕು. ನಾಡಿನ ಇತಿಹಾಸದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳವರು ಸಮಾಜ ಸಮಾಜ ಎನ್ನುತ್ತ ಸಮಾಜಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟವರು. ಸಮಾಜದ ಕಟ್ಟ ಕಡೆಯ ಮನುಷ್ಯನು ಕೂಡ ನೆಮ್ಮದಿಯಿಂದ ಬದುಕಬೇಕೆಂಬುದು ಅವರ ಆಶಯವಾಗಿತ್ತು ಎಂದರು.
ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗಿಶ್ವರ ಶ್ರೀ, ಬಿಜಕಲ್ಲ ಶಿವಲಿಂಗ ಶ್ರೀ, ಅಕ್ಕಿಆಲೂರಿನ ಶಿವಬಸವ ಶ್ರೀ, ಅಕ್ಕಿಆಲೂರು ಮುತ್ತಿನಕಂತಿಮಠದ ಶ್ರೀಗಳು ಪಾಲ್ಗೊಂಡಿದ್ದರು.
ಇದೇ ಸಂದರ್ಭ ಡಾ೤ ಸಂಗಮೇಶ ಹಂಡಗಿ ಅವರ ವೀರವಿರಾಗಿ ಸಮಾಜಾನುರಾಗಿ ಎಂಬ ತಲೆಬರಹದ ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ ಕುರಿತ ಗ್ರಂಥವನ್ನು ಮಾಜಿ ಸಚಿವ ಸಿ.ಎಂ. ಉದಾಸಿ ಬಿಡುಗಡೆಗೊಳಿಸಿದರು. ಡಾ೤ ವಿನಯ ಉದಾಸಿ ಅವರನ್ನು ಫಕ್ಕೀರಪ್ಪ ಮಹಾರಾಜಪೇಟ ದತ್ತಿ ನಿಧಿಯಿಂದ ಸನ್ಮಾನಿಸಲಾಯಿತು. ಜನಪದ ಕಲಾವಿದ ಹಾಲಕ್ಕಿ ಹಾಲೇಶ ಗುಂಗೇರ ಅವರಿಂದ ಹಾಸ್ಯ ಸಂಭ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.