ಹಾವೇರಿ

ದೇವರು, ಧರ್ಮಗ್ರಂಥದ ಮೇಲಾಣೆ, ಎಚ್ಚರ!

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮಾ.4
ಭ್ರಷ್ಟಾಚಾರ ಮುಕ್ತ ಆಡಳಿತದ ಚುಕ್ಕಾಣಿ ಹಿಡಿಯುವ ಅಭ್ಯರ್ಥಿಗಳಿಗೆ ನಿಮ್ಮ ಮತವಿರಲಿ. ಆತ್ಮಸಾಕ್ಷಿ, ಮನೆ ದೇವರು, ತಾಯಿ-ತಂದೆ, ಭಗವದ್ಗೀತೆ, ಕುರಾನ್, ಬೈಬಲ್ ಮೇಲೆ ಆಣೆ ಎನ್ನುತ್ತ ಈಗ ಮಾಡುವ ತಪ್ಪಿನಿಂದ ಮುಂದಿನ 5 ವರ್ಷ ಪರಿತಪಿಸಬೇಕಾದೀತು ಎಂಬ ಸಂದೇಶ ಹೊತ್ತ ಕರಪತ್ರ ಹಾನಗಲ್ಲ ನಗರದಲ್ಲಿ ಹರಿದಾಡುತ್ತಿದೆ.
ಹಾನಗಲ್ಲ ನಗರದ ಮತದಾರರೇ, ಇದೋ ನಿಮಗೊಂದು ಆಣೆ.... ಎಂಬ ತಲೆಬರಹದಡಿ ಮತದಾರ ಪ್ರಭುವೆ ಎಂದು ಸಂಬೋಧಿಸುವ ಕರಪತ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒತ್ತಾಯಕ್ಕೆ ಮಣಿದು, ಪ್ರತಿಷ್ಠಿತರ ಮರ್ಯಾದೆ ಉಳಿಸಲು, ಹಣ ಮಾಡುವವರಿಗೆ, ಯಾರನ್ನೋ ಸೋಲಿಸಲು-ಯಾರನ್ನೋ ಗೆಲ್ಲಿಸಲು, ಮತ ಕೊಳ್ಳುವವರು ಚುನಾವಣೆಗೆ ಸ್ಪರ್ಧಿಸಿದವರಿದ್ದಾರೆ. ಇಂಥವರನ್ನು ಆಯ್ಕೆ ಮಾಡಬೇಡಿ.
ಅಭ್ಯರ್ಥಿಗಳಲ್ಲಿ ಉತ್ತಮ ಸಾಮಾಜಿಕ ಕಳಕಳಿಯ ಕಾರ್ಯಕರ್ತರಿದ್ದಾರೆ, ಕಳಂಕ ರಹಿತರಿದ್ದಾರೆ. ಪಾರದರ್ಶಕ ವ್ಯಕ್ತಿತ್ವ, ನಿಷ್ಠುರ, ಸುಸಂಸ್ಕೃತ, ಸದೃಢ, ಸಾಮ್ರಾಜ್ಯಶಾಹಿ ಮನಸ್ಥಿತಿಯಿಂದ ದೂರವಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ. ಮತದಾನ ಗುಪ್ತವಾಗಿದ್ದು, ಮತದಾರರು ಹೆದರುವ ಅಗತ್ಯವಿಲ್ಲ. ಹಣದಾಸೆಗೆ ಮತ ಮಾರಿಕೊಳ್ಳುವುದು ಬೇಡ. ಯಾವುದೇ ಪಕ್ಷದ ಅಭ್ಯರ್ಥಿ ಇರಲಿ ನಗರದ ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಿರಿ ಎಂಬ ಮನವಿ ಇದರಲ್ಲಿದೆ.
ಎಚ್ಚರ ನಾವು-ನೀವೆಲ್ಲ ಆಣೆ ತಿಂದಿದ್ದೇವೆ. ಈಗ ಒಂದು ಕ್ಷಣ ಮಾಡುವ ತಪ್ಪಿನಿಂದ ಮುಂದಿನ 5 ವರ್ಷಗಳ ಕಾಲ ಪರಿತಪಿಸಬೇಕಾದೀತು ಜೋಕೆ.... ಎಂದು ಎಚ್ಚರಿಕೆ ನೀಡುತ್ತಿದೆ ಪ್ರಶಾಂತ ಮುಚ್ಚಂಡಿ, ಆದಿಶೇಷ ಕುಂಠೆ ಅವರ ಹೆಸರಿನಿಂದ ಪ್ರಕಟವಾದ ಈ ಕರಪತ್ರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.