ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕಾರ್ಯಾಗಾರ
ಸವಣೂರು: ಸ್ಥಳೀಯ ವಿದ್ಯಾಭಾರತಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ತಾಲೂಕಿನ ಪ್ರೌಢ ಶಾಲಾ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಸಂಘಗಳ ಒಕ್ಕೂಟದಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತಾದ ಒಂದು ದಿನದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಎಂ. ನೀರಲಗಿ ಮಾತನಾಡಿ, ಮಕ್ಕಳಲ್ಲಿರುವ ಆಸೆ, ಆಸಕ್ತಿ ಗುರುತಿಸಿ ಶಿಕ್ಷಕರು ಪಾಠ ಬೋಧನೆ ಮಾಡುವಂತಾಗಬೇಕು. ಆದರೆ ಇಂದು ಪಾಲಕರು ತಮ್ಮ ಆಸೆಯನ್ನು ಒತ್ತಾಸೆಯ ಮೂಲಕ ಮಕ್ಕಳ ಮೇಲೆ ಹೇರಿ ವೈಧ್ಯಕೀಯ, ತಾಂತ್ರಿಕ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದರು. ವಿಷಯ ಪರಿವೀಕ್ಷಕ ಆರ್.ಎನ್. ಹುರಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡರೂ ಸಂಶೋಧನೆಯತ್ತ ಒಲವು ತೋರುವವರ ಸಂಖ್ಯೆ ಅತೀ ಕಡಿಮೆಯಾಗಿದೆ ಎಂದು ವಿಷಾದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ. ಮಾಳಗಿಮನಿ ಕಾರ್ಯಕ್ರಮ ಉದ್ಘಾಟಿಸಿದರು. ಸರ್ ಸಿ.ವಿ. ರಾಮನ್ ಅವರ ಜೀವನ ಚರಿತ್ರೆ ಹಾಗೂ ಸಂಶೋಧನೆ ಕುರಿತಾಗಿ ಯಲವಿಗಿ ಪ್ರೌಢಶಾಲೆಯ ಶಿಕ್ಷಕ ಕೆ.ಎಸ್. ಶಿವಮೂರ್ತಿ ಹಾಗೂ ಡೊಂಬರಮತ್ತೂರ, ಶಿಕ್ಷಕ ಗುರುಬಸಯ್ಯ ಹತ್ತಿಮತ್ತೂರ ಮಾತನಾಡಿದರು. ಎಸ್.ಆರ್. ಭಟ್ ಪ್ರಾಸ್ತಾವಿಕ ಮಾತನಾಡಿದರು. ಬಿ.ಬಿ. ಜಕಾತಿ, ತಾಲೂಕಿನ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಹಾಜರಿದ್ದರು. ಎಸ್.ಕೆ. ದಿವಾಕರ ಸ್ವಾಗತಿಸಿದರು. ಸಿ.ವಿ. ಗುತ್ತಲ ನಿರ್ವಹಿಸಿದರು. ಆರ್.ಆರ್. ಅಯ್ಯನಗೌಡ್ರ ವಂದಿಸಿದರು.
ರಸಪ್ರಶ್ನೆ ಉದ್ಘಾಟನೆ
ಹಾವೇರಿ: ತಂತ್ರಜ್ಞಾನದ ಯುಗದಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ಸಿದ್ಧವಾಗಿರುತ್ತದೆ. ತಂತ್ರಜ್ಞಾನ ಅರಿತವರಿಗೆ ಮಾತ್ರ ಉತ್ತರಗಳು ಬೇಗ ದೊರೆಯುತ್ತವೆ ಎಂದು ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯಪಟ್ಟರು. ಸ್ಥಳೀಯ ಜಿ-ಟೆಕ್ ಕಂಪ್ಯೂಟರ್ ಸಂಸ್ಥೆ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಐಟಿ ಚಾಂಪಿಯನ್ ರಸಪ್ರಶ್ನೆಯ 2ನೇ ಹಂತವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನದ ಸಾಮಾನ್ಯ ಜ್ಞಾನ ಇರಬೇಕು ಎಂದು ಸಲಹೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕಲ್ಮೇಶ್ವರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ರಮೇಶ ಮುದ್ನಾಳ ಮಾತನಾಡಿದರು. ತರಬೇತುದಾರ ನಾಗರಾಜ ನಡುವಿನಮಠ ಸಂಸ್ಥೆಯ ನಿದೇಶಕ ಸುನೀಲ ಹಿರೇಮಠ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆಯ ಗಿರೀಶ ಬೈಲಣ್ಣನವರ ಹಾಗೂ ಶ್ರೀಧರ ಕುರ್ಲಿ ಪ್ರಥಮ ಸ್ಥಾನ ಗಳಿಸಿ ಕೇರಳದ ಕೊಚ್ಚಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ಸಂಸ್ಥೆಯ ಜಗದೀಶ ಹಿರೇಮಠ, ಭರಮಗೌಡ ಹರ್ತಿ, ಆದರ್ಶ ನಾಗಜ್ಜನವರ, ಚಂದ್ರಶೇಖರ, ಎಂ. ಪ್ರವೀಣ ಬ್ಯಾತನಾಳ, ಶಾಹಿನ್ಕೌಸರ ನೆಗಳೂರ, ರುಕಿಯಾಬಾನು ನೆಗಳೂರ, ಸಚಿನ ಹಾವೇರಿಮಠ, ಸುಮುಖ ಕುಲಕರ್ಣಿ, ಕಾರ್ತಿಕ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

