ಶಿವಲಿಂಗ ಶ್ರೀ ಕೊಡುಗೆ ಅಮೂಲ್ಯ: ಕೊರಗಲ್ಲ
ಹಾವೇರಿ: ಧರ್ಮ ಜಾಗೃತಿಯ ನಿಟ್ಟಿನಲ್ಲಿ ಮಾನವ ಕುಲಕ್ಕೆ ದಿವ್ಯ ಕೊಡುಗೆಯನ್ನು ಶಿವಲಿಂಗ ಶ್ರೀಗಳು ನೀಡಿದ್ದಾರೆ. ಶ್ರೀಗಳು ಧರ್ಮಸೇವೆ ಜೊತೆಗೆ ಸಾಹಿತ್ಯ ಹೊಂದಿ ಜಾಗೃತಿ ಮೂಡಿಸಿದರು ಎಂದು ಸಾಹಿತಿ ವಿರೂಪಾಕ್ಷಪ್ಪ ಕೊರಗಲ್ಲ ನುಡಿದರು. ಸ್ಥಳೀಯ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಶಿವಲಿಂಗ ಶ್ರೀಗಳ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಿದ್ದ ರು. ದತ್ತಿದಾನಿಗಳನ್ನು ಕೆ.ಆರ್.ನಾಶಿಪುರ ಪರಿಚಯಿಸಿದರು. ಪ್ರಕಾಶ ವಾಲಿಶೆಟ್ಟರ, ಸಿ.ಜಿ. ತೋಟಣ್ಣನವರ, ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ದತ್ತಿ ದಾನಿ ಸಿದ್ದಣ್ಣ ಚೌಶೆಟ್ಟಿ ಭಾಗವಹಿಸಿದ್ದರು. ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸಿದ್ದರು. ನಾಗರಾಜ ದೇಸಳ್ಳಿ, ಗಂಗಾಧರ ನಂದಿ, ಕೆ.ಬಿ. ಭಿಕ್ಷಾವರ್ತಿಮಠ ಇದ್ದರು. ಎಂ.ಎಸ್. ಮರಿಗೂಳಪ್ಪನವರ ನಿರ್ವಹಿಸಿದರು. ಸಿ.ಎಸ್. ಮರಳೀಹಳ್ಳಿ ಸ್ವಾಗತಿಸಿದರು. ಕೆ.ಆರ್. ಹಿರೇಮಠ ವಂದಿಸಿದರು.
9ರಂದು ಮಹಿಳಾ ದಿನ
ಹಾನಗಲ್ಲ: ಹಾನಗಲ್ಲಿನ ಸರಸ್ವತಿ ಮಹಿಳಾ ಮಂಡಳದಲ್ಲಿ ಮಾ. 9ರಂದು ಬೆಳಗ್ಗೆ 11ಕ್ಕೆ ಮಹಿಳಾ ದಿನ ಆಚರಿಸುತ್ತಿದ್ದು, ಸಂಸ್ಥೆಯ ಗೌರವಾಧ್ಯಕ್ಷೆ ನೀಲಮ್ಮ ಉದಾಸಿ ಸಮಾರಂಭ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮೀ ಗುಡಗುಡಿ ವಹಿಸುವರು. ಹುಬ್ಬಳ್ಳಿಯ ಚಿನ್ಮಯಿ ಚೇತನ ಕಾಲೇಜಿನ ಪ್ರಾಚಾರ್ಯೆ ಸರಳಾ ಹೊಂಬಾಳಿ, ಹಾನಗಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಿವಲೀಲಾ ಖ್ಯಾಡಿ ಉಪನ್ಯಾಸ ನೀಡುವರು. ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಕಾಡಶೆಟ್ಟಿಹಳ್ಳಿ ವಿ.ಆರ್. ಪಾಟೀಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಲತಾ ಸದಾರಾಧ್ಯಮಠ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಟ್ರ್ಯಾಕ್ಟರ್ನಿಂದ ಬಿದ್ದು ಸಾವು
ಹಾವೇರಿ: ನಿರ್ಲಕ್ಷ್ಯದಿಂದ ವೇಗವಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿದ ಪರಿಣಾಮ ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಗುತ್ತಲದಲ್ಲಿ ಬುಧವಾರ ಜರುಗಿದೆ. ಮೃತನನ್ನು ಮಹ್ಮದಅಲಿ ಹಜರತಲಿ ಸುಂಕದ (55) ಎಂದು ಗುರುತಿಸಲಾಗಿದೆ. ಅಪಘಾತದ ನಂತರ ಪರಾರಿಯಾದ ಟ್ರ್ಯಾಕ್ಟರ್ ಚಾಲಕ ಭರಮಪ್ಪ ಶಿವಪ್ಪ ಸುಟಗುರಿ ವಿರುದ್ಧ ಶಿವಪ್ಪ ಗುಡ್ಡಪ್ಪ ಮಲ್ಲಾರಿ ಹಾವೇರಿ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಮದ್ಯ ವ್ಯಸನಿ ಆತ್ಮಹತ್ಯೆ
ಹಾವೇರಿ: ಬಹುದಿನಗಳಿಂದ ಮದ್ಯ ವ್ಯಸನಕ್ಕೆ ಬಿದ್ದಿದ್ದ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರೆಳೆದ ಘಟನೆ ರಾಣಿಬೆನ್ನೂರು ತಾಲೂಕಿನ ಕಾಕೋಳ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಬಸಪ್ಪ ನಿಂಗಪ್ಪ ಹೊಳೆಯಪ್ಪನವರ (55) ಎಂದು ಗುರುತಿಸಲಾಗಿದೆ. ಈತನ ಪತ್ನಿ ಹೊನ್ನವ್ವ ಬಸಪ್ಪ ಹೊಳೆಯಪ್ಪನವರ ರಾಣಿಬೆನ್ನೂರು ಗ್ರಾಮೀಣ ಪೊಲೀಸರಿಗೆ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

