ಬ್ಯಾಡಗಿ ಪುರಸಭೆ: ಅಧಿಕ ಮತದಾನ
ಬ್ಯಾಡಗಿ: ಮತ ಯಂತ್ರದ ದೋಷದಿಂದಾಗಿ 17ನೇ ವಾರ್ಡ್ನಲ್ಲಿ ಅರ್ಧ ಗಂಟೆ ಕಾಲ ಮತದಾನ ಸ್ಥಗಿತಗೊಂಡಿದ್ದನ್ನು ಬಿಟ್ಟರೆ ಬ್ಯಾಡಗಿ ಪುರಸಭೆಯ 23 ವಾರ್ಡ್ಗಳಿಗೆ ಗುರುವಾರ ಮತದಾನ ಶಾಂತಿಯುತವಾಗಿದ್ದು, ಶೇ. 81.39ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬಿಸಿಲಿನ ತಾಪವಿದ್ದರೂ ಮತದಾರರು ಉತ್ಸಾಹದಿಂದಲೇ ಮತಗಟ್ಟೆಗಳಿಗೆ ಆಗಮಿಸಿದರು. ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಬೆಂಬಲಿಗರು ಮತದಾರರನ್ನು ಮತಗಟ್ಟೆಗೆ ಕರೆತರುವ ಪ್ರಯತ್ನವನ್ನು ನಿರಂತರವಾಗಿ ನಡೆಸಿದರು. ವಾರ್ಡ್ ನಂ. 21ರಲ್ಲಿ 550 ಮತಗಳ ಪೈಕಿ 483 ಮತ ಚಲಾವಣೆಯಾಗಿ (ಶೇ. 87.82) ಗರಿಷ್ಠ ಎನಿಸಿದರೆ, 18ನೇ ವಾರ್ಡ್ನಲ್ಲಿ 1802 ಮತಗಳ ಪೈಕಿ 1275 ಮತ ಚಲಾವಣೆಯಾಗಿ (ಶೇ. 70.75) ಅತಿ ಕಡಿಮೆ ಎನಿಸಿದೆ. ಚಲಾವಣೆಯಾದ ಮತಗಳ ವಿವರ (ಆವರಣದಲ್ಲಿ ಒಟ್ಟು ಮತಗಳು): ವಾರ್ಡ್ 1-700 (824), ವಾರ್ಡ್ 2-720, (830), 3-687 (806), 4-771 (1022), 5-658 (806), 6-681(827), 7-626 (795), 8-698 (812), 9-530 (623), 10-467 (564), 11-578 (709), 12-545 (644), 13-684 (779), 14-575 (677), 15-574 (745), 16-899 (1135), 17-547 (641), 19-467 (594), 20-753 (928), 22-919 (1095) ಹಾಗೂ 23ರಲ್ಲಿ-933 (1161).
ಚುನಾವಣೆ ಕಣದಲ್ಲಿ 53 ಪುರುಷರು, 41 ಮಹಿಳೆಯರು ಸೇರಿ 94 ಅಭ್ಯರ್ಥಿಗಳು ಕಣದಲ್ಲಿದ್ದು, 11ರಂದು ಎಣಿಕೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

