ಶಿಗ್ಗಾಂವಿ ಶೇ. 79.20ರಷ್ಟು ಮತದಾನ
ಶಿಗ್ಗಾಂವಿ: ತಾಲೂಕಿನ ಶಿಗ್ಗಾಂವಿ ಮತ್ತು ಬಂಕಾಪುರದಲ್ಲಿ ಗುರುವಾರ ನಡೆದ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಬೆಳಗಿನ ವೇಳೆ ಬಿರುಸಿನ ಮತದಾನವಾಗಿದ್ದು. ಮಧ್ಯಾಹ್ನ ವೇಳೆಗೆ ನಿರಾಶಾದಾಯಕವಾಗಿ ಕಂಡುಬಂತು. ಎಲ್ಲ ಮತ ಕೇಂದ್ರಗಳಲ್ಲೂ ಜನರು ಸಾಲಗಟ್ಟಿ ನಿಂತು ಶಾಂತಿಯುತವಾಗಿ ತಮ್ಮ ಹಕ್ಕು ಚಲಾಯಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಟ್ಟು 8,721 ಪುರುಷರು ಹಾಗೂ 7,776 ಮಹಿಳೆಯರು ಸೇರಿದಂತೆ ಒಟ್ಟು 16,469 ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕಿತ್ತು. ಆದರೆ, ಚಲಾವಣೆಯಾದ ಒಟ್ಟು ಫಲಿತಾಂಶ ಶೇ. 79.20 ಆಗಿದ್ದು, ಅದರಲ್ಲಿ 6,850 ಪುರುಷರು ಹಾಗೂ 6,215 ಮಹಿಳೆಯರು ಸೇರಿದಂತೆ ಒಟ್ಟು 13,065 ಮತದಾರರು ಮಾತ್ರ ಹಕ್ಕು ಚಲಾಯಿಸಿದರು.
ಬಂಕಾಪುರ ಶೇ. 80ರಷ್ಟು: ತಾಲೂಕಿನ ಬಂಕಾಪುರ ಸ್ಥಳೀಯ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 13539 ಅದರಲ್ಲಿ ಪುರುಷರು 5929 ಹಾಗೂ ಮಹಿಳೆಯರು 4905. ಆದರೆ, ಚಲಾವಣೆಯಾಗಿರುವ ಒಟ್ಟು ಫಲಿತಾಂಶ ಶೇ. 80.02ರಷ್ಟು ಮತದಾನವಾಗಿದೆ. ಒಟ್ಟು 10,834 ಮತದಾರರು ತಮ್ಮ ಹಕ್ಕನ್ನು ಗುರುವಾರ ಚಲಾಯಿಸಿದ್ದಾರೆ.
ಮಧ್ಯಾಹ್ನದ ಬಿರು ಬಿಸಿಲು ಏರುತ್ತಲೇ ಜನತೆಯ ಗುಂಪು ಚುನಾವಣೆಗಿಂತ ತಂಪು ಪಾನೀಯಗಳ ಮೊರೆ ಹೋಗಿದ್ದೇ ಹೆಚ್ಚು. ಜೊತೆಗೆ ಬಂದಿದ್ದ ಮತದಾರರನ್ನು ಸೆಳೆಯಲು ಇದು ಒಂದು ಹಂತದಲ್ಲಿ ನೆರವಾಯಿತೆನ್ನಬಹುದು. ಶಿಗ್ಗಾಂವಿಯ 8ನೇ ವಾರ್ಡ್‌ನಲ್ಲಿ 92 ವಯಸ್ಸಿನ ವಯೋವೃದ್ಧ ಸ್ವಾತಂತ್ರ್ಯ ಹೋರಾಟಗಾರ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಮಚಂದ್ರಪ್ಪ ಗುರಪ್ಪ ಅರ್ಕಸಾಲಿ ತಮ್ಮ ಮೊಮ್ಮಗನ ಸಹಾಯ ಪಡೆದು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಮತದಾನ ಮಾಡುವುದರ ಮೂಲಕ ಹಕ್ಕು ಚಲಾಯಿಸಿದರು. ತಮ್ಮ ಇಳಿವಯಸ್ಸಿನಲ್ಲೂ ಇವರ ಚುನಾವಣೆಯ ಆಸಕ್ತಿ ಕಡ್ಡಾಯ ಮತದಾನದ ಬಗ್ಗೆ ಸಾರ್ವಜನಿಕರಿಗೆ ಮಾದರಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

