ಹಾವೇರಿ

ಸವಣೂರು: 71.93ರಷ್ಟು ಮತದಾನ

Published On :

ಸವಣೂರು: ಸ್ಥಳೀಯ ಪುರಸಭೆಗೆ ನಡೆದ ಚುನಾವಣೆಯ ಮತದಾನ ಸುವ್ಯವಸ್ಥಿತವಾಗಿ ನೆರವೇರಿತು. ಸವಣೂರು ಪುರಸಭೆಯ ಒಟ್ಟು 23 ವಾರ್ಡ್‌ಗಳ ಮತದಾನಕ್ಕಾಗಿ 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 24,946 ಮತದಾರರಲ್ಲಿ(13,250 ಪುರುಷರು, 11,696 ಮಹಿಳೆಯರು) 17,946 ಮತದಾರರು (9,723ಪುರುಷರು, 8,223 ಮಹಿಳೆಯರು) ತಮ್ಮ ಪರಮಾಧಿಕಾರ ಚಲಾಯಿಸಿದ್ದಾರೆ. ಈ ಚುನಾವಣೆಯಲ್ಲಿ ಪ್ರತಿಶತ 71.93ರಷ್ಟು ಮತದಾರರು ತಮ್ಮ ಪರಮಾಧಿಕಾರ ಚಲಾಯಿಸಿದ್ದಾರೆ. ಸವಣೂರಿನ 18ನೇ ವಾರ್ಡ್‌ನಲ್ಲಿ (ಮತಗಟ್ಟೆ ಸಂಖ್ಯೆ 21) ರಲ್ಲಿ ಗರಿಷ್ಟ ಮತದಾನ ನಡೆದಿದೆ. ಒಟ್ಟು 692 ಮತದಾರರಲ್ಲಿ 579(ಶೇ. 83.67) ಮತದಾರರು ಮತ ಚಲಾಯಿಸಿದ್ದಾರೆ. ಸವಣೂರಿನ 1ನೇ ವಾರ್ಡ್‌ನಲ್ಲಿ ಕನಿಷ್ಟ ಮತದಾನ ನಡೆದಿದೆ. ಅಲ್ಲಿನ ಒಟ್ಟ 1508 ಮತದಾರರಲ್ಲಿ 906 ಮತದಾರರು ಮತ ಚಲಾಯಿಸಿದ್ದಾರೆ (ಶೇ.60.07).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.