ಪ್ರತಿಭಾವಂತರಿಗೆ ಮಾರ್ಗದರ್ಶನವಿರಲಿ
ರಾಣಿಬೆನ್ನೂರು: ಪ್ರತಿ ವರ್ಷ ಶಾಲಾ, ಕಾಲೇಜುಗಳಲ್ಲಿ ಏರ್ಪಡಿಸುತ್ತಿರುವ ವಾರ್ಷಿಕ ಸ್ನೇಹ ಸಮ್ಮೇಳನಗಳ ದಿನದಂದು ನಡೆಯಲಿರುವ ವಿವಿಧ ಸಾಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆ ಹೊರಹಾಕುತ್ತಿದ್ದು, ಆ ಪ್ರತಿಭೆ ಗುರುತಿಸಿ ಪ್ರತಿಭೆಗಾಧರಿಸಿ ಸೂಕ್ತ ಮಾರ್ಗದರ್ಶನ ನೀಡಲು ಶಿಕ್ಷಕರು ಮುಂದಾಗಬೇಕೆಂದು ಡಿವೈಎಸ್‌ಪಿ ಜಯಪ್ರಕಾಶ ಹೇಳಿದರು.
ಇಲ್ಲಿನ ವಿನಾಯಕ ನಗರದಲ್ಲಿರುವ ಡಾಲ್ಫಿನ ಹೈಸ್ಕೂಲಿನ ಆವರಣದಲ್ಲಿ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಮೊಬೈಲ್, ಟಿವಿಯಿಂದ ಇಂಗ್ಲಿಷ್ ಪ್ರಭಾವ: ಇಂದಿನ ಕಾಲದ ಶಿಕ್ಷಣಕ್ಕೂ- ಹಿಂದಿನ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಾರಣವೆನೆಂದರೆ ಹಿಂದಿನ ಕಾಲದಲ್ಲಿ ಊರಿಗೊಂದು ದೂರದರ್ಶನ, ರೇಡಿಯೋ ಅಥವಾ ದೂರವಾಣಿಗಳಿದ್ದವು. ಪ್ರಸಕ್ತ ಮೊಬೈಲ್ ಬಳಕೆಯಿಂದಾಗಿ ಇಂಗ್ಲಿಷ್ ಭಾಷೆಯನ್ನಾಡುವವರ ಸಂಖ್ಯೆ ಹೆಚ್ಚಾದ ಕಾರಣ ತಮ್ಮ ಮಕ್ಕಳಿಗೂ ಇಂಗ್ಲಿಷ್ ಜ್ಞಾನ ನೀಡಬೇಕೆನ್ನುವವರ ಸಂಖ್ಯೆ ಹೆಚ್ಚಾದ ಕಾರಣ ಇಂಗ್ಲಿಷ್ ಸಾಮಾನ್ಯ ಭಾಷೆಯಾಗಿ ಮಾರ್ಪಟ್ಟಿದೆ.
ಕನ್ನಡಕ್ಕೆ ಧಕ್ಕೆ: ಕನ್ನಡ ನಾಡಿನಲ್ಲಿ ಹುಟ್ಟಿರುವವರೆಲ್ಲಾ ಅನ್ಯ ಭಾಷಿಕರಾಗುವುದರಿಂದ ಕನ್ನಡಕ್ಕೆ ತೊಂದರೆಯಾಗುತ್ತಿದೆ ಎಂದರು. ಕನ್ನಡ ನಾಡು ನುಡಿ ಉಳಿವಿಗಾಗಿ ಹಗಲಿರುಳು ಹೋರಾಟ ನಡೆಸುತ್ತಿದ್ದೇವೆ. ಕನ್ನಡ ನಾಡು, ನುಡಿ, ನೆಲ ಜಲಗಳ ಮೇಲಿರುವ ಪ್ರೀತಿ ಅಭಿಮಾನವನ್ನು ಮರೆಯದಿರುವವನೇ ನಿಜವಾದ ಕನ್ನಡಿಗ, ಕಾರಣ ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆಗನುಸಾರವಾಗಿ ಪಾಠ ಮಾಡಲು ಶಿಕ್ಷಕರು ಮುಂದಾಗಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮಿತ್ರ ಎಜುಕೇಶನ್ ಸೊಸೈಟಿ ಹಾಗೂ ಡಾಲ್ಪಿನ ಶಾಲೆ ಅಧ್ಯಕ್ಷರಾದ ರವಿಂದ್ರಗೌಡ ಎಫ್. ಪಾಟೀಲ, ಕಾರ್ಯಕ್ರಮದ ಕುರಿತು ಮಾತನಾಡಿದರು. ಆಡಳಿತಾಧಿಕಾರಿಗಳಾದ ಗೋವಿಂದರಡ್ಡಿ ಚಳಗೇರಿ, ಉಪಾಧ್ಯಕ್ಷ ಹರಿಹರಗೌಡ ಪಾಟೀಲ, ಸದಸ್ಯರಾದ ಶಿವಪ್ಪ ಜಾನಪ್ಪನವರ, ರೈತ ಸಂಘದ ತಾಲೂಕು ಅಧ್ಯಕ್ಷ ಸುರೇಶಪ್ಪ ಗರಡಿಮನಿ, ಉಪಾಧ್ಯಕ್ಷ ಜಯಣ್ಣ ಮಾಗನೂರು, ಡಾಲ್ಫಿನ ಶಾಲೆ ಸಂಸ್ಧಾಪಕ ಅಧ್ಯಕ್ಷ ಗಿರೀಶ ಹುಲಿಕಂತಿಮಠ, ನ್ಯಾಯವಾದ ಪ್ರಶಾಂತ ಸುರಣಗಿ, ಪ್ರಾಂಶುಪಾಲರಾದ ಸುನಿಲಕುಮಾರ ಕುಂಠೆ ಇತರರು ಉಪಸ್ಧಿತರಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

