ಕೇಳುಗರ ಬಡಿದೆಬ್ಬಿಸುವ ಹೋರಾಟದ ಹಾಡು
ಹಾವೇರಿ: ಹೋರಾಟದ ಹಾಡುಗಳನ್ನು ಹಾಡುತ್ತ, ಕೇಳುತ್ತ ಹೋದಂತೆ ಹಾಡುವವನ ಒಳಗಣ್ಣು ತೇವವಾಗುತ್ತದೆ. ಕೇಳುಗ ಹಾಗೂ ಸಮಾಜ ಕವಿಯ ಭಾವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ರೈತ ಮತ್ತು ಬಂಡಾಯ ಸಾಹಿತ್ಯದ ಬಹುದೊಡ್ಡ ಕೊಡುಗೆ ಈ ಕ್ರಾಂತಿಗೀತೆಗಳಾಗಿವೆ ಎಂದು ಲೇಖಕ, ವಯಸ್ಕರ ಶಿಕ್ಷಣಾಧಿಕಾರಿ ಡಾ. ಐ.ಎ. ಲೋಕಾಪುರ ಅಭಿಪ್ರಾಯಪಟ್ಟರು.
ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ನಡೆದ ಯುವಕಾವ್ಯ ಕಮ್ಮಟದ ಕೊನೆಯ ದಿನದ ಹೋರಾಟದ ಹಾಡುಗಳ ಪರಂಪರೆ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕ ನಾಗರಾಜ ನಡುವಿನಮಠ ಮಾತನಾಡಿ, ಇತಿಹಾಸದುದ್ದಕ್ಕೂ ಹೋರಾಟ- ಸಂಘರ್ಷಗಳು ಬೇರೆ ಬೇರೆ ಕಾರಣಗಳಿಗಾಗಿ ನಡೆದಿವೆ. ಆ ಸಂದರ್ಭದಲ್ಲಿ ಕ್ರಾಂತಿಕಾವ್ಯ ಖಡ್ಗವಾಗಿ ವ್ಯವಸ್ಥೆಯನ್ನು ಎತ್ತರಿಸಿವೆ. ವಂದೇ ಮಾತರಂ ಸ್ವಾತಂತ್ರ ಹೋರಾಟದಲ್ಲಿ ದೇಶವನ್ನು ಕಟ್ಟಿದ ಕ್ರಾಂತಿಗೀತೆ ಎಂಬುದು ಇಂದು ಎಲ್ಲರ ಮನದಲ್ಲೂ ಅಚ್ಚೊತ್ತಿದೆ. ಇಂದಿಗೂ ಸಹ ವಂದೇ ಮಾತರಂ ಗೀತೆ ಕೇಳುವವರ ಮೈರೋಮಗಳು ಎಚ್ಚೆತ್ತು ದೇಶಭಕ್ತಿ ಉತ್ಕಟ ಇಚ್ಛೆಯನ್ನು ಹೊರುಹಾಕುತ್ತದೆ ಎಂದರು. ಕಳೆದ ಮೂರು ದಿನಗಳಿಂದ ನವೋದಯ, ನವ್ಯ, ದಲಿತ ಬಂಡಾಯ ಕಾವ್ಯದ ಉಪನ್ಯಾಸ ಮತ್ತು ಚರ್ಚ್ಗಳನ್ನು ಕೇಳಿದ್ದ ಯುವಕಾವ್ಯ ಕಮ್ಮಟದ ಶಿಬಿರಾರ್ಥಿಗಳು ಕಲಾವಿದರ ಗುಂಪಿನ ಅಬ್ಬರದ ಕ್ರಾಂತಿಗೀತೆಗಳನ್ನು ಕೇಳಿ ಅಕ್ಷರಶಃ ಬೆಚ್ಚಿದರು.
ರಾಷ್ಟ್ರಕವಿ ಕವಿ ಕುವೆಂಪು ಅವರ ನೇಗಿಲಯೋಗಿ, ಸಿದ್ಧಲಿಂಗಯ್ಯನವರ ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ, ಸತೀಶ ಕುಲಕರ್ಣಿ ಅವರ ಕಟ್ಟತೇವ ನಾವು ಕಟ್ಟತೇವ, ಕೆ.ಆರ್. ರಾಮಯ್ಯನವರ ಗಾಂಧಿ ಅಂಬೇಡ್ಕರ ಆಗಲಿಲ್ಲ ಆದರ್ಶ, ಅದಕ್ಕೆ ಇನ್ನೂ ತಪ್ಪಿಲ್ಲ ಸಂಘರ್ಷ ಎಂಬ ಹಾಡುಗಳನ್ನು ಕೇಳಿ ರೋಮಾಂಚಿತರಾದರು. ಹಾಡಿನ ನಂತರ ನಾಗರಾಜ ನಡುವಿನಮಠ ನೀಡುತ್ತಿದ್ದ ಕವಿ, ಹಾಡುಗಳ ವಿವರಣೆ ಗೋಷ್ಠಿಯ ಸೊಗಸನ್ನು ಹೆಚ್ಚಿಸಿತು. ಬಸವರಾಜ ಶಿಗ್ಗಾಂವಿ, ಎ.ಬಿ. ಗುಡ್ಡಳ್ಳಿ, ಮಹಾಂತೇಶ ಮರಿಗೌಡಪ್ಪನವರ ಕ್ರಾಂತಿಗೀತೆಗಳನ್ನು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

