64 ಲಕ್ಷ ಸಾಕ್ಷರರು ಪರೀಕ್ಷೆಗೆ ಸಿದ್ಧ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 17
ಸಾಕ್ಷರತಾ ಪ್ರೇರಕರ ಸಹಕಾರದಿಂದ ರಾಜ್ಯದಲ್ಲಿ 64 ಲಕ್ಷ ಅನಕ್ಷರಸ್ಥರು ಸಾಕ್ಷರರಾಗುವ ಮೂಲಕ ಲೋಕ ಶಿಕ್ಷಣ ಸಮಿತಿ ನಡೆಸುವ ರಾಷ್ಟ್ರೀಯ ಮುಕ್ತ ಶಾಲಾ ಪರೀಕ್ಷೆಗಳನ್ನು ಎದುರಿಸುವ ಹಂತ ತಲುಪಿದ್ದಾರೆ ಎಂದು ಲೋಕ ಶಿಕ್ಷಣ ಸಮಿತಿಯ ನಿರ್ದೇಶಕ ಪಿ. ಉದಯಶಂಕರ ತಿಳಿಸಿದರು.
ಮೋಟೆಬೆನ್ನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷರ ಭಾರತ ಶಿಕ್ಷಣ ಹಾಗೂ ಜಿಲ್ಲಾ ಲೋಕ ಶಿಕ್ಷಣ ಸಮಿತಿ ನಡೆಸುತ್ತಿರುವ ನೂತನ ಕಲಿಕಾರ್ಥಿಗಳ ಪರೀಕ್ಷಾ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸಕ್ತ ವರ್ಷ ರಾಜ್ಯದಲ್ಲಿ ಕನಿಷ್ಠ 10 ಲಕ್ಷಕ್ಕೂ ಹೆಚ್ಚು ಅನಕ್ಷರಸ್ಥರನ್ನು ಪರೀಕ್ಷಾರ್ಥಿಗಳನ್ನಾಗಿ ಮಾಡುವ ಗುರಿ ಇದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಲೋಕ ಶಿಕ್ಷಣ ಸಮಿತಿ ಕಲಿಕಾ ಕೇಂದ್ರಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ಕ್ರಮ ಜರುಗಿಸಿದೆ ಎಂದರು. ಸುಮಾರು 7 ಕೋಟಿಗೂ ಅಧಿಕ ಜನರು ದೇಶದಲ್ಲಿ ಅಕ್ಷರಸ್ಥರಾಗಲು ಸಾಧ್ಯವಾಗಿಲ್ಲ. ಇದಕ್ಕೆ ಬಡತನವೇ ಕಾರಣ. ಅಂಥವರನ್ನು ಅಕ್ಷರಸ್ಥರನ್ನಾಗಿ ಮಾಡುವುದೇ ಲೋಕ ಶಿಕ್ಷಣ ಸಮಿತಿಯ ಉದ್ದೇಶವಾಗಿದೆ. ಗುರಿ ತಲುಪುವಲ್ಲಿ ಹಾವೇರಿ ಜಿಲ್ಲೆ ಮುಂಚೂಣಿಯಲ್ಲಿದ್ದು, ಪ್ರಸಕ್ತ ವರ್ಷ ಶೇ. 17ರಷ್ಟು ಪ್ರಗತಿ ಸಾಧಿಸಿದೆ. ಪ್ರೇರಕರ ಹಾಗೂ ಸ್ವಯಂ ಸೇವಕರ ಶ್ರಮ ಶ್ಲಾಘನೀಯ ಎಂದರು. ಮಹಿಳೆಯರು ಮತ್ತು ಹಿಂದುಳಿದ ವರ್ಗದ ಜನರಲ್ಲಿ ಅತಿ ಹೆಚ್ಚು ಅನಕ್ಷರಸ್ಥರಿದ್ದಾರೆ. ಹೀಗಾಗಿ ಮಹಿಳಾ ಸಾಕ್ಷರತೆಗೆ ಒತ್ತು ನೀಡಲಾಗಿದೆ. ದೇಶದ ಅಭಿವೃದ್ಧಿಗೆ ಇದು ಅಗತ್ಯ ಕೂಡ. ಸಾಕ್ಷರ ಭಾರತ ಕಾರ್ಯಕ್ರಮ ಜನಾಂದಲೋನವಾಗಬೇಕು. ಅಂದಾಗ ಮಾತ್ರ ದೇಶ ಪ್ರಗತಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗುತ್ತದೆ ಎಂದರು. ಎಂ.ಎಂ. ಹಾವನೂರ, ಸುಜಾತಾ ನೆರ್ಲಿಕರ, ರೇಖಾ ಮಳಲಿ, ನಿಂಗಮ್ಮ ಎಲಿ, ಬಿ.ಐ. ರೇಣುಕಾ, ತಾಲೂಕು ಸಾಕ್ಷರ ಸಂಯೋಜಕ ಆರ್.ಎಂ. ಪಾಟೀಲ, ಸಂಯೋಜಕಿ ನಾಗರತ್ನಾ ಹುಲ್ಲತ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

