ವಿವಿಧತೆಯಲ್ಲಿ ಏಕತೆ ನಮ್ಮ ವೈಶಿಷ್ಟ್ಯ
ಹಾವೇರಿ: ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಏಕೈಕ ರಾಷ್ಟ್ರ. ನಾವು ಉಸಿರಾಡುವ ಗಾಳಿ, ಜಲ, ನೆಲ, ಆಹಾರ ಹೇಗೆ ಒಂದಾಗಿದೆಯೋ ಹಾಗೆಯೇ ನಮ್ಮ ಭಾಷೆ, ವೇಷ-ಭೂಷಣ, ಕಲೆ, ಬೇರೆಯಾಗಿದ್ದರು ಭಾವನೆಗಳು ಒಂದೇ ಆಗಿವೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಬಸವರಾಜ ಸಜ್ಜನ ಅಭಿಪ್ರಾಯಪಟ್ಟರು.
ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ನೆಹರು ಯುವಕೇಂದ್ರದಿಂದ ಆಯೋಜಿಸಿದ್ದ ಭಾವೈಕ್ಯತಾ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂಥ ಕಾರ್ಯಕ್ರಮಗಳು ವಿವಿಧತೆಯಲ್ಲಿ ಏಕತೆ ಕಾಣಲು ಈಗಿನ ಸಂದರ್ಭದಲ್ಲಿ ಅವಶ್ಯಕವಾಗಿವೆ. ಪ್ರಸಕ್ತ ಯುವಜನರಲ್ಲಿ ಬೆಳೆಯುತ್ತಿರುವ ದುಶ್ಚಟಗಳು ಯುವಜನಾಂಗಕ್ಕೆ ಮಾರಕವಾಗಿವೆ. ಅದೇ ರೀತಿ ಏಡ್ಸ್‌ನಂತಹ ಮಾರಕ ರೋಗಗಳು ಕೂಡಾ ಯುವ ಜನರನ್ನು ಬಲಿ ತೆಗೆದುಕೊಳ್ಳುತ್ತಲಿವೆ. ಕಾರಣ ಈಗಿನ ಯುವಕರು ಒಂದಾಗಿ ದುಶ್ಚಟಗಳ ದಮನಕ್ಕೆ ಹೋರಾಡಲು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಮಾತನಾಡಿ, ದೇಶ ನಮಗೇನು ಮಾಡಿದೆ ಅನ್ನುವದಕ್ಕಿಂತ ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎನ್ನುವುದು ಮುಖ್ಯವಾಗಿದೆ. ಇದನ್ನು ಇಂದಿನ ಯುವ ಜನಾಂಗ ಅರಿತುಕೊಳ್ಳಬೇಕಿದೆ. ಅದರಂತೆ ರಾಷ್ಟ್ರೀಯ ಭಾವೈಕ್ಯತೆ, ಏಕತೆ, ಸಹೋದರತ್ವದಿಂದ ಏನನ್ನು ಸಾಧಿಸಬಹುದು ಎನ್ನುವುದೇ ಒಂದು ರಾಷ್ಟ್ರೀಯ ಭಾವೈಕ್ಯತೆಯ ಶಿಬಿರದ ಮುಖ್ಯ ಉದ್ದೇಶ. ದೇಶದಲ್ಲಿ ಅನೇಕ ಜಾತಿ, ಭಾಷೆ ಇದ್ದರೂ ದೇಶ ಒಂದೇ ಆಗಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿದಲ್ಲಿ ವಿಶ್ವಕ್ಕೆ ಭಾರತ ಗುರುವಾಗಲಿದೆ. ಇದೇ ಇಂದಿನ ಯುವ ಜನಾಂಗದ ಮುಂದೆ ಇರುವ ಗುರಿಯಾಗಿದೆ. ಅದಕ್ಕಾಗಿ ಇಂಥ ಕಾರ್ಯಕ್ರಮಗಳಲ್ಲಿ ಯುವಜನರು ಒಂದಾಗುವ ಸಂಕಲ್ಪ ಮಾಡುವಂತೆ ಕರೆ ನೀಡಿದರು.
ಪಿ.ಎಸ್. ಹಕೀಮಸಾಬ, ಮೌಲಾಲಿ ಜಿಗರಿ, ಬಿ.ಕೆ. ಸುರೇಖಾ, ಇನ್ನಿತರರು ಭಾಗವಹಿಸಿದ್ದರು. ಜಿಲ್ಲಾ ಯುವ ಸಮನ್ವಯ ಅಧಿಕಾರಿ ಎ.ಎ. ದೋಣಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಯು. ಜಮಾದಾರ ಪ್ರಾಸ್ತಾವಿಕ ಮಾತನಾಡಿ, ನಿರ್ವಹಿಸಿದರು. ಬೇಬಿ ದೊಡ್ಡಮನಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

