ಹಾವೇರಿ

ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಲಿ: ಡಾ. ಚಂದ್ರಕಲಾ

Published On :

ಸವಣೂರು: ಆಧುನಿಕ ಜಗತ್ತಿನಲ್ಲಿ ಮಹಿಳಾ ದೌರ್ಜನ್ಯ ಹೆಚ್ಚುತ್ತಿದೆ. ಸಮಾಜದ ಎಲ್ಲ ಸ್ತರಗಳಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದು ಯಲವಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಡಾ.ಚಂದ್ರಕಲಾ ಬಸ್ತಿ ತಿಳಿಸಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ವತಿಯಿಂದ ಯಲವಿಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ತಮ್ಮ ದೌರ್ಬಲ್ಯಗಳನ್ನು ದೂರ ಮಾಡಿಕೊಳ್ಳಬೇಕು. ಆತ್ಮವಿಶ್ವಾಸದ ಪ್ರತೀಕವಾಗಬೇಕು. ಸ್ವಾಭಿಮಾನಿ ವ್ಯಕ್ತಿತ್ವ ಹೊಂದಬೇಕು ಎಂದು ಸೂಚಿಸಿದರು.
ಶಿಕ್ಷಕಿ ಎಸ್.ವಿ. ಬಾಕಳೆ, ಮಹಿಳೆಯರ ಬಗ್ಗೆ ಪುರುಷ ಪ್ರಧಾನ ಸಮಾಜದಲ್ಲಿರುವ ದೃಷ್ಟಿಕೋನ ಬದಲಾಗಬೇಕಿದೆ. ಈ ಹೊಣೆಗಾರಿಕೆ ಮಹಿಳೆಯರ ಮೇಲಿದೆ. ಆದರ್ಶ ಜೀವನ ನಡೆಸಿದ ಹಲವಾರು ಮಹಿಳೆಯರು ಸ್ಫೂರ್ತಿಯಾಗಬೇಕಿದೆ ಎಂದರು.
ಗ್ರಾಮೀಣ ಬ್ಯಾಂಕಿನ ಪ್ರಬಂಧಕ ಜಿ.ಎನ್. ಸುರಗಿಮಠ, ಆರ್ಥಿಕ ಸ್ವಾವಲಂಬನೆಯಿಂದ ಮಹಿಳೆಯರ ಉನ್ನತಿ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಸ್ವ ಸಹಾಯ ಸಂಘಗಳು ಈ ನಿಟ್ಟಿನಲ್ಲಿ ಪರಿಣಾಮಕಾರಿ ಎಂದರು. ಬ್ಯಾಂಕಿನ ಹಲವಾರು ಜನಪರವಾದ ಯೋಜನೆಗಳ ಬಗ್ಗೆ ವಿವರಣೆ ನೀಡಿದರು.
ಯಲವಿಗಿ ಗ್ರಾಪಂ ಅಧ್ಯಕ್ಷೆ ಕಮಲವ್ವ ಲಮಾಣಿ, ಅಕ್ಕಮ್ಮ ಸೂರಣಗಿ, ಚೈತನ್ಯ ಕುಮಾರಿ, ಹೂವಿನಶಿಗ್ಲಿ ಪಂಚಾಯ್ತಿ ಅಧ್ಯಕ್ಷೆ ಅಕ್ಕಮ್ಮ ಬಂಡಿ, ಜೆ.ಪಿ. ಅಂಗಡಿ, ಬ್ಯಾಂಕಿನ ಸಿಬ್ಬಂದಿ ಪಾಲ್ಗೊಂಡ್ದಿದರು. ಶಿರಬಡಗಿ, ಅಲಿಪುರ, ಯಲವಿಗಿ, ಹೂವಿನಶಿಗ್ಲಿ, ಹೊನ್ನಿಕೊಪ್ಪ, ಮಾರುತಿಪುರ ಗ್ರಾಮಗಳ ಮಹಿಳಾ ಸಂಘದ ಸದಸ್ಯರು ಇದ್ದರು. ನಿರ್ಮಲಾ ಹಿರೇಮಠ ನಿರ್ವಹಿಸಿದರು. ಉಪ ಪ್ರಬಂಧಕ ಆರ್.ಎಸ್. ರಾವ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ತೇಜಸ್ವಿನಿ ರಾಠೋಡ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.