ಮೆಗಾ ಅಡೀಶನ್ಗೆ ಪೃಥ್ವಿ ಶಿರೂರು ಆಯ್ಕೆ
ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಬಾಲಕ ಪೃಥ್ವಿ ಈರಣ್ಣ ಶಿರೂರು ಇತ್ತೀಚೆಗೆ ಹೈದ್ರಾಬಾದ್ನಲ್ಲಿ ನಡೆದ ಇಂಡಿಯನ್ ಡಾನ್ಸಿಂಗ್ ಸೂಪರ್ ಸ್ಟಾರ್ ಡಾನ್ಸ್ ರಿಯಾಲಿಟಿ ಶೋ ಅಡೀಶನ್ನಲ್ಲಿ ಭಾಗವಹಿಸಿ ಮೇಘಾ ಅಡೀಶನ್ಗೆ ಆಯ್ಕೆಯಾಗಿದ್ದಾನೆ. ಪ್ರಥಮ ಅಡೀಶನ್ನಲ್ಲಿ ದೇಶದ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಆಯ್ಕೆಯಾಗಿ ಮೇಘಾ ಅಡೀಶನ್ನಲ್ಲಿ ಪೈಪೋಟಿ ನಡೆಸುತ್ತಿದ್ದಾನೆ.
ನವಲೆ, ಪ್ರತಾಪ ನೇಮಕ
ಹಾನಗಲ್ಲ: ಹಾನಗಲ್ಲ ಮಾರ್ಗವಾಗಿ ನಿರ್ಮಿಸುತ್ತಿರುವ ತಡಸ-ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣ ಹಾನಗಲ್ಲ ತಾಲೂಕು ವ್ಯಾಪ್ತಿಯ ಬಾಧಿತರ ಕುಂದು-ಕೊರತೆ ನಿವಾರಣಾ ಸಮಿತಿಗೆ ಸದಸ್ಯರನ್ನಾಗಿ ಪುರಸಭೆ ನಿವೃತ್ತ ಮುಖ್ಯಾಧಿಕಾರಿ ಎನ್.ಆರ್. ನವಲೆ ಹಾಗೂ ಉದ್ಯಮಿ ಪ್ರತಾಪ ರಾಮೇಗೌಡ ಅವರನ್ನು ನೇಮಕಗೊಳಿಸಲಾಗಿದೆ. ರಾಜ್ಯ ಸರ್ಕಾರ ವಿಶ್ವ ಬ್ಯಾಂಕ್ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಹೆದ್ದಾರಿ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದು, ಯೋಜನೆ ಅನುಷ್ಠಾನಕ್ಕಾಗಿ ಅವಶ್ಯವಿರುವ ಖಾಸಗಿ ಜಮೀನು, ಆಸ್ತಿಗಳನ್ನು ಭೂಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಯೋಜನೆ ಅನುಷ್ಠಾನಗೊಳಿಸುವ ಸಂದರ್ಭ ಉದ್ಭವಿಸಬಹುದಾದ ವಿವಿಧ ರೀತಿಯ ಕುಂದು-ಕೊರತೆಗಳನ್ನು ನಿವಾರಿಸುವ ಸಮಿತಿಯನ್ನು ಜಿಲ್ಲಾಧಿಕಾರಿಗಳು ರಚಿಸಿದ್ದು, ಈ ಸಮಿತಿಗೆ ಸಾಮಾಜಿಕ ವಲಯ, ನಿವೃತ್ತ ಸರ್ಕಾರಿ ಅಧಿಕಾರಿಗಳ ಪ್ರತಿನಿಧಿಯಾಗಿ ಎನ್.ಆರ್. ನವಲೆ ಹಾಗೂ ಅಧಿಕಾರೇತರ ಸದಸ್ಯರನ್ನಾಗಿ ಪ್ರತಾಪ ರಾಮೇಗೌಡ ಅವರನ್ನು ನೇಮಕಗೊಳಿಸಿ ಹಾವೇರಿ ಪ್ರಭಾರ ಜಿಲ್ಲಾಧಿಕಾರಿ ಜಿ. ಜಗದೀಶ ಆದೇಶಿಸಿದ್ದಾರೆ.
ಗ್ರಾಮದೇವಿ ಜಾತ್ರೆ ಶುರು
ಹಾನಗಲ್ಲ: ಸಾಂಸ್ಕೃತಿಕ ನಾಡು ವಿರಾಟನಗರ ಖ್ಯಾತಿಯ ಹಾನಗಲ್ಲಿನಲ್ಲಿ 7ನೇ ಗ್ರಾಮದೇವಿ ಜಾತ್ರೆ (ಮಾ. 24)ರಿಂದ ಆರಂಭವಾಗಿದ್ದು, ಜಾತ್ರೋತ್ಸವ ಅಂಗವಾಗಿ ರಥೋತ್ಸವ, ಟಗರಿನ ಕಾಳಗ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವಾದ್ಯ-ಮೇಳಗಳ ಮಧ್ಯೆ ಜಾತ್ರೋತ್ಸವ ಅದ್ಧೂರಿಯಿಂದ ಜರುಗಲಿದೆ. ಅಂತಿಮ ದಿನವಾದ ಏ. 3ರಂದು ಕೃಷಿಮೇಳ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಕಮಿಟಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

