ನೀರಿಗೆ ಆಗ್ರಹಿಸಿ ನಗರಸಭೆಗೆ ಮುತ್ತಿಗೆ
ಹಾವೇರಿ: ಕಳೆದ 5-6 ತಿಂಗಳಿಂದ ನದಿನೀರು ನೀಡುತ್ತಿಲ್ಲ. ಅಲ್ಲದೇ ಓಣಿಯಲ್ಲಿರುವ ಕೊಳವೆ ಬಾವಿಗೆ ಹೆಚ್ಚುವರಿಯಾಗಿ 2 ಕೇಸ್ ಪೈಪ್ ಇಳಿಸಿ ನಾಗರಿಕರಿಗೆ ನೀರು ಕೊಡುವಂತೆ ಆಗ್ರಹಿಸಿ ನಗರದ 19ನೇ ವಾರ್ಡಿನ ದ್ಯಾಮವ್ವನ ಗುಡಿ ಓಣಿಯ ಜನರು ನಗರಸಭಾ ಸದಸ್ಯನ ನೇತೃತ್ವದಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸಿ, ನಗರಸಭೆ ಗೇಟ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 10 ಗಂಟೆ ಸುಮಾರಿಗೆ ನಗರಸಭೆಗೆ ಆಗಮಿಸಿದ ಸಾರ್ವಜನಿಕರಿಗೆ ಯಾವುದೇ ಸಿಬ್ಬಂದಿ ಹಾಗೂ ಅಧಿಕಾರಿಗಳು ಕ್ಯಾರೇ ಎನ್ನದಿರುವ ಕುರಿತಂತೆ ತೀವ್ರ ಆಕ್ರೋಶಗೊಂಡ ದ್ಯಾಮವ್ವನ ಗುಡಿ ಓಣಿ ನಾಗರಿಕರು ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೈಪ್ಲೈನ್ ದುರಸ್ತಿ ನೆಪದಲ್ಲಿ ನಿರ್ಲಕ್ಷ್ಯ: ಈ ಸಂದರ್ಭ 19ನೇ ವಾರ್ಡಿನ ನೂತನ ಸದಸ್ಯ ಇರ್ಫಾನ್ ಪಠಾಣ ಮಾತನಾಡಿ, ಕಳೆದ 5-6 ತಿಂಗಳಿಂದ ದ್ಯಾಮವ್ವನ ಗುಡಿ ಓಣಿಗೆ ನದಿ ನೀರು ನೀಡಿಲ್ಲ. ಈ ಕುರಿತಂತೆ ಚುನಾವಣಾ ಸಂದರ್ಭ ನಗರದ ಬಹುತೇಕ ಎಲ್ಲ ವಾರ್ಡುಗಳಿಗೂ ಸಮರ್ಪಕವಾಗಿ ನದಿ ನೀರು ಪೂರೈಸಲಾಗಿದ್ದರೂ ನಮ್ಮ ವಾರ್ಡಿಗೆ ನೀರು ನೀಡಿಲ್ಲ. ಈ ಕುರಿತಂತೆ ಕೇಳಿದಲ್ಲಿ ಪೈಪ್ಲೈನ್ ಸಂಪರ್ಕ ಕಡಿತಗೊಂಡಿದ್ದು, ಅದನ್ನು ಸರಿಪಡಿಸಿ ನೀರು ನೀಡಲಾಗುವುದಾಗಿ ತಿಳಿಸಿದ್ದರೂ ಈ ಕಾರ್ಯ ಕೈಗೊಳ್ಳದೇ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ದೂರಿದರು.
ದ್ಯಾಮವ್ವನ ಗುಡಿ ಓಣಿಯ ಲಕ್ಷ್ಮೀಬಾಯಿ ಮಾತನಾಡಿ, ನಮ್ಮ ಓಣಿಗೆ ನೀರು ಬಿಡದೇ 5-6ತಿಂಗಳೇ ಗತಿಸಿವೆ. ಇದುವರೆಗೂ ಓಣಿಯಲ್ಲಿನ ಕೊಳವೆ ಬಾವಿಯಿಂದ ನೀರು ದೊರೆಯುತ್ತಿದ್ದುದರಿಂದಾಗಿ ನದಿ ನೀರು ಕುರಿತಂತೆ ನಾವು ಕೇಳಿರಲಿಲ್ಲ. ಆದರೆ, ಕಳೆದೊಂದು ತಿಂಗಳಿಂದ ನಮ್ಮ ಓಣಿಯ ಕೊಳವೆ ಬಾವಿಯಲ್ಲಿಯೂ ನೀರು ಕಡಿಮೆಯಾದಂತೆ ಓಣಿಯ ಎಲ್ಲರಿಗೂ ಅಗತ್ಯ ನೀರ ದೊರೆಯುತ್ತಿಲ್ಲ. ನೀರು ಕೊಡುವಂತೆ ಮನವಿ ಮಾಡಿಕೊಂಡಿದ್ದರೂ ನಗರಸಭೆ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ಯೋಚನೆ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಶಿವಬಸಪ್ಪ ಕಾಶಪ್ಪನವರ, ಬಾಬು ಪತ್ತಾರ, ಲಕ್ಷ್ಮೀ ಕಲಾಟೆ, ರಾಜಶೇಖರ ಉಪ್ಪಿನ, ಬಸಯ್ಯ ಸಾಲಿಮಠ, ಬಿ.ಎಸ್. ಬೆಳ್ಳಿಗಟ್ಟಿ, ರಾಧಾಭಾಯಿ ಜನ್ನು, ನಾಗಮ್ಮ ದೇವಗಿರಿ, ವಿರೂಪಾಕ್ಷಪ್ಪ ಭಿಷ್ಟಣ್ಣವರ, ಮಹಾದೇವಿ ಕಮ್ಮಾರ ದ್ಯಾಮವ್ವ ಹಾವೇರಿ ಇನ್ನಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

