ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಮಾರಕ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ. 28
ಪಾಶ್ಚಿಮಾತ್ಯ ಚಿಂತನೆಗಳನ್ನು ಅನುಕರಿಸುತ್ತಿರುವ ಭಾರತೀಯ ಮಹಿಳೆ ತನ್ನ ಅಮೂರ್ತ ಭಾವನೆಯ ವಿಕೃತರೂಪಗಳನ್ನು ಪ್ರದರ್ಶಿಸುತ್ತಿದ್ದಾಳೆ ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ವಿಷಾದಿಸಿದರು.
ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀಶಕ್ತಿ ಮಹಿಳಾ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜರುಗಿದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾತೃ ಸ್ಥಾನದಲ್ಲಿರುವ ಮಹಿಳೆ, ಪ್ರತಿ ಹಂತದಲ್ಲಿಯೂ ಭಾತೃತ್ವದ ಭಾವನೆಗಳನ್ನು ಹೊಂದಿರಬೇಕು ಅಲ್ಲದೇ ಆಕೆ ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜ ಸುಭದ್ರವಾಗಿರಲು ಸಾಧ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಮಾತೃತ್ವದ ಭಾವನೆಗಳನ್ನು ಕಳೆದುಕೊಂಡಿರುವ ಮಹಿಳೆಯರಲ್ಲಿ ಮಾನವೀಯ ಮೌಲ್ಯಗಳನ್ನು ಹುಡುಕುವಂತಾಗಿದೆ ಎಂದರು.
ಆಧುನಿಕತೆಯ ಗೀಳಿಗೆ ಬಿದ್ದಿರುವ ಮಹಿಳೆಯರು ಸ್ವೇಚ್ಛಾಚಾರದ ಹೆಸರಿನಲ್ಲಿ ತಾನು ಮುಂದುವರಿದಂತೆ ಎಂದು ಭಾವಿಸಿಕೊಳ್ಳುತ್ತಿರುವುದು ತಪ್ಪು, ಹುಚ್ಚು ಮನೋಭಾವನೆ ಬೆಳೆಸಿಕೊಳ್ಳುತ್ತಿರುವ ಮಹಿಳೆಯರ ಮನೋವಿಕಾರ ತರ್ಕಕ್ಕೆ ನಿಲುಕದಂತಾಗಿದೆ ಎಂದರು.
ಮನಸ್ಸನ್ನು ನಿಯಂತ್ರಿಸುವಲ್ಲಿ ವಿಫಲವಾಗುತ್ತಿರುವ ಮಹಿಳೆ, ಧಾರ್ಮಿಕ ಆಚಾರ ವಿಚಾರಗಳಿಂದ ದೂರವಾಗುತ್ತಿ ದ್ದಾಳೆ. ವಿಲಾಸಿ ಭೋಗದ ಜೀವನ ನಡೆಸಲು ಮುಂದಾಗಿರುವ ಮಹಿಳೆಯರು ಜೀವನದ ಪ್ರತಿ ಹಂತದಲ್ಲೂ ಹೋರಾಟದ ಬದುಕು ಸಾಗಿಸಬೇಕಾಗಿದೆ ಎಂದರು.
ಕಠಿಣ ಕಾನೂನುಗಳಿಂದ ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸಬಹುದೇ ವಿನಃ ಬದಲಾ ಯಿಸಲು ಸಾಧ್ಯವಿಲ್ಲ, ಆಧುನಿಕ ಸಮಾಜ ಒಮ್ಮಿಲೆ ಬದಲಾವಣೆಯಾಗಲು ಸಾಧ್ಯವಿಲ್ಲ. ಸಮಾಜದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರಿಗಳು ಮಾತನಾಡಿ, ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಮಹಿಳೆ ಅಸಹಾಯಕ ಪರಿಸ್ಥಿತಿಯಲ್ಲಿದ್ದಾಳೆ. ಬಸವಾದಿ ಶರಣರ ಕಾಲದಿಂದಲೂ ಉತ್ತಮ ಸಾಧನೆಯನ್ನು ತೋರುತ್ತಿರುವ ಮಹಿಳೆಗೆ ಪುರುಷ ಪ್ರಧಾನ ಸಮಾಜದಲ್ಲಿ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದರು.
ತನ್ನೆಲ್ಲಾ ಸಂಕಷ್ಟಗಳನ್ನು ತಾಳ್ಮೆಯಿಂದ ಸ್ವೀಕರಿಸುವ ಮಹಿಳೆ ಅಗತ್ಯ ಸಂದರ್ಭದಲ್ಲಿ ಅವುಗಳನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಗಿದ್ದಾಳೆ. ಸಾಂವಿಧಾನಿಕ ಪ್ರಾತಿನಿಧ್ಯ ದೊರೆತಿದ್ದರೂ ಸಹ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳುವಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಸಂತ ಸಾಲಿಯಾನ ಹಾವೇರಿ ಶಿವಲಿಂಗೇಶ್ವರ ಕಾಲೇಜನ ಉಪನ್ಯಾಸಕಿ ಮೈತ್ರಾದೇವಿ ಹಳೇಮನಿ, ಗ್ರಾ.ಪಂ. ಅಧ್ಯಕ್ಷ ಚನ್ನಪ್ಪ ಮುಚ್ಚಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಕ್ಕುಂದ ಗ್ರಾ.ಪಂ. ಅಧ್ಯಕ್ಷೆ ಗಂಗವ್ವ ಬೆಳಕೇರಿ, ಶಾಂತಾ ಕರಬದ್ದನವರ, ಪಂಚಮಸಾಲಿ ಘಟಕದ ಅಧ್ಯಕ್ಷೆ ಪೂರ್ಣಿಮ ಬೆನ್ನೂರು ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

