ಲಂಚಕೋರರಿಗೆ ಬುದ್ಧಿ ಕಲಿಸಿ: ಗೊಲ್ಲರ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 29
ಲಂಚ-ಅದಕ್ಷತೆ, ಅಪ್ರಾಮಾಣಿಕತೆಗಳು ತಾಂಡವವಾಡುತ್ತಿದ್ದು, ಲಂಚ-ಬಾಕ ಅಧಿಕಾರಿಗಳಿಗೆ, ನೌಕರರಿಗೆ ಸಂಘಟನೆಗಳು, ಯುವಕರು ಬುದ್ಧಿ ಕಲಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹನುಮಂತಗೌಡ ಗೊಲ್ಲರ ಕರೆ ನೀಡಿದರು.
ತಾಲೂಕಿನ ಚಿಕ್ಕಲಿಂಗದಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಯುವ ಸ್ವಯಂ ಸೇವಾ ಸಂಘ ಸಂಘಟಿಸಿರುವ ವಿಶೇಷ ಸೇವಾ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ, ಒಳ್ಳೆಯವರು ಇಲ್ಲವೆಂದಲ್ಲ, ಆದರೆ ಅಂಥವರ ಸಂಖ್ಯೆ ಬಹಳ ಕಡಿಮೆ ಇದೆ.
ಇತರರ ಸೇವೆ ನಾವು ಮಾಡಬೇಕೇ ಹೊರತೂ ಇತರರಿಂದ ಸೇವೆ ಪಡೆಯುವಂತಾಗಬಾರದು. ಕೌಟುಂಬಿಕ ಸಂಬಂಧಗಳು ನಾಗರಿಕತೆಯ ಹೆಸರಿನಲ್ಲಿ ಸಮಾಧಿಯಾಗತೊಡಗಿವೆ. ಯುವಕರು ದುಶ್ಚಟ, ದುರ್ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಗೊಲ್ಲರ ಹೇಳಿದರು.
ಶಿಕ್ಷಕ ಸೋಮಶೇಖರ ಹೊಸಳ್ಳಿ ಮಾತನಾಡಿ, ಮಿತಿ ಮೀರಿ ಬಳಸುತ್ತಿರುವ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕಗಳಿಂದ ಭೂಮಿಯ ಫಲವತ್ತತೆ ಕ್ಷೀಣಿಸುತ್ತಿದೆ.
ಸಾವಯವ ಕೃಷಿಯಲ್ಲಿ ರೈತರು ತೊಡಗಿಸಿಕೊಳ್ಳಬೇಕು ಎಂದರು. ಗ್ರಾಪಂ ಉಪಾಧ್ಯಕ್ಷ ಅಶೋಕ ಗಂಗಮ್ಮನವರ, ಸದಸ್ಯರಾದ ಪರಮೇಶಪ್ಪ ತಿಪ್ಲಾಪುರ, ಸುರೇಶ ಸೋಮನಹಳ್ಳಿ ಮಾತನಾಡಿದರು. ಸಂಘದ ಅಧ್ಯಕ್ಷ ತೇಜಪ್ಪ ಮಡಿವಾಳರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವೆ, ಶಿಕ್ಷಣ ಮತ್ತು ಜ್ಞಾನ ಇವು ನಮ್ಮ ಧ್ಯೇಯವಾಕ್ಯಗಳಾಗಿದ್ದು, ಈ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಶ್ರಮದಾನ ಮಾಡಲಾಗುವುದು ಎಂದರು.
ಕಲಂದರ ಕನವಳ್ಳಿ ಸ್ವಾಗತಿಸಿದರು. ಶಶಿಧರ ಹೊಸಳ್ಳಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಹನುಮಂತಪ್ಪ ಈಳಗೇರ ಕಾರ್ಯಕ್ರಮ ನಿರ್ವಹಿಸಿದರು. ಗಿರೀಶ ಓಲೇಕಾರ ವಂದಿಸಿದರು. ಅನಂತರ ಶಾಲಾ ವಿದ್ಯಾರ್ಥಿಗಳು ಹಾಗೂ ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

