ಹಾವೇರಿ

ನೀರು ಲಭಿಸಿದ್ದು ನಮ್ಮ ಅದೃಷ್ಟ: ಗಣಾಚಾರಿ

Published On :

ಶಿಗ್ಗಾಂವಿ: ನೀರು ಸರಬರಾಜು ಯೋಜನೆಯಡಿ ಕೊಳವೆ ಬಾವಿಯನ್ನು ಕೊರೆಸಿದ್ದು ಇಲ್ಲಿ ಮೂರು ಇಂಚು ನೀರು ಬಿದಿದ್ದು ನಮ್ಮ ಅದೃಷ್ಟ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸಂಘಟನಾ ಕಾರ್ಯದರ್ಶಿ ಶೇಖಣ್ಣಾ ಗಣಾಚಾರಿ ಅಭಿಪ್ರಾಯಪಟ್ಟರು.
ತಾಲೂಕಿನ ಹುಲಗೂರು ಗ್ರಾಮದ ದರ್ಗಾದ ಬಾಜು ಇರುವ ಕೆರೆಯ ಹತ್ತರ ನೀರು ಸರಬರಾಜು ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿದ ನಂತರ ಮೂರು ಇಂಚು ನೀರು ಬಿದ್ದ ಮೇಲೆ ಪೂಜೆ ಸಲ್ಲಿಸಿ ಗಣಾಚಾರಿ ಮಾತನಾಡಿದರು.
ಶೀಘ್ರ ನೀರು ಪೂರೈಸಿ: ಅಂತರ್ಜಲ ಮಟ್ಟ ತೀವ್ರ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಗ್ರಾಮದಲ್ಲಿ ಕೊಳವೆಬಾವಿ ಮೂಲಕ ಮೂರು ಇಂಚು ನೀರು ಬಿದ್ದಿದ್ದು ತಕ್ಷಣ ಅದಕ್ಕೆ ವಿದ್ಯುತ್ ಮೋಟಾರ್ ಅಳವಡಿಸಿ ದರ್ಗಾದಲ್ಲಿರುವ ಜಲಾಗಾರದವರೆಗೆ ಪೈಪ್ಲೈನ್ ಅಳವಡಿಸಿ ತಕ್ಷಣ ನೀರು ಸರಬುರಾಜು ಮಾಡುವಂತೆ ಅಧಿಕಾರಿಗಳಿಗೆ ಶೇಖಣ್ಣಾ ಗಣಾಚಾರಿ ಆಗ್ರಹಿಸಿದರು.
ಈ ಸಂದರ್ಭ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ರುದ್ರಪ್ಪ ಕೆಳಗಿನಮನಿ, ಸದಸ್ಯ ಕಲೀಂ ಫೀರ ಖಾದ್ರಿ, ಮನೋಹರ ಕುಲಕರ್ಣಿ, ಹಜರೇಸಾಬ ಕಾರಡಗಿ, ಮಲ್ಲಿಕಾರ್ಜುನಗೌಡ ದ್ಯಾಪನಗೌಡ್ರ, ಜಾಕೀರ ಖತೀಬ, ಅಬ್ದುಲ್ ಕರೀಂ ಕಲೇಗಾರ, ನೀಲಪ್ಪ ಎಲವಗಿ, ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.