ಕೈ ಬೆಂಬಲಿಸಲು ಜನತೆ ಕಾತರ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 1
ಜೆಡಿಎಸ್ ಮತ್ತು ಬಿಜೆಪಿ ಸಮಿಶ್ರ ಸರ್ಕಾರವಿದ್ದ ಸಮಯ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿಗೆ ಸಿಎಂ ಸ್ಥಾನ ಬಿಟ್ಟು ಕೊಡಲಿಲ್ಲವೆಂಬ ಕಾರಣದಿಂದ ಬೇಸರಗೊಂಡಿದ್ದ ರಾಜ್ಯದ ಜನತೆ ಮತದಾನ ಮೂಲಕ ಬಿಜೆಪಿಗೆ ನೀಡಿದ್ದ ಅಧಿಕಾರವನ್ನು ಅಂದು ಬಿಜೆಪಿಯಲ್ಲಿದ್ದು, ಇಂದು ಕೆಜೆಪಿಯಲ್ಲಿ ಗುರುತಿಸಿಕೊಂಡಿರುವ ನಾಯಕರು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದನ್ನು ಕಣ್ಣಾರೆ ಕಂಡಿರುವ ರಾಜ್ಯದ ಮತದಾರರಿಂದು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ಪಕ್ಷದ ಮುಖಂಡ ಡಿ.ಕೆ. ಶಿವಕುಮಾರ ಹೇಳಿದರು.
ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಕೆ.ಬಿ. ಕೋಳಿವಾಡರ ಪರ ಮತ ಯಾಚಿಸುವುದಕ್ಕಾಗಿ ನಗರದ ಪೋಸ್ಟ್ ಸರ್ಕಲ್‌ನಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಕುಮಾರಸ್ವಾಮಿ ಅಚಾತುರ್ಯ: ಜೆಡಿಎಸ್ ಮತ್ತು ಬಿಜೆಪಿ ಸಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಪೂರ್ವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪನವರು ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ 20 ತಿಂಗಳ ನಂತರ ಕುಮಾರಸ್ವಾಮಿಯವರು ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದರ ಫಲವಾಗಿ ಕೊಪಗೊಂಡಿದ್ದ ರಾಜ್ಯದ ಮತದಾರ ಪ್ರಭುಗಳು ಮೊಸಳೆ ಕಣ್ಣಿರು ಸುರಿಸುತ್ತಿದ್ದ ಬಿ.ಎಸ್. ಯಡಿಯೂರಪ್ಪನವರ ಪಕ್ಷವಾಗಿದ್ದ ಬಿಜೆಪಿಗೆ ಮತ ನೀಡಿ ದೇಶದ ಇತಿಹಾಸದಲ್ಲಿಯೇ ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಕರ್ನಾಟಕದಲ್ಲಿ ಆಡಳಿತ ಜವಾಬ್ದಾರಿ ವಹಿಸಿಕೊಂಡಿತು.
ನಾಚಿಕೆಗೆಡಿ ಕಾರ್ಯ: ಆದರೆ, ಬಿಜೆಪಿ ನಾಯಕರು, ಮಧ್ಯೆದಲ್ಲಿ ತಮಗೆ ಅಧಿಕಾರ ನೀಡಿದ ಜನತೆಯ ಸೇವೆ ಮಾಡುವ ಬದಲು ರಾಜ್ಯದ ಖನಿಜ ಸಂಪತ್ತನ್ನು ಹೊರ ರಾಜ್ಯಕ್ಕೆ ಮಾರಿ ಶ್ರೀಮಂತರಾಗಲು ಹಾಗೂ ತಮಗೆ ಅಧಿಕಾರ ನೀಡಿರುವ ರೈತರ ಮೇಲೆ ಗೊಲಿಬಾರ್ ಮಾಡಲು, ರೈತರ ಕೈಗಳಿಗೆ ಕೊಳ ತೊಡಿಸಲು, ಮನೆಯಲ್ಲಿ ನಿಶ್ಚಿಂತೆಯಿಂದಿರುವ ಮಹಿಳೆಯರ ನೆಮ್ಮದಿ ಹಾಳು ಮಾಡಲು, ಪವಿತ್ರ ವಿಧಾನಸೌಧದಲ್ಲಿ ಕುಳಿತು ನೀಲಿ ಚಿತ್ರ ವಿಕ್ಷಿಸುವುದಕ್ಕಾಗಿ ಜನತೆ ನೀಡಿದ್ದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಮಾಧ್ಯಮದ ಮೂಲಕ ಕಣ್ಣಾರೆ ಕಂಡು ಬೇಸರಗೊಂಡಿರುವ ರಾಜ್ಯದ ಮತದಾರರು ಇಂದು ಬಿಜೆಪಿ, ಕೆಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ಧಿಕ್ಕರಿಸಿ ಕಾಂಗ್ರೆಸ್‌ಗೆ ಮತ ನೀಡಲು ಮುಂದಾಗಿದ್ದಾರೆ ಎಂದರು.
ಪರಿಶ್ರಮದ ಕೈಗೆ ಮತ ನೀಡಿ: ಬಿಜೆಪಿ, ಕೆಜೆಪಿ, ಜೆಡಿಎಸ್ ಜಾತಿ ರಾಜಕಾರಣದ ಪಕ್ಷಗಳು. ರಾಜ್ಯದ ಎಲ್ಲಾ ಜಾತಿ ಜನಾಂಗದವರ ಪಕ್ಷವೆಂದೆ ಕರೆಯಲ್ಪಡುವ ಹಾಗೂ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಾಣತ್ಯಾಗವನ್ನು ಮಾಡಿರುವ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಜಾತ್ಯತೀತತೆಯಿಂದ ರಾಷ್ಟ್ರದ ಜನತೆಯ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಲು ರಾಜ್ಯದ ಜನತೆ ಮುಂದಾಗಿ ಎಂದರು.
ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ರುಕ್ಮಿಣಿ ಸಾಹುಕಾರ, ಅಭ್ಯರ್ಥಿ ಕೆ.ಬಿ. ಕೋಳಿವಾಡ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಕಂಬಳಿ, ನಗರಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಮುಖಂಡರಾದ ರವಿಂದ್ರಗೌಡ ಎಫ್. ಪಾಟೀಲ, ಶೇರುಖಾನ್ ಖಾಬೂಲಿ, ಬಸಪ್ಪ ಗಡಗೂರು, ರಂಗರಡ್ಡಿ ಕೆಂಚರಡ್ಡೇರ, ಪ್ರಕಾಶ ಕೋಳಿವಾಡ, ಶೇರಿನ್ ತಾಜ್ ಶೇಖ, ಬಿಬಿಜಾನ ನಂದ್ಯಾಲ, ಹಾಲಪ್ಪ ಲಮಾಣಿ, ಮುಖಂಡರು, ಅಭಿಮಾನಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

