ಹಾವೇರಿ

ರಾಮರಾಜ್ಯಕ್ಕಾಗಿ ಕೆಜೆಪಿ ಬೆಂಬಲಿಸಿ: ಬಣಕಾರ

Published On :

ಹಿರೇಕೆರೂರು: ಮಾಜಿ ಮುಖ್ಯಮುಂತ್ರಿ ಬಿ.ಎಸ್. ಯಡಿಯೂಪ್ಪನವರ ರಾಮರಾಜ್ಯದ ಕನಸನ್ನು ನನಸು ಮಾಡಲು ಕೆಜೆಪಿಗೆ ಮತ ನೀಡುವಂತೆ ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ. ಬಣಕಾರ ಮನವಿ ಮಾಡಿದರು.
ರಟ್ಟಿಹಳ್ಳಿ ಗ್ರಾಮದಲ್ಲಿ ರೋಡ್ ಶೋ ನಡೆಸಿದ ಅವರು, ತಾಲೂಕಿನ 126 ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಮತದಾರರ ಮನೆ ಮನೆಗೆ ತೆರಳಿ ಬಿಎಸ್‌ವೈ ಅವಧಿಯ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ವಿವರಿಸಲಾಗಿದೆ. ತಾಲೂಕಿನಲ್ಲಿ 10 ವರ್ಷಗಳ ದುರಾಡಳಿತವನ್ನು ಕೊನೆಗಾಣಿಸಲು ಮತದಾರರು ನಿರ್ಧರಿಸಿದ್ದಾರೆ. ಕೆಜೆಪಿ ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ ಎಂದರು.
ತಮ್ಮನ್ನು ಆಯ್ಕೆ ಮಾಡಿದರೆ ಹಿರೇಕೆರೂರನ್ನು ಮಾದರಿ ತಾಲೂಕಾಗಿ ಮಾಡಲಾಗುವುದು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು. ಮತದಾರರು ಆಯ್ಕೆ ಮಾಡಿದರೆ ದುರುಪಯೋಗ ಮಾಡಿಕೊಳ್ಳದೆ ಋಣ ತೀರಿಸುವುದಾಗಿ ಭರವಸೆ ನೀಡಿದರು.
ಎಸ್.ಬಿ. ಪಾಟೀಲ, ದಾನಪ್ಪಗೌಡ ಮಾಜಿಗೌಡ್ರ, ರವಿ ಮುದಿಯಪ್ಪನವರ, ಅಲ್ಲಾಭಕ್ಷ ಗಂಗಾಪುರ, ಜಾಫರ ಖಾಜಿ, ರಿಯಾಜ ಆಹ್ಮದ್ ನರಗುಂದಕರ, ತಾಪಂ ಮಾಜಿ ಸದಸ್ಯ ಆನಂದಪ್ಪ ಹಾದಿಮನಿ, ನಾಗರಾಜ ಮಲ್ಲೂರ, ಕಾರ್ಯಕರ್ತರಾದ ಮಹೇಂದ್ರ ಬಡಳ್ಳಿ ಪಾಲ್ಗೊಂಡಿದ್ದರು. ಮಧ್ಯಾಹ್ನ 3ಕ್ಕೆ ಆರಂಭಗೊಂಡ ಮೆರವಣಿಗೆ ಭಾರಿ ಜನಸ್ತೋಮದೊಂದಿಗೆ ಅದ್ಧೂರಿಯಾಗಿ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.