ಜನತೆ ಋಣ ತೀರಿಸಲು ಸಿದ್ಧ: ಬನ್ನಿಕೋಡ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 3
ಹಿರೇಕೆರೂರು ವಿಧಾನಸಭಾ ಪಕ್ಷೇತರ ಅಭ್ಯರ್ಥಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಮತ ಯಾಚನೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಬನ್ನಿಕೋಡ ಪರ ಘೋಷಣೆ ಕೂಗಿದರು.
ಜಿ.ಬಿ. ಶಂಕರರಾವ್ ವೃತ್ತದಿಂದ ಆರಂಭವಾದ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಂಚರಿಸಿ ನಂತರ ವಿವಿಧ ವಾರ್ಡ್ಗಳಿಗೆ ತೆರಳಿ ಮತ ಯಾಚಿಸಲಾಯಿತು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅಭ್ಯರ್ಥಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಕ್ಷೇತ್ರದ ಎಲ್ಲಾ ಹಳ್ಳಿಗೆ ಭೇಟಿ ನೀಡಿ ಪ್ರತಿಯೊಂದು ಮನೆಗೆ ತೆರಳಿ ಮತ ಯಾಚಿಸಿದ್ದೇನೆ. ಎಲ್ಲ ಗ್ರಾಮಗಳಲ್ಲಿ ಜನತೆ ಸ್ವಯಂಪ್ರೇರಿತವಾಗಿ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಜನತೆಯೇ ನನಗೆ ಹಣ ನೀಡಿ ಚುನಾವಣೆ ನಡೆಸಿ ಋಣಭಾರ ಹೆಚ್ಚಿಸುತ್ತಿದ್ದಾರೆ. ನಾನು ಜನತೆಯ ಋಣ ತೀರಿಸಲು ಸದಾ ಸಿದ್ಧನಿದ್ದೇನೆ ಎಂದು ಹೇಳಿದರು. ತಾಲೂಕಿನಲ್ಲಿ 10 ವರ್ಷಗಳಿಂದ ನಡೆಯುತ್ತಿರುವ ದುರಾಡಳಿತಕ್ಕೆ ಕೊನೆಗಾಣಿಸಲು ಜನತೆ ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತ, ಸ್ವಜನ ಪಕ್ಷಪಾತ ನಡೆಸುವ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆದಿದ್ದಾರೆ. ತಾಲೂಕಿನಲ್ಲಿ ನಾನು ಕೈಗೊಂಡಿರುವ ಶಾಶ್ವತ ಯೋಜನೆಗಳೇ ನನ್ನ ಗೆಲುವಿಗೆ ಕಾರಣವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಮುಖಂಡರಾದ ಅಶೋಕ ಪಾಟೀಲ, ಸುರೇಶಗೌಡ ಸೊರಟೂರ, ಎಚ್.ಎಸ್. ಕೋಣನವರ, ನಾರಾಣಪ್ಪ ಗೌರಕ್ಕನವರ, ಲೋಕಪ್ಪ ಸಂಕೊಳ್ಳಿ, ಕಲ್ಲನಗೌಡ ಮಾಳಗಿ, ವೀರಭದ್ರಪ್ಪ ಮಾಗನೂರ, ಪಪಂ ಸದಸ್ಯ ರಾಜಶೇಖರ ಹಂಪಾಳಿ, ಬೂದಿಗೌಡ ಭರಮಗೌಡ್ರ, ಬಿ.ಆರ್. ಪುಣ್ಣನವರ, ಪ್ರಭು ಭರಮಗೌಡ್ರ, ಕರೇಗೌಡ ಮಾಜಿಗೌಡ್ರ, ಬಿ.ಕೆ. ಕುರಿಯವರ, ಐ.ಬಿ. ಗುಬ್ಬಿ, ಅಲ್ಲಾಭಕ್ಷ ಕನವಳ್ಳಿ, ಜಿ.ವಿ. ಕುಲಕರ್ಣಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

