ಹಾವೇರಿ

ರಾಜ್ಯ ಮಟ್ಟದ ಚರ್ಮವಾದ್ಯ ಸಮ್ಮೇಳನ

Published On :

ಹಾವೇರಿ: ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಜಾನಪದ ಸಂಗೀತ ಕ್ಷೇತ್ರದಲ್ಲಿ ಕಲಾವಿದರು ಮೂಲ ಪರಂಪರೆಯ ಚರ್ಮವಾದ್ಯಗಳನ್ನು ಬಿಟ್ಟು ಪ್ಲಾಸ್ಟಿಕ್, ಫೈಬರ್ ವಾದ್ಯಗಳನ್ನು ಬಳಸುತ್ತಿರುವುದು ಕಂಡು ಬರುತ್ತಿದೆ. ಪರಂಪರೆಯ ಮೂಲ ಚರ್ಮವಾದ್ಯಗಳನ್ನು ತಯಾರು ಮಾಡಿಕೊಂಡು ಬಾರಿಸುವ ನಾದಕ್ಕೂ ಫೈಬರ್ ವಾದ್ಯಗಳ ನಾದಕ್ಕೂ ವ್ಯತ್ಯಾಸವಿದೆ.
ತಲೆಮಾರಿನಿಂದ ಚರ್ಮವಾದ್ಯಗಳ ನಾದವೇ ಮಾಧುರ್ಯ ಕೇಳಲು ಇಂಪು ಮೂಲ ತಲೆಮಾರಿನ ವಾದ್ಯಗಳನ್ನು ತಯಾರು ಮಾಡಿಕೊಂಡು ನುಡಿಸುವ ಪದ್ಧತಿಯನ್ನು ಕಲಾವಿದರಿಗೆ ಮೂಡಿಸುವ ಹಾಗೂ ಯುವಜನರಿಗೆ ಈ ವಾದ್ಯ ತಯಾರಿ ಕಾಡಿಕೊಳ್ಳುವ ಕಾರ್ಯಾಗಾರವನ್ನು ಏರ್ಪಡಿಸುವ ಉದ್ದೇಶದಿಂದ ಕರ್ನಾಟಕ ಜಾನಪದ ಅಕಾಡೆಮಿಯು ರಾಜ್ಯ ಮಟ್ಟದ ಚರ್ಮವಾದ್ಯ ತಯಾರಿಕಾ(ಕೆಲವು ಪ್ರಮುಖ ಜನಪ್ರಿಯ ವಾದ್ಯಗಳ) ಕಮ್ಮಟ, ನಂತರ ರಾಜ್ಯ ಮಟ್ಟದ ಚರ್ಮವಾದ್ಯ ಸಮ್ಮೇಳನ ಮತ್ತು ವಿದ್ವಾಂಸರಿಮದ ಜಾನಪದ ಚರ್ಮವಾದ್ಯಗಳ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ.
ಈ ಸಂಬಂಧವಾಗಿ ರಾಜ್ಯದಲ್ಲಿ ಪ್ರಚಲಿತವಿರುವ ಹಲಿಗೆ ವಾದನ, ಢಮರುಗ ವಾದನ(ಗೊರವರ ಮೇಳ), ಡೊಳ್ಳಿನ ಕೈಪೆಟ್ಟು, ನಗಾರಿ ವಾದ್ಯ, ಗಮಟೆ ವಾದ್ಯ, ಚಂಡೆ ವಾದ್ಯ, ಸೂರ್ಯ ವಾದ್ಯ, ಕರಡಿ ಮಜಲು, ಡೊಳ್ಳು ವಾದ್ಯ, ತಮಟೆ ವಾದನ, ಜಗ್ಗಲಿಗೆ ವಾದನ, ಮದ್ದಲೆ ವಾದನ, ಡಪ್ಪು ವಾದನ(ಗೀಗೀ ಮೇಳ), ಮದ್ದಲೆ ವಾದನ, ತಾರಸಿ ವಾದ್ಯ, ಚಂದ್ರ ವಾದ್ಯ, ಚೌಡಿಕೆ ವಾದ್ಯ, ಉರುಮೆ(ಅರೆವಾದ್ಯ), ಚಿಟ್ ಹಲಗೆ ವಾದನ, ಕೋಣಿಮಿವಾದ್ಯ, ದುಡಿವಾದ್ಯ, ಕಂಜರಿ ವಾದನ, ತಾಸೇ ವಾದನ, ಸಂಪ್ರದಾನಿ ವಾದನ, ರಣಹಲಿಗೆ ವಾದನದಂತ ಚರ್ಮವಾದ್ಯಗಳನ್ನು ಹಾಗೂ ಇನ್ನು ಬೆಳಕಿಗೆ ಬಾರದಿರುವ ಚರ್ಮವಾದ್ಯಗಳು ಒಳಗೊಂಡಂತೆ ಚರ್ಮವಾದ್ಯಗಳನ್ನು ತಯಾರಿಸುವವರು, ಚರ್ಮವಾದ್ಯ ಮೇಳಗಳ ಮುಖ್ಯಸ್ಥರು ತಮ್ಮ ಸಂಪೂರ್ಣ ವಿಳಾಸದೊಂದಿಗೆ ಮಾಹಿತಿಯನ್ನು 30-5-2013ರ ಒಳಗಾಗಿ, ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-560002 ಅವರಿಗೆ ಕಳುಹಿಸಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟಾರ್ ಬಿ.ಎನ್. ಪರಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.