ಹಾವೇರಿ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Published On :

ಹಿರೇಕೆರೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕಿನಾದ್ಯಂತ ಔಷಧಿ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಚಾವಡಿ ವೃತ್ತದಿಂದ ಮರವಣಿಗೆ ಮೂಲಕ ಮುಖ್ಯ ರಸ್ತೆಯ ಮಾರ್ಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಹಸೀಲ್ದಾರ್ ಕಚೇರಿ ಬಳಿ ಜಮಾವಣೆಗೊಂಡರು.
ಔಷಧಿ ವ್ಯಾಪಾರಿಗಳ ತಾಲೂಕು ಅಧ್ಯಕ್ಷ ಗಣಪತಿ ಜೀವಣ್ಣವರ, ಕೇಂದ್ರ ಸರ್ಕಾರದ ನ್ಯಾಯ ಸಮ್ಮತವಲ್ಲದ 2008ರ ಔಷಧ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ತಮಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಈ ಕಾಯ್ದೆಯನ್ನು ವಿರೋಧಿಸುತ್ತಿದೇವೆ, ಔಷಧ ವ್ಯಾಪಾರ ರಂಗದಲ್ಲಿ ಅಂತಾರಾಷ್ಟ್ರೀಯ ನೇರ ಹೂಡಿಕೆ ದೇಶಕ್ಕೆ ಮಾರಕವಾಗಿದೆ. ಎಫ್‌ಡಿಐಯನ್ನು ಸೇರ್ಪಡೆ ಮಾಡಬಾರದು. ಕೇಂದ್ರ ಸರ್ಕಾರದ ಹೊಸ ಔಷಧ ನಿಯಮಾವಳಿ ಪ್ರಕಾರ ಶೇಕಡಾವಾರು ಕಡಿತಗೊಳಿಸಿದ್ದರ ವಿರೋಧಿಸಿ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ಜಿಲ್ಲಾ ಜಂಟಿ ಸಹ ಕಾರ್ಯದರ್ಶಿ ರಾಜಕುಮಾರ ಮಡಿವಾಳರ, ಕೊಟ್ರೇಶ ಕಡಗಿ, ರವಿ ನಾಡಿಗೇರ, ಅಶೋಕ ಸಣ್ಣಕ್ಕಿ, ಉಮೇಶ ಭೀಮಕ್ಕನವರ, ಮಾಲತೇಶ ಜೀವಣ್ಣನವರ ಸೇರಿದಂತೆ ತಾಲೂಕಿನ ಮಾಸೂರು, ರಟ್ಟಿಹಳ್ಳಿ ಹಂಸಬಾವಿ ಹಾಗೂ ಕೋಡ ಗ್ರಾಮಗಳ ಎಲ್ಲ ಔಷಧ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.