ನಿರ್ಲಕ್ಷ್ಯದಿಂದ ಕಲೆಗೆ ಧಕ್ಕೆ: ಕೃಷ್ಣಸೆಟ್ಟಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 11
ಕರ್ನಾಟಕದಲ್ಲಿ ಕಲಾ ಶಾಲೆಗಳು ಖಾಲಿಯಾಗುತ್ತಿವೆ. ಪರಿಶ್ರಮವಿಲ್ಲದೆ ಸುಲಭವಾಗಿ ಕಲಾ ಪದವಿಗಳು ಸಿಗುತ್ತಿವೆ. ಕಲೆಗಿಂತ ಹಣದ ಲಾಲಸೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಸೆಟ್ಟಿ ವಿಷಾದ ವ್ಯಕ್ತಪಡಿಸಿದರು.
ಇಲ್ಲಿಯ ಸರ್ಕಾರಿ ನೌಕರರ ಭವನದಲ್ಲಿ ಗೆಳೆಯರ ಬಳಗ ಏರ್ಪಡಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಕಾಲಕ್ಕೆ ಶ್ರೇಷ್ಠತೆ ಹೊಂದಿದ್ದ ಕಲೆ ಇಂದು ಇಳಿಮುಖವಾಗಿದೆ. ಮುಕ್ತ ಶಿಕ್ಷಣ ವ್ಯಾಸಂಗ ಹಿನ್ನೆಲೆಯಲ್ಲಿ ಕಲೆಗೆ ಇರಬೇಕಾದ ಪರಿಶ್ರಮ ಮರೆಯಾಗಿದೆ ಎಂದು ಕೃಷ್ಣಸೆಟ್ಟಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಬಿ. ಕಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಪೋರೇಟ್ ಜಗತ್ತಿನ ಕಲಾವಿದರಿಗಿಂತ, ಜನರ ಬಳಿ ಇರುವ ಸಾಮಾನ್ಯ ಕಲಾವಿದನ ಬಗ್ಗೆ ನಾವೆಲ್ಲ ಆಲೋಚಿಸಬೇಕು. ಇಲ್ಲದಿದ್ದರೆ ಕಾಗದ ಹುಲಿಗಳಂತೆ ಘೋಷಣೆಗಳಲ್ಲಿ ಮಾತ್ರ ನಮ್ಮ ಮಾತು ಉಳಿಯುವ ಸ್ಥಿತಿ ಬರುತ್ತದೆ ಎಂದು ಹೇಳಿದರು.
ಡಾ. ಪಿ.ಟಿ. ಲಕ್ಕಣ್ಣನವರ ಮಾತನಾಡಿ, ಕಲಾವಿದರ ಮತ್ತು ಜನರ ನಡುವೆ ಬಾಂಧವ್ಯ ಬೆಳೆಸುವ ಕಲಾ ವಿಮರ್ಶೆಯ ಕೊರತೆ ತುಂಬಲು ಅಕಾಡೆಮಿ ಪುಸ್ತಕ ಪ್ರಕಟಣೆಗೆ ಆದ್ಯತೆ ನೀಡಬೇಕು ಎಂದರು.
ವೈ.ಬಿ. ಆಲದಕಟ್ಟಿ, ಕವಿವಿ ಪ್ರಾಧ್ಯಾಪಕ ಡಾ. ಮುದೇನೂರು ನಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಆರ್. ಹಿರೇಮಠ, ಟಿ.ವಿ. ಕಬಾಡಿ, ಲಿಂಗರಾಜ ಸೊಟ್ಟಪ್ಪನವರ, ಆರ್.ಸಿ. ಶಿವಪುರ, ಓಂಕಾರಣ್ಣನವರ, ಕಲಾವಿದರಾದ ರಾಘವನ್, ಶಿವು ಹಾದಿಮನಿ ಹಾಗೂ ಎಂ. ಜಾನವಿ, ನೆಲವಿಗಿ ಭಾಗವಹಿಸಿದ್ದರು.
ಶಿಕ್ಷಕಿ ಶಶಿಕಲಾ, ಶಂಕರ ನಂದಿಹಳ್ಳಿ, ಶಿವಣ್ಣ, ಜಮೀರ ಬಣಕಾರ, ರಿತ್ತಿ, ವಾಗೀಶ ಹೂಗಾರ, ಶಂಕರ ಕೆ., ರೇಣುಕಾ ಕೂಬಳ್ಳಿ, ಎಂಸಿಎ ಕೂಡಲಮಠ, ಹೂಗಾರ, ಗುಡಿಮನಿ, ಬಸಮ್ಮ ಅಶೋಕ ಎಣ್ಣಿಯವರ ಉಪಸ್ಥಿತರಿದ್ದರು.
ವಿ.ಎಂ. ಪತ್ರಿ ಸ್ವಾಗತಿಸಿದರು. ಕಲಾವಿದ ಕರಿಯಪ್ಪ ಹಂಚಿನಮನಿ ಪ್ರಾಸ್ತಾವಿಕ ಮಾತನಾಡಿದರು. ದೀಪಾ ಗೋನಾಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

