ಬಣಕಾರ ಗೆಲವು: ಹರಕೆ ತೀರಿಸಿದ ಅಭಿಮಾನಿಗಳು
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮೇ 11
ನೂತನ ಶಾಸಕರಾಗಿ ಯು.ಬಿ. ಬಣಕಾರ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮಾಜದ ಮುಖಂಡರು ಶುಕ್ರವಾರ ಪಟ್ಟಣದ ಅಬ್ದುಲ್ ವಹಾಬ್ ಶಾ ಖಾದ್ರಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, 101 ತೆಂಗಿನ ಕಾಯಿಗಳನ್ನು ಒಡೆದು ಹರಕೆ ತೀರಿಸಿದರು.
ನೂತನ ಶಾಸಕ ಯು.ಬಿ. ಬಣಕಾರ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿ, ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ನನ್ನನ್ನು ಬೆಂಬಲಿಸಿದ್ದಾರೆ. ಅವರ ಸಮಗ್ರ ಅಭಿವೃದ್ಧಿಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
10 ವರ್ಷಗಳಿಂದ ಅಲ್ಪಸಂಖ್ಯಾತರ ಇಲಾಖೆಯಿಂದ ಇರುವ ಯೋಜನೆಗಳ ಸದುಪಯೋಗ ಆಗಿಲ್ಲ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಮುಸ್ಲಿಂ ಸಮಾಜದ ಮುಖಂಡರ ಸಭೆ ನಡೆಸಿ ಸರ್ಕಾರದ ಯೋಜನೆಗಳು ಅರ್ಹರಿಗೆ ಪ್ರಾಮಾಣಿಕವಾಗಿ ತಲುಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಪಪಂ ಸದಸ್ಯ ಮುಜೀಬ್ ರಿಕಾರ್ಟಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ, ಗುಲಾಬ್ಶಾ ಮಕಾಂದಾರ, ಮದನ್ಶಾ ಮಕಾಂದಾರ, ಅಂಜುಮನ್ ಸಮಿತಿಯ ಮಾಜಿ ಅಧ್ಯಕ್ಷ ಜಾಕೀರ್ ರಿಕಾರ್ಟಿ, ನಿಸಾರ್ ಬಾಳಂಬೀಡ, ರಜಾಕ್ ಸವಣೂರ, ಜಿಯಾ ಮಕಾಂದಾರ, ಬಾಷಾ ಚಿಕ್ಕೇರೂರ, ಶಫಿ ಖಾದ್ರಿ, ಸಾದಿಕ್ ಅಪರಂಜಿ, ನಿಸಾರ್ ರಟ್ಟಿಹಳ್ಳಿ, ಅಜ್ಮತ್ ಮ್ಲುಲಾ, ದಾವೂದ್ ಐ.ಬಿ, ಖಾಸಿಂ ಅಲಿ, ಸಾದಿಕ್ ಮಕಾಂದಾರ, ಹಮೀದ್ ಎತ್ತಿನಹಳ್ಳಿ, ಅಕ್ಬರ್ ಹಲಗೇರಿ, ಜಿಯಾ ಲೋಹಾರ್, ರಹಫತ್ಖಾನ್ ಪಠಾಣ, ಶೇಖ್ ಅಲಿ, ನಸ್ರು ಹುಬ್ಬಳ್ಳಿ, ನೂರುಲ್ಲಾ ಮಾಸೂರ, ಶಬ್ಬೀರ್ ಹಳಿಯಾಳ, ದತ್ತಾತ್ರೇಯ ರಾಯ್ಕರ, ರಾಮು ಚಿಗಮರದ, ರವಿ ನಾಯ್ಕರ, ಸುರೇಶ ಕಲಾಲ, ಸೋಮಣ್ಣ ಚಪ್ಪರದಹಳ್ಳಿ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

