ರೋಗಿಗಳ ಅನುಕೂಲಕ್ಕೆ ಶಿಬಿರ: ಡಾ. ಪಾಟೀಲ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 12
ಕಡಿಮೆ ವೆಚ್ಚದಲ್ಲಿ ಗುಣಪಡಿಸಿಕೊಳ್ಳಬಹುದಾದ ಕೀಲು ಮತ್ತು ಮೂಳೆ ರೋಗವನ್ನು ದೊಡ್ಡ ಪ್ರಮಾಣದ ವೆಚ್ಚದಲ್ಲಿ ಗುಣಪಡಿಸಿಕೊಳ್ಳಲು ದೂರದ ಬೆಂಗಳೂರಿಗೆ ಹೋಗುವ ರೋಗಿಗಳ ಸಂಖ್ಯೆ ನಿತ್ಯ ಹೆಚ್ಚಾಗಿರುವ ಕಾರಣ ರಾಜ್ಯಾದ್ಯಂತ ವಿವಿಧ ಸಂಘ-ಸಂಸ್ಧೆಗಳ ಸಹಕಾರದೊಂದಿಗೆ ಉಚಿತ ತಪಾಸಣೆ ಹಾಗೂ ಔಷಧಿ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಬೆಂಗಳೂರು ಸ್ಪರ್ಶ್ ಆಸ್ಪತ್ರೆ ಪ್ರಧಾನ ವೈದ್ಯ ಡಾ. ಶರಣ್ ಪಾಟೀಲ ಹೇಳಿದರು.
ಸ್ಪರ್ಶ್ ಆಸ್ಪತ್ರೆ ಬೆಂಗಳೂರು-ದಾವಣಗೆರೆ, ಜೆಸಿಐ ಸಂಸ್ಥೆ ರಾಣಿಬೆನ್ನೂರು ಆಶ್ರಯದಲ್ಲಿ ನಗರದ ರಾಜರಾಜೇಶ್ವರಿ ಕಾಲೇಜಿನ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಕೀಲು ಮತ್ತು ಮೂಳೆ ಸಮಸ್ಯೆಗಳ ಚಿಕಿತ್ಸೆ ಹಾಗೂ ಔಷಧಿ ವಿತರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೈತರಲ್ಲಿ ಕಂಡು ಬರುವ ಸಮಸ್ಯೆ: 7 ವರ್ಷಗಳಿಂದ ನಾನು ಗಮನಿಸುತ್ತಿರುವ ಅಂಶಗಳ ಪ್ರಕಾರ ದೇಶದ ಬೆನ್ನೆಲುಬೆಂದು ಕರೆಸಿಕೊಂಡಿರುವ ರಾಜ್ಯದ ಹಲವಾರು ಊರುಗಳಲ್ಲಿನ ಬಡವರು, ರೈತರು, ಕೂಲಿಕಾರ್ಮಿಕರು ನಿತ್ಯ ಅನುಭವಿಸುತ್ತಿರುವ ಕಿಲು-ಮೂಳೆ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯದೆ ನಿರ್ಲಕ್ಷದಿಂದ ವರ್ತಿಸಿ ರೋಗದ ಪ್ರಮಾಣ ಹೆಚ್ಚಾದ ಬಳಿಕ ದೊಡ್ಡ ಪ್ರಮಾಣದ ವೆಚ್ಚದಲ್ಲಿ ಗುಣಪಡಿಸಿಕೊಳ್ಳುವುದಕ್ಕಾಗಿ ದೂರದ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಿದ್ದೇನೆ.
224 ತಾಲೂಕು, ಜಿಲ್ಲಾ ಕೇಂದ್ರದಲ್ಲಿ: ಮಾನವಿಯ ದೃಷ್ಟಿಯಿಂದ ರಾಜ್ಯದ 224 ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿರುವ ವಿವಿಧ ಸಂಘ-ಸಂಸ್ಧೆಗಳ ಸಹಕಾರದೊಂದಿಗೆ ತಾಲೂಕು ಮಟ್ಟದಲ್ಲಿ ಕೀಲು ಮತ್ತು ಮೂಳೆಗಳ ಸಮಸ್ಯೆಗಳಿಗೆ ಉಚಿತ ತಪಾಸಣೆ ಹಾಗೂ ಔಷಧಿ ವಿತರಣಾ ಶಿಬಿರಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಬೆಂಗಳೂರು, ದಾವಣಗೆರೆ ಆಸ್ಪತ್ರೆ ಸಹಯೋಗ: ದೇಶದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ತಂದೆಯವರಾದ ಶಿವರಾಜ ಪಾಟೀಲರು ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿಯೇ ರಾಜ್ಯದ ಬಡವರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸೇವೆ ಮಾಡಲು ರಾಜಧಾನಿ ಬೆಂಗಳೂರು ಮತ್ತು ದಾವಣಗೆರೆಯಲ್ಲಿರುವ ಸ್ಪರ್ಶ್ ಕೀಲು ಮತ್ತು ಮೂಳೆ ಚಿಕಿತ್ಸಾ ಆಸ್ಪತ್ರೆಯಿಂದ ಈ ಕಾರ್ಯಕ್ರಮ ಹಾಕಿಕೂಂಡಿದ್ದೇವೆ.
ಶೀಘ್ರ ಶಾಖೆಗಳು ಪ್ರಾರಂಭ: ರಾಜ್ಯಾದ್ಯಂತ ಜನರ ಬೇಡಿಕೆ ಹೆಚ್ಚಾಗಿರುವ ಕಾರಣ ಈಗಾಗಲೇ ಕಳೆದ 4 ವರ್ಷಗಳ ಹಿಂದೆ ದಾವಣಗೆರೆಯಲ್ಲಿ 3ನೇ ಶಾಖಾ ಆಸ್ಪತ್ರೆಯನ್ನು ಪ್ರಾರಂಭಿಸಿದ್ದು, ಜೂನ್ ಅಂತ್ಯದೊಳಗೆ ಕೋಲಾರ, ಏಪ್ರೀಲ್ ಅಂತ್ಯದೊಳಗಾಗಿ ರಾಯಚೂರಿನಲ್ಲಿ ಸ್ಪರ್ಶ್ ಶಾಖಾ ಆಸ್ಪತ್ರೆಗಳನ್ನು ಪ್ರಾರಂಭಿಸಲು ಸಕಲ ಸಿದ್ಧತೆಗಳನ್ನು ಪೂರೈಸಿದ್ದೇವೆ. ಈಗಾಗಲೆ ರಾಜ್ಯದ ಕನಕಪುರ, ಚಿತ್ರದುರ್ಗ, ದಾವಣಗೆರೆ, ಹಾವೇರಿ ನಗರಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧಿ ವಿತರಣಾ ಶಿಬಿರಗಳನ್ನು ನಡೆಸಿ ಜನರ ಪ್ರೀತಿಗೆ ಪಾತ್ರರಾಗಿದ್ದೇವೆ ಎಂದು ಡಾ. ಶರಣ ಶಿವರಾಜ ಪಾಟೀಲ ಹೇಳಿದರು.
ರಾಣಿಬೆನ್ನೂರು ಜೆಸಿಐ ಸಂಸ್ಥೆ ಅಧ್ಯಕ್ಷ ಪ್ರಭು ಹಲಗೇರಿ, ರಾಜರಾಜೇಶ್ವರಿ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ಜೆಸಿಐ ಸಂಸ್ಥೆಯ ವಲಯ 24ರ ಅಧ್ಯಕ್ಷ ಚಂದ್ರಾಮಪ್ಪ, ಡಾ. ಮನೋಜ ಸಾಹುಕಾರ, ಬಿ.ಎಸ್. ಪಾಟೀಲ, ಎಫ್.ಎಚ್. ಗಚ್ಚಿನಮಠ, ಮುಕ್ತೇಶ ಕುರುಗುಂದಮಠ ಉಪಸ್ಥಿತರಿದ್ದರು.
ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಆಗಮಿಸಿದ್ದ ವಿವಿಧ ರೋಗಗಳ ಸಾವಿರಾರು ಜನರು ಉಚಿತವಾಗಿ ಚಿಕಿತ್ಸೆ ಹಾಗೂ ಔಷಧಿ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

