23ರಿಂದ ಆಡೂರು ಮಾಲತೇಶ ಜಾತ್ರೆ
ಹಾನಗಲ್ಲ: ತಾಲೂಕಿನ ಆಡೂರು ಗ್ರಾಮದ ಶ್ರೀ ಮಾಲತೇಶ ದೇವರ ಜಾತ್ರೋತ್ಸವ ಮೇ 23ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಮೇ 23ರಂದು ಶ್ರೀ ಮಾಲತೇಶ ದೇವರಿಗೆ ರುದ್ರಾಭಿಷೇಕ, ರುದ್ರಹೋಮ, ಕಂಕಣಧಾರಣ ಹಾಗೂ ಅನ್ನ ಸಂತರ್ಪಣೆ, 24ರಂದು ರಾತ್ರಿ 9ಕ್ಕೆ ಪುಷ್ಪ ರಥೋತ್ಸವ ಜರುಗುವುದು. ಮೇ 25ರಂದು ಬೆಳಗ್ಗೆ 11.30ಕ್ಕೆ ಶ್ರೀ ಮಾಲತೇಶ ದೇವರ ರಥಾರೋಹಣ ನಡೆಯಲಿದೆ. ರಾತ್ರಿ 10 ಗಂಟೆಗೆ ಸಕಲವಾದ್ಯ ವೈಭವಗಳೊಂದಿಗೆ ರಥ ದೇವಸ್ಥಾನವಿರುವ ಗುಡ್ಡದಿಂದ ಇಳಿದು ಆಡೂರು ಗ್ರಾಮ ಪ್ರವೇಶಿಸಿ, ಪ್ರಮುಖ ಬೀದಿಯಲ್ಲಿ ಸಂಚರಿಸಲಿದೆ. 26ರಂದು ರಥ ಊರಲ್ಲಿ ನಿಲ್ಲುವುದು. ರಥದ ಎದುರಿಗೆ ಭಕ್ತರು ಶಿವಕೀರ್ತನೆ ಹಾಗೂ ಭಜನಾ ಸೇವೆ ಸಲ್ಲಿಸುವರು. 27ರಂದು ಮಧ್ಯಾಹ್ನ ರಥ ಮರಳಿ ಗುಡ್ಡ ಏರುವುದು.
ಸಾಮೂಹಿಕ ವಿವಾಹ: ಜಾತ್ರೆ ಸಂದರ್ಭದಲ್ಲಿ ಮೇ 25ರಂದು ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಆಸಕ್ತರು ಎನ್.ಬಿ. ಪೂಜಾರ (ಮೊ. 9481927300), ಎಂ.ಎಂ. ನಿಕ್ಕಂ (ಮೊ. 9740201145) ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಸರ್ಕಾರದ ಆದರ್ಶ ವಿವಾಹ ಯೋಜನೆಯಡಿ ಕೊಡುವ ರು. 10 ಸಾವಿರ ಸಹಾಯಧನ ಪಡೆಯಲು ವಧು-ವರರು ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

