ಹಾವೇರಿ

ರೈತನ ಚಿತ್ತ ಮಳೆರಾಯನತ್ತ...

Published On :

- ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮೇ 13
ಗದಗ ಜಿಲ್ಲೆಯು ಸಂಪೂರ್ಣ ಕೃಷಿಯನ್ನೇ ಆರ್ಥಿಕ ಹಿನ್ನೆಲೆಯನ್ನಾಗಿದ್ದು, ಕಳೆದ ಎರಡು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಲಿಲ್ಲ. ಆದರೆ, ಪ್ರಸಕ್ತ ವರ್ಷದಲ್ಲಾದರೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿ ಎನ್ನುವ ಆಶಾಭಾವನೆಯೊಂದಿಗೆ ಜಿಲ್ಲೆಯ ಎಲ್ಲ ರೈತರು ಚಿತ್ತವೀಗ ಮಳೆರಾಯನತ್ತ ನೆಟ್ಟಿದೆ.
ಜಿಲ್ಲೆಯ ರೈತರು ಹೊಲಗಳನ್ನು ಹದಗೊಳಿಸಿದ್ದಾರೆ. ಉತ್ತಮ ಮಳೆ ಬಿದ್ದರೆ ಸಾಕು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ಬಿತ್ತನೆ ಬೀಜ ಸಂಗ್ರಹಿಸಿದ್ದಾರೆ. ಹದಗೊಳಿಸಿದ ಹೊಲಗಳಿಗೆ ಕೊಟ್ಟಿಗೆ(ತಿಪ್ಪೆ) ಗೊಬ್ಬರ ಹಾಕಲಾಗಿದೆ. ಜಿಲ್ಲೆಯ 5 ತಾಲೂಕುಗಳಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಷ್ಟು ಮಳೆಯಾದಲ್ಲಿ 2. 14 ಲಕ್ಷ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
ಇನ್ನಷ್ಟು ಮಳೆ ಬರಲಿ: ಕಳೆದ ಏಪ್ರಿಲ್ 14 ಹಾಗೂ 27ರಂದು ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಸುರಿದ ಮಳೆಯಿಂದಾಗಿ ರೈತರು ಹೊಲಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. (ಹರಗಿ), ಇನ್ನು ಕೆಲ ತಾಲೂಕುಗಳಲ್ಲಿ ಇಂದಿಗೂ ಮಳೆಯಾಗದ್ದರಿಂದ ರೈತರಿಗೆ ಭೂಮಿ ಹದಗೊಳಿಸಲು ಸಾಧ್ಯವಾಗಿಲ್ಲ. ಹಾಗಾಗಿ ರೈತರು ಆಕಾಶದತ್ತ ನೋಡುವಂತಾಗಿದೆ. ಹಗಲೆಲ್ಲಾ ಅತಿಯಾದ ಬಿಸಿಲಿನಿಂದ ಕೂಡಿದ ವಾತಾವರಣ ಕಂಡು ಬಂದು ಸಂಜೆಯಾಗುತ್ತಿದ್ದಂತೆ ಮಳೆಯ ಸೂಚನೆ ಕಾಣದಿರುವುದು ರೈತರ ಆತಂಕಕ್ಕೆ ಕಾರಣವಾಗಿದ್ದು, ಇನ್ನಷ್ಟು ಮಳೆ ಬೇಗನೇ ಬರಲಿ ಎನ್ನುವ ಆಶಾಭಾವನೆ ರೈತರಲ್ಲಿ ಒಡಮೂಡಿದೆ.

ರೈತರಲ್ಲಿ ಆಶಾಭಾವನೆ
ಉತ್ತರ ಕರ್ನಾಟಕದಲ್ಲಿ ಮಳೆಗಾಲ ಆರಂಭದ ಅಶ್ವಿನಿ ಮಳೆಯಾದಲ್ಲಿ ಮುಂದಿನ ಹಲವು ತಿಂಗಳು ಮಳೆಯಾಗಲ್ಲ ಎನ್ನುವ ವಾಡಿಕೆ ಮಾತಿದೆ. ಈ ಬಾರಿ ಅಶ್ವಿನಿ ಮಳೆಯಾಗಿದ್ದರೂ ನಂತರದ ಭರಣಿ ಮಳೆ ಜಿಲ್ಲೆಯ ಕೆಲ ಕಡೆ ಸುರಿದಿದೆ. ಈ ಬಾರಿ ಭರಣಿ, ಕೃತಿಕಾ ಹಾಗೂ ರೋಹಿಣಿ ಮಳೆಗಳು ಸಕಾಲದಲ್ಲಿ ಸುರಿಯಲಿವೆ ಎನ್ನುವ ಆಶಾಭಾವನೆ ರೈತರಲ್ಲಿ ಮೂಡಿದೆ. ಆದರೆ, ಹಗಲೆಲ್ಲಾ ಮಳೆಯಾಗುವ ಲಕ್ಷಣಗಳಿದ್ದು ರಾತ್ರಿಯ ವೇಳೆಗೆ ಅತಿಯಾದ ಗಾಳಿ ಬೀಸುತ್ತಿರುವುದು. ರೈತರಲ್ಲಿ ಆಂತಕವನ್ನು ಮತ್ತಷ್ಟು ಇಂಬುಗೊಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.